ಚಿಲ್ಲರೆ ಕಾಸಿನಲ್ಲಿ ಬಿಎಂಡ್ಲ್ಯೂ ಖರೀದಿಸಿದ ಭೂಪ; ಚಿಲ್ಲರೆ ಅಂದ್ರೆ ತಾತ್ಸಾರ ಬೇಡ ಅಂದ ಚುನಮ್ ನಂತರ ಆಗಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕೆಲವು ಮಕ್ಕಳನ್ನು ಗಮನಿಸಿರಬಹುದು. ಅವರು ಚಿಲ್ಲರೆ ಹಣವನ್ನೇಲ್ಲಾ ಹುಂಡಿಯಲ್ಲಿ ಕೂಡಿಡುತ್ತಾರೆ. ಅದರಲ್ಲಿ ಕೆಲವರಂತೂ ಇಂಥದ್ದೇ ವಸ್ತು ಕೊಂಡಕೊಳ್ಳಬೇಕು ಎಂದೇ ಹಣವನ್ನು ಒಟ್ಟು ಮಾಡುತ್ತಾರೆ. ಇನ್ನು ಮಧ್ಯಮ ವರ್ಗದ ಅಥವಾ ಬಡ ಕುಟುಂಬಗಳಲ್ಲಿಯು ಕೂಡ ತಮ್ಮ ಕೈಲಾದಷ್ಟು ಚಿಲ್ಲರೆ ಕಾಸನ್ನು ತಮ್ಮ ಕಷ್ಟಕಾಲಕ್ಕೆ ಬೇಕಾಗುತ್ತದೆ ಎಂದು ಕೂಡಿಸಿಟ್ಟುಕೊಳ್ಳುತ್ತಾರೆ.

ದೊಡ್ಡವರು, ಶ್ರೀಮಂತರು ಹಣವನ್ನು ಬ್ಯಾಂಕ್ ನಲ್ಲಿ ಕೂಡಿಟ್ಟರೆ ಸಾಮಾನ್ಯರು ಮನೆಯಲ್ಲಿಯೇ ಒಂದು ಪುಟ್ಟ ಹುಂಡಿ ಮಾಡಿಟ್ಟುಕೊಂಡು ಅದರಲ್ಲಿಯೇ ಹಣ ಶೇಖರಣೆ ಮಾಡಿಟ್ಟುಕೊಳ್ಳುತ್ತಾರೆ. ಈ ಪುಡಿಗಾಸಲ್ಲಿ ಏನು ಕೊಂಡುಕೊಳ್ಳಲು ಸಾಧ್ಯ ಎಂಬ ಅಸಡ್ಡೆ ಮಾತಿಗೆ ನಾವಿಲ್ಲಿ ಹೇಳುವ ಒಂದು ದೃಷ್ಟಾಂತ ಖಂಡಿತ ಅಚ್ಚರಿ ಮೂಡಿಸಬಹುದು.

ಮನುಷ್ಯನಿಗೆ ಏನೆಲ್ಲಾ ಆಸೆಗಳಿರುತ್ತೆ. ಜೀವನದಲ್ಲಿ ಒಮ್ಮೆಯಾದರೂ ಆ ಆಸೆಯನ್ನು ಈಡೇರಿಸಿಕೊಳ್ಳಲು ಹವಣಿಸುತ್ತಿರುತ್ತಾರೆ. ಶಕ್ತಿ ಮೀರಿ ಪ್ರಯತ್ನಿಸುತ್ತಾರೆ. ಹಾಗೆ ಇಲ್ಲೊಬ್ಬ ವ್ಯಕ್ತಿಗೆ ಬಿಎಂಡ್ಯ್ಲೂ ಕಾರನ್ನು ಖರೀದಿಸುವುದೇ ಜೀವನದ ಪ್ರಮುಖ ಉದ್ದೇಶವಾಗಿತ್ತು. ಹಾಗಂತ ಇಂದು ನಿನ್ನೆಯ ಕನಸಾಗಿರಲಿಲ್ಲ ಅದು, ಬಾಲ್ಯದಿಂದಲೇ ಇದೇ ಕಾರಣಕ್ಕೆ ಹಣವನ್ನು ಕೂಡಿಟ್ಟುತ್ತಿದ್ದ ಈ ಮಹಾಶಯ. ಕೊನೆಗೂ ತನ್ನ ಕನಸನ್ನು ಇಡೇರಿಸಿಕೊಂಡಿದ್ದು ಈ ಚಿಲ್ಲರೆ ಕಾಸಿನಿಂದಲೆ!

ಹೌದು ಚುನಮ್ ಜುಮ್, ಬಿಎಂಡ್ಲ್ಯೂ ಕಾರು ಖರೀದಿಸುವಷ್ಟು ಚಿಲ್ಲರೆ ಹಣವನ್ನು ಕೂಡಿಟ್ಟಿದ್ದ. ದುಡಿದ ಹಣದಲ್ಲಿ ಬಾಗಶಃ ಹಣವನ್ನು ಸೇವ್ ಮಾಡುತ್ತಿದ್ದ. ಒಂದು ದಿನ ಬಿಎಂಡಬ್ಲ್ಯೂ ಶೋ ರೂಮಿಗೆ ಹೋಗಿ ೫೨ ಲಕ್ಷದ ಕಾರನ್ನು ಖರೀದಿ ಮಾಡಿದ. ಆದರೆ ಹಣವನ್ನು ಚಿಲ್ಲರೆ ರೂಪದಲ್ಲೇ ಕೊಡುವುದಾಗಿ ಹೇಳಿದ. ಮೊದಮೊದಲು ಒಪ್ಪದ ಮ್ಯಾನೇಜರ್ ನಂತರ ಒಪ್ಪಿದ. ನಂತರ ಚುನಮ್ ಸುಮಾರು ೪೫ ಬಕೆಟ್ ನಲ್ಲಿ ಚಿಲ್ಲರೆಗಳನ್ನು ತುಂಬಿಕೊಂಡು ಲಾರಿಯಲ್ಲಿ ಹಾಕಿಕೊಂಡು ಬಂದ. ಶೋರೂಮ್ ನ ಎಲ್ಲಾ ಸಿಬ್ಬಂದಿಗಳೂ ದಿನವಿಡೀ ಕುಳಿತು ಈ ಚಿಲ್ಲರೆ ಹಣವನ್ನು ಎಣಿಸಿದರು. ಎಣಿಸಿ ಎಣಿಸಿ ಸುಸ್ತಾಗಿ ಹೋದರು. ಆದರೆ ಚುನಮ್ ಜುಮ್ ಮಾತ್ರ ತನ್ನ ಜೀವನದ ಅತೀ ದೊಡ್ಡ ಕನಸನ್ನು ಇಡೇರಿಸಿಕೊಂಡ ಖುಷಿಯಲ್ಲಿ ಬಿಎಂಡಬ್ಲ್ಯೂ ಕಾರು ಓಡಿಸಿಕೊಂಡು ಹೊರಟೇ ಹೋದ!