ಮತ್ತದೇ ಮಹಾ ಎಡವಟ್ಟು, ವಿಶ್ವಕಪ್ ಗೆ ತಂಡ ಘೋಷಣೆ ಮಾಡಿದ ಭಾರತ. ಅವಕಾಶ ಪಡೆದವರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತೀಯ ಕ್ರಿಕೆಟ್ ತಂಡ ಇತ್ತೀಚಿಗಷ್ಟೇ, ಯುಎಇ ನಲ್ಲಿ ನಡೆದಿರುವ ಏಷ್ಯಾ ಕಪ್ ಟೂರ್ನಮೆಂಟ್ ಅನ್ನು ಅತ್ಯಂತ ಕಳಪೆಯಾಗಿ ಮುಗಿಸಿದ ನಂತರ ಇದೇ ಅಕ್ಟೋಬರ್ 16ರಂದು ಪ್ರಾರಂಭವಾಗಲಿರುವ ಟಿ20 ವಿಶ್ವಕಪ್ ಗೆ ತಯಾರಾಗಿದೆ. ಭಾರತೀಯ ಕ್ರಿಕೆಟ್ ಸಂಸ್ಥೆಯಾಗಿರುವ ಬಿಸಿಸಿಐ ನ ಆಯ್ಕೆಗಾರರು ಸಾಕಷ್ಟು ಗಂಟೆಗಳ ಚರ್ಚೆಯ ನಂತರ ಕೊನೆಗೂ ಕೂಡ 15 ಆಟಗಾರರ ವಿಶ್ವ ಕಪ್ ತಂಡವನ್ನು ಅಧಿಕೃತವಾಗಿ ಘೋಷಿಸಿದೆ.

ತಂಡವನ್ನು ಸಹಜವಾಗಿಯೇ ರೋಹಿತ್ ಶರ್ಮ ರವರು ನಾಯಕನಾಗಿ ಮುನ್ನಡೆಸಲಿದ್ದು ಉಪನಾಯಕನಾಗಿ ರಾಹುಲ್ ರವರು ಆಯ್ಕೆಯಾಗಿದ್ದಾರೆ. ರಿಷಬ್ ಪಂತ್ ಅವರ ಏಷ್ಯಾ ಕಪ್ ಕಳಪೆ ಪ್ರದರ್ಶನದ ನಂತರವೂ ಕೂಡ ಆಯ್ಕೆಗಾರರು ಅವರ ಮೇಲೆ ನಂಬಿಕೆ ಇಟ್ಟು ತಂಡದಲ್ಲಿ ಸ್ಥಾನ ನೀಡಿದ್ದಾರೆ. ದಿನೇಶ್ ಕಾರ್ತಿಕ್ ಅವರು ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇಂಜುರಿಯಿಂದ ಹರ್ಷಲ್ ಪಟೇಲ್ ಹಾಗೂ ಜಸ್ಪ್ರೀತ್ ಭುಮ್ರ ಇಬ್ಬರು ಕೂಡ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಸೂರ್ಯಕುಮಾರ್ ಯಾದವ್, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಚಹಾಲ್, ಅರ್ಷದೀಪ್ ಸಿಂಗ್, ಭುವನೇಶ್ವರ್ ಕುಮಾರ್ ಹಾಗೂ ಅಕ್ಷರ್ ಪಟೇಲ್ ಅವರನ್ನು ಕೂಡ ಆಯ್ಕೆ ಮಾಡಲಾಗಿದೆ. ದೀಪಕ್ ಹೂಡ ಅವರ ಆಯ್ಕೆ ಇನ್ನೂ ಕೂಡ ಪ್ರಶ್ನಾತೀತವಾಗಿದೆ.

ಮತ್ತದೇ ಮಹಾ ಎಡವಟ್ಟು, ವಿಶ್ವಕಪ್ ಗೆ ತಂಡ ಘೋಷಣೆ ಮಾಡಿದ ಭಾರತ. ಅವಕಾಶ ಪಡೆದವರು ಯಾರ್ಯಾರು ಗೊತ್ತೇ?? 2

ಶಮಿ ಅವರಿಗೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ‌. ಸ್ಟ್ಯಾಂಡ್ ಬೈ ಆಟಗಾರರ ಪೈಕಿಯಲ್ಲಿ ಅವರನ್ನು ಇರಿಸಲಾಗಿದೆ. ಅವರ ಜೊತೆಗೆ ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್ ಹಾಗೂ ದೀಪಕ್ ಚಹಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ತಂಡದ ಆಯ್ಕೆಯ ಬಗ್ಗೆ ಸಾಕಷ್ಟು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು ಏಷ್ಯಾ ಕಪ್ ತಂಡವನ್ನೇ ಮತ್ತೆ ಆಡಿಸಲು ಬಿಸಿಸಿಐ ಸಿದ್ಧವಾಗಿದೆ ಎಂಬುದಾಗಿ ಕ್ರಿಕೆಟ್ ಪ್ರೇಮಿಗಳು ಹೇಳುತ್ತಿದ್ದಾರೆ.