Cricket News: ಭಾರತದ ಭವಿಷ್ಯ ನಾಯಕನನ್ನು ಆಯ್ಕೆ ಮಾಡಿದ ಹರ್ಭಜನ್- ಈತನೇ ನೋಡಿ ಟಾಪ್ ನಾಯಕ ಅಂತೇ. ಯಾರು ಗೊತ್ತೇ ಆ ಕಿಲಾಡಿ??

Cricket News: ನಮ್ಮ ಭಾರತ ಕ್ರಿಕೆಟ್ ತಂಡದ (Team India) ಆಟಗಾರರು ಹಿರಿಯರಾಗುತ್ತಿದ್ದರೆ. ಈ ವೇಳೆ ಯುವ ಆಟಗಾರರು ತಂಡಕ್ಕೆ ಬರುವುದು ಬಹಳ ಮುಖ್ಯ. ಈ ವರ್ಷದ ಐಪಿಎಲ್ (IPL) ನಲ್ಲಿ ಯುವ ಆಟಗಾರರು ಉತ್ತಮ ಪ್ರದರ್ಶನ ಕೊಡುತ್ತಿದ್ದಾರೆ. ಅವರಲ್ಲಿ ಕೆಲವು ಆಟಗಾರರು ಮುಂದಿನ ದಿನಗಳಲ್ಲಿ ಭಾರತ ತಂಡವನ್ನು ಸಮರ್ಥವಾಗಿ ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ಅಂಥ ಆಟಗಾರರ ಬಗ್ಗೆ ಇದೀಗ ಟೀಮ್ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್ (Harbhajan Singh) ಅವರು ಮಾತನಾಡಿದ್ದಾರೆ.

Cricket News: ಭಾರತದ ಭವಿಷ್ಯ ನಾಯಕನನ್ನು ಆಯ್ಕೆ ಮಾಡಿದ ಹರ್ಭಜನ್- ಈತನೇ ನೋಡಿ ಟಾಪ್ ನಾಯಕ ಅಂತೇ. ಯಾರು ಗೊತ್ತೇ ಆ ಕಿಲಾಡಿ?? 2

ಹರ್ಭಜನ್ ಸಿಂಗ್ ಅವರು ಐಪಿಎಲ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಶುಬ್ಮನ್ ಗಿಲ್ (Shubman Gill) ಅವರನ್ನು ಹಾಡಿ ಹೊಗಳಿದ್ದಾರೆ. ಗುಜರಾತ್ ಟೈಟನ್ಸ್ (Gujarat Titans) ಆಟಗಾರ ಶುಬ್ಮನ್ ಗಿಲ್ ಈ ಸಾಲಿನಲ್ಲಿ ಎರಡು ಸೆಂಚುರಿ ಭಾರಿಸಿದ್ದಾರೆ, ಗುಜರಾತ್ ಟೈಟನ್ಸ್ ತಂಡವು ಈ ವರ್ಷ ಫೈನಲ್ಸ್ ತಲುಪಲು ಸಾಧ್ಯವಾಗಿಲ್ಲ. ಪ್ಲೇಆಫ್ಸ್ ನಲ್ಲಿ ಸಿ.ಎಸ್.ಕೆ (CSK) ವಿರುದ್ಧ 15 ರನ್ ಗಳಲ್ಲಿ ಸೋತಿದೆ. ಆದರೆ ಗಿಲ್ ಅವರ ಪ್ರದರ್ಶನಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನು ಓದಿ..Business idea: ಜೇಬಿನಲ್ಲಿ ಕಡಿಮೆ ದುಡ್ಡು ಇದ್ದರೂ ಪರವಾಗಿಲ್ಲ, ಅಷ್ಟೇ ಹಾಕಿ ಈ ಬಿಸಿನೆಸ್ ಆರಂಭಿಸಿ- ನಂತರ ನೂರು ಪಟ್ಟು ಅಧಿಕ ಗಳಿಸಿ. ಯಾವ ಉದ್ಯಮ ಗೊತ್ತೇ?

ಹರ್ಭಜನ್ ಸಿಂಗ್ ಅವರು ಶುಬ್ಮನ್ ಗಿಲ್ ಹಾಗು ಯಶಸ್ವಿ ಜೈಸ್ವಾಲ್ (Yashasvi Jaiswal) ಅವರ ಬಗ್ಗೆ ಮಾತನಾಡಿ, “ಟೀಮ್ ಇಂಡಿಯಾದ ಫ್ಯುಚರ್ ಬ್ಯಾಟ್ಸ್ಮನ್ ಗಳ ಬಗ್ಗೆ ಮಾತನಾಡುವುದಾದರೆ, ಶುಬ್ಮನ್ ಗಿಲ್ ಅವರಿಗೆ ಸಾಮರ್ಥ್ಯ ಇದೆ. ಹಾಗೂ ಯಶಸ್ವಿ ಜೈಸ್ವಾಲ್ ಅವರಲ್ಲಿ ಕೂಡ ಆ ಸಾಮರ್ಥ್ಯ ಇದೆ. ಶುಬ್ಮನ್ ಗಿಲ್ ಅವರಿಗೆ ಟೀಮ್ ಇಂಡಿಯಾದ ಮುಂದಿನ ಕ್ಯಾಪ್ಟನ್ ಆಗುವ ಸಮರ್ಥ್ಯವಿದೆ.. ಯಶಸ್ವಿ ಜೈಸ್ವಾಲ್ ಅದ್ಭುತವಾಗಿ ಪರ್ಫಾರ್ಮ್ ಮಾಡಿರುವ ಆಟಗಾರ ಆಗಿದ್ದಾರೆ..” ಎಂದು ಹೇಳಿದ್ದಾರೆ ಹರ್ಭಜನ್ ಸಿಂಗ್.

“ಈಗ ಹಾರ್ದಿಕ್ ಪಾಂಡ್ಯ (Hardik Pandya) ಅವರು ಕ್ಯಾಪ್ಟನ್ಸಿ ತೆಗೆದುಕೊಳ್ಳಬೇಕು. ಯಶಸ್ವಿ ಜೈಸ್ವಾಲ್ ಹಾಗೂ ಶುಬ್ಮನ್ ಗಿಲ್ ಓಪನಿಂಗ್ ಬ್ಯಾಟ್ಸ್ಮನ್ ಗಳಾಗಬೇಕು. ಅವರ ಜೊತೆಗೆ ಋತುರಾಜ್ ಗಾಯಕ್ವಾಡ್, ರಿಂಕು ಸಿಂಗ್, ತಿಲಕ್ ವರ್ಮಾ, ನಿತೀಶ್ ರಾಣಾ, ಇವರೆಲ್ಲರೂ ಕೂಡ ಅತ್ಯುತ್ತಮವಾದ ಸಾಮರ್ಥ್ಯ ಹೊಂದಿದ್ದಾರೆ..” ಎಂದು ಹರ್ಭಜನ್ ಸಿಂಗ್ ಅವರು ಹೇಳಿದ್ದು, ಯುವತಂಡ ಕಟ್ಟಬೇಕು ಎಂದಿದ್ದಾರೆ. ಇದನ್ನು ಓದಿ..Kannada News: ಡಿಕೆಶಿ ಡಿಸಿಎಂ ಆದರೂ ತಗ್ಗೊದೇ ಇಲ್ಲ ಎನ್ನುತ್ತಿರುವ ಯತ್ನಾಳ್- ಬಹಿರಂಗವಾಗಿಯೇ ಖಡಕ್ ಆಗಿ ಹೇಳಿದ್ದೇನು ಗೊತ್ತೇ?? ಇದಪ್ಪ ಗತ್ತು ಅಂದ್ರೆ ಅಂದ್ರು ಜನ