ಒಂದು ನಿಮಿಷದಲ್ಲಿ ಹಿಟ್ಟು ಕಲಸಿ, ಮೂರು ನಿಮಿಷದಲ್ಲಿ ಮೃದುವಾದ ಚಪಾತಿ ಮಾಡುವ ಸರಳ ವಿಧಾನ ಯಾವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ ಚಪಾತಿ ಯಾರಿಗಿಷ್ಟವಿಲ್ಲ ಹೇಳಿ. ಅದರಲ್ಲೂ ಡಯಟ್ ಮಾಡುವವರಿಗಂತೂ ಚಪಾತಿ ಬೇಕೆ ಬೇಕು. ಆದರೇ ಬ್ಯಾಚುಲರ್ಸ್ ಗೆ ಚಪಾತಿ ತಿನ್ನೋಕೆ ಇಷ್ಟ, ಆದರೇ ಮಾಡೋಕೆ ಕಷ್ಟ ಕಷ್ಟ. ಆದರೇ ಬ್ಯಾಚುಲರ್ಸ್ ಗಳು ಸಹ ಒಂದೇ ನಿಮಿಷದಲ್ಲಿ ಹಿಟ್ಟು ಕಲಸಿ, ಮೂರು ನಿಮಿಷದಲ್ಲಿ ಚಪಾತಿ ಮಾಡುವ ಸರಳ ಸುಲಭ ವಿಧಾನವನ್ನ ನೋಡೋಣ ಬನ್ನಿ. ಬೇಕಾಗಿರುವ ಪದಾರ್ಥಗಳು – ಗೋಧಿ ಹಿಟ್ಟು 1 ಕಪ್, ಉಪ್ಪು ರುಚಿಗೆ ತಕ್ಕಷ್ಟು, ಸಕ್ಕರೆ ಸ್ವಲ್ಪ, ಅರ್ಧ ಕಪ್ ನೀರು, ಅರ್ಧ ಕಪ್ ಹಾಲು, ಬೇಯಿಸಲು ಸ್ವಲ್ಪ ಎಣ್ಣೆ.

ಮೊದಲು ಒಂದು ಮಿಕ್ಸಿ ಜಾರಿಗೆ ಒಂದು ಕಪ್ ಗೋಧಿ ಹಿಟ್ಟು ಹಾಕಿಕೊಂಡು, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಸಕ್ಕರೆಯನ್ನು ಹಾಕಬೇಕು. ನಂತರ ಅದಕ್ಕೆ ಕಾಲು ಕಪ್ ನೀರು ಹಾಗೂ ಕಾಲು ಕಪ್ ಹಾಲನ್ನ ಹಾಕಿ 10 ರಿಂದ 15 ಸೆಕೆಂಡ್ ಗಳ ಕಾಲ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು. ಹಾಲನ್ನು ಹಾಕಿದರೇ ಚಪಾತಿ ತುಂಬಾ ಮೃದುವಾಗಿ ಬರುತ್ತದೆ. ಮಿಕ್ಸಿ ಜಾರಿಗೆ ಮೊದಲೇ ಸ್ವಲ್ಪ ಎಣ್ಣೆ ಸವರಿಕೊಂಡರೇ, ರುಬ್ಬಿದ ಹಿಟ್ಟು ಮಿಕ್ಸಿ ಜಾರಿಗೆ ಹಿಡಿದುಕೊಳ್ಳುವುದಿಲ್ಲ. ನಂತರ ರುಬ್ಬಿದ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ, ಒಂದು ಚಮಚ ಎಣ್ಣೆ ಹಾಕಿ ಅದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಆಗ ಹಿಟ್ಟು ಸಂಪೂರ್ಣ ಮೃದುವಾಗಿರುತ್ತದೆ.

ಹೀಗೆ ಮಾಡಿದ ಹಿಟ್ಟನ್ನು ನೆನೆಹಾಕುವ ಅವಶ್ಯಕತೆ ಇಲ್ಲ. ತಕ್ಷಣ ಚಪಾತಿ ಮಾಡಿಕೊಳ್ಳಬಹುದು. ಒಂದೊಂದೆ ಉಂಡೆ ಮಾಡುವ ಬದಲು ಎಲ್ಲವನ್ನು ಉಂಡೆ ಮಾಡಿಟ್ಟುಕೊಂಡು , ಚಪಾತಿಯನ್ನು ಲಟ್ಟಿಸಬೇಕು. ನಂತರ ಪ್ಯಾನ್ ಮೇಲೆ ಎಣ್ಣೆ ಸವರಿ ಚಪಾತಿಯನ್ನು ಬೇಯಿಸಬೇಕು. ಆ ವೇಳೆ ನಿರಂತರವಾಗಿ ತಿರುಗಿಸಿತ್ತುತಿರಬೇಕು, ಮಗುಚಿ ಹಾಕುತ್ತಿರಬೇಕು. ಹೀಗೆ ಮಾಡುವುದರಿಂದ ಕಡಿಮೆ ಸಮಯದಲ್ಲಿ ಮೃದುವಾದ ಚಪಾತಿಯನ್ನ ಮಾಡಿಕೊಳ್ಳಬಹುದು. ಇದನ್ನ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ, ನಂತರ ನಿಮ್ಮ ಅಭಿಪ್ರಾಯಗಳನ್ನ ಕಮೆಂಟ್ ಮೂಲಕ ನಮಗೆ ತಿಳಿಸಿ.