ಬೇರೆ ಏನು ಬೇಡ, ದಿನಕ್ಕೆ ಒಂದು ಲೋಟ ಈ ರೀತಿ ಬಿಸಿ ನೀರು ಕುಡಿದರೆ ಏನಾಗುತ್ತದೆ ಎಂದು ತಿಳಿದರೆ, ಇಂದೇ ಕುಡಿಯಲು ಆರಂಭಿಸುತ್ತೀರಿ. ಎಷ್ಟೆಲ್ಲಾ ಲಾಭ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇದೇನಿದು ನೀರು ಕುಡಿಯುವುದರ ಬಗ್ಗೆ ಹೇಳುತ್ತಾರೆ, ನೀರು ಕುಡುಯುವುದು ಸಹಜ ಕ್ರಿಯೆ ನಾವೆಲ್ಲರೂ ಮಾಡುತ್ತೇವೆ, ಎಂದು ನೀವು ಕೇಳಬಹುದು. ನೀರು ಕುಡಿಯುವುದು ಸಹಜ ಕ್ರಿಯೆಯಾದರೂ ಇದು ಸಾಮಾನ್ಯವಾದ ವಿಷಯವಲ್ಲ, ಒಮ್ಮೆ ಊಹಿಸಿಕೊಳ್ಳಿ ಪ್ರಪಂಚದಲ್ಲಿ ನೀರೇ ಸಿಗದಿದ್ದರೆ ಬದುಕಲು ಸಾಧ್ಯವೇ? ಖಂಡಿತ ಇಲ್ಲ, ನಮ್ಮ ಜೀವನದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿದೆ ನೀರು. ಹಾಗಾಗಿ ನಿರನ್ನು ಯಾವಾಗ ಎಷ್ಟೇಷ್ಟು ನಮ್ಮ ದೇಹಕ್ಕೆ ನೀಡಬೇಕು ಎನ್ನುವುದು ಕೂಡ ಬಹುಮುಖ್ಯವಾದ ವಿಷಯ.

ಕೆಲವು ಆಯುರ್ವೇದ ಹಾಗೂ ಅಧ್ಯಯನಗಳ ಪ್ರಕಾರ ದಿನವೂ ಸ್ವಲ್ಪ್ಪವಾದರೂ ಬಿಸಿನೀರನ್ನು ಸೇವಿಸುವುದು ಅತ್ಯಂತ ಒಳ್ಳೆಯದು. ಚೀನಾ, ಜಪಾನ್ ಎಲ್ಲ ಕಡೆ ಬಿಸಿ ನೀರನ್ನೇ ಆಹಾರದೊಂದಿಗೆ ಬಳಸಲಾಗುತ್ತದೆ. ಅಂದರೆ ಮೂಲಿಕೆ ಎಲೆಗಳನ್ನು ಹಾಕಿ ಮಾಡಲಾದ ಬಿಸಿ ಚಹಾವನ್ನೇ ಅವರು ಸೇವನೆ ಮಾಡುತ್ತಾರೆ. ಇದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳು ಸಾಕಷ್ಟು.ಹಲವು ರೋಗಗಳ ಉಪಶಮನಕಾರಿಯಾಗಿ ಕೆಲಸ ಮಾಡುತ್ತದೆ ಬಿಸಿ ನೀರು.

ಬೇರೆ ಏನು ಬೇಡ, ದಿನಕ್ಕೆ ಒಂದು ಲೋಟ ಈ ರೀತಿ ಬಿಸಿ ನೀರು ಕುಡಿದರೆ ಏನಾಗುತ್ತದೆ ಎಂದು ತಿಳಿದರೆ, ಇಂದೇ ಕುಡಿಯಲು ಆರಂಭಿಸುತ್ತೀರಿ. ಎಷ್ಟೆಲ್ಲಾ ಲಾಭ ಗೊತ್ತೇ?? 2

ಮಲಬದ್ಧತೆಯನ್ನು ತಡೆಯುತ್ತದೆ ಬಿಸಿ ನೀರು.. ಹೌದು ದಿನವೂ ಎದ್ದ ಕೂಡಲೆ ಕನಿಷ್ಠ ನಾಲ್ಕು ಗ್ಲಾಸ್ ಬೆಚ್ಚಗಿನ ನೀರನ್ನು ಕುಡಿಯಲು ಅಭ್ಯಾಸ ಮಾಡುಕೊಳ್ಳಬೇಕು. ಇದು ದಿನನಿತ್ಯದ ಚಟುಚಟಿಕೆಯನ್ನು ಸರಾಗ ಮಾಡಿಸುತ್ತದೆ. ಕಾಂತಿಯುತ ಚರ್ಮಕ್ಕೆ ಅಗತ್ಯವಾಗಿ ಬೆಚ್ಚಗಿನ ನೀರನ್ನು ಕುಡಿಯಬೇಕು. ಇದು ತ್ವಚೆ ಡಿ ಹೈಡ್ರೇಟ್ ಆಗದಂತೆ ತಡೆಯುತ್ತದೆ. ಇನ್ನು ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ಸುಲಭಗೊಳಿಸಿ ಸರಿಯಾದ ಸಮಯದಲ್ಲಿ ಹಸಿವಾಗುವುದಕ್ಕೂ ಕೂಡ ಇದು ಪ್ರಚೋದಿಸುತ್ತದೆ. ದೇಹದಲ್ಲಿ ವಿಷಕಾರಕಗಳನ್ನು ತೆಗೆದುಹಾಕಲೂ ಕೂಡ ಜೆಚ್ಚಗಿನ ನೀರನ್ನು ಕುಡಿಯುವುದು ಉತ್ತಮ. ಹಾಗೆಯೇ ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುವ ನೋವನ್ನು ಸದಾ ಬೆಚ್ಚಗಿನ ನೀರನ್ನು ಕುಡಿದರೆ ಸ್ವಲ್ಪ ನಿಯಂತ್ರಣಕ್ಕೆ ಬರುತ್ತದೆ. ಒಟ್ಟಿನಲ್ಲಿ ಬೆಚ್ಚಗಿನ ನೀರನ್ನು ದಿನವೂ ಬೆಳಗ್ಗೆ ಎದ್ದು ಕುಡಿಯುವುದು ಉತ್ತಮ ಅಭ್ಯಾಸವಾಗಿದ್ದು, ತಪ್ಪದೇ ಮಕ್ಕಳಿಗೂ ಕೂಡ ಇದನ್ನು ರೂಢಿ ಮಾಡಿಸಿ.