Cricket News: ತಂಡಕ್ಕೆ ಮತ್ತೊಂದು ಆಘಾತ ನೀಡಿದ ಮಲೇಷ್ಯಾ ಏರ್ಲೈನ್ಸ್: ದೀಪಕ್ ಚಾಹರ್ ಗೆ ಮಾಡಿದ್ದೇನು ಗೊತ್ತೇ??

Cricket News: ಭಾರತ ಮತ್ತು ಬಾಂಗ್ಲಾದೇಶ (India vs Bangladesh) ನಡುವಿನ ಏಕದಿನ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಡಿಸೆಂಬರ್ 5 ಭಾನುವಾರ ಅಂದರೆ ನಾಳೆ ಈ ಒಂದು ಪಂದ್ಯ ನಡೆಯಲಿದೆ. ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಒಂದು ಪಂದ್ಯ ನಡೆಯಲಿದೆ. ಪಂದ್ಯಕ್ಕೆ ಇನ್ನು ಕಡಿಮೆ ಅವಧಿ ಉಳಿದಿರುವಾಗ ಟೀಂ ಇಂಡಿಯಾಗೆ (Team India) ಮತ್ತೊಂದು ಶಾಕ್ ಎದುರಾಗಿದೆ. ಈಗಾಗಲೇ ಸಾಕಷ್ಟು ಆಘಾತಗಳನ್ನು ಎದುರಿಸಿರುವ ಭಾರತ ತಂಡ ಈಗ ಮತ್ತೊಂದು ಶಾಕ್ ಎದುರಿಸಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಿದೆ. ಇಂಜೂರಿ ಇಂದಾಗಿ ಈಗಾಗಲೇ ಮೊಹಮ್ಮದ್ ಶಮಿ (Mohammad Shami)ಆಟದಿಂದ ಹೊರ ಬಿದ್ದಿದ್ದಾರೆ. ಅವರ ಜಾಗಕ್ಕೆ ಈಗ ಮತ್ತೊಬ್ಬ ಆಟಗಾರರನ್ನು ತರಲಾಗಿದೆ. ಇದೆ ವೇಳೆ ದೀಪಕ್ ಚಹರ್ (Deepak Chahar) ಅವರಿಗೆ ಒಂದು ಶಾಕ್ ಎದುರಾಗಿದೆ.

ಏಕದಿನ ಸರಣಿಗಾಗಿ ಬಾಂಗ್ಲಾದೇಶಕ್ಕೆ ಈಗಾಗಲೇ ದೀಪಕ್ ಚಹರ್ ಬಂದಿಳಿದಿದ್ದಾರೆ. ಆದರೆ ಅವರ ಲಗೇಜ್ ಅವರಿಗೆ ಇನ್ನೂ ತಲುಪಿಲ್ಲ. ಮಲೇಶಿಯಾ ಏರ್ ಲೈನ್ಸ್ (Malasia Airlines) ಮೂಲಕ ಅವರು ಪಂದ್ಯ ನಡೆಯುವ ಸ್ಥಳಕ್ಕೆ ಬಂದಿದ್ದಾರೆ. ಆದರೆ ಅವರ ಪಂದ್ಯದ ತಯಾರಿಗೆ ಬೇಕಾದ ಎಲ್ಲವೂ ಅವರ ಲಗೇಜ್ ನಲ್ಲಿತ್ತು. ಆದರೆ ಅವರ ಲಗೇಜ್ ಇನ್ನು ಅವರ ಕೈ ಸೇರಿಲ್ಲ. ಇದರಿಂದಾಗಿ ದೀಪಕ್ ಚಹರ್ ನಿರಾಶೆಗೊಂಡಿದ್ದಾರೆ. ಮಲೇಶಿಯಾ ಏರ್ ಲೈನ್ಸ್ ಕುರಿತಾಗಿ ಟ್ವೀಟ್ ಮಾಡಿರುವ ಅವರು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ ನಾಳೆ ನಾನು ಪಂದ್ಯದಲ್ಲಿ ಆಡಬೇಕಿದೆ, ಹೀಗಿದ್ದರೂ ನನ್ನ ಲಗೇಜ್ ಇನ್ನು ತಲುಪಿಲ್ಲ. ಎಂತಹ ಅವ್ಯವಸ್ಥೆ ಇದೆ ಎಂದು ಅವರು ಕೆಂಡ ಕಾರಿದ್ದಾರೆ. ಅಭ್ಯಾಸ ಪಂದ್ಯದಲ್ಲೂ ಕೂಡ ಅವರು ಆಡಲಾಗದ ಪರಿಸ್ಥಿತಿ ಎದುರಾಗಿರುವಾಗ ಅವರು ಸಹ ತಂಡದಿಂದ ಹೊರ ಉಳಿಯಬೇಕಾದ ಪರಿಸ್ಥಿತಿ ಉಂಟಾಗುತ್ತದೆ ಎಂದು ಆತಂಕ ವ್ಯಕ್ತವಾಗುತ್ತಿದೆ. ಇದನ್ನು ಓದಿ.. Cricket News: ಮಾವ ಬಿನ್ನಿ ಬಿಸಿಸಿಐ ಅಧ್ಯಕ್ಷರಾದ ಒಂದೇ ತಿಂಗಳಿಗೆ ಸೊಸೆ ಮಾಯಾಂತಿ ರವರಿಗೆ ಬಿಗ್ ಶಾಕ್. ಏನಾಗಿದೆ ಗೊತ್ತೇ?? ಇನ್ನು ಮುಂದೆ ಮಾಯಾಂತಿ ಇರಲ್ವ?

Cricket News: ತಂಡಕ್ಕೆ ಮತ್ತೊಂದು ಆಘಾತ ನೀಡಿದ ಮಲೇಷ್ಯಾ ಏರ್ಲೈನ್ಸ್: ದೀಪಕ್ ಚಾಹರ್ ಗೆ ಮಾಡಿದ್ದೇನು ಗೊತ್ತೇ?? 2

ಈ ಕುರಿತಂತೆ ಟ್ವೀಟ್ ಮಾಡಿರುವ ದೀಪಕ್ ಚಹರ್ ಮಲೇಶಿಯಾ ಏರ್ಲೈನ್ಸ್ನಲ್ಲಿ ಬಹಳ ಕೆಟ್ಟ ಅನುಭವವಾಯಿತು ಎಂದು ಅವರು ಬರೆದುಕೊಂಡಿದ್ದಾರೆ. “ಪ್ರಯಾಣ ವ್ಯವಸ್ಥೆ ಇಷ್ಟು ಕೆಟ್ಟದಾಗಿದೆಯಲ್ಲ, ಮೊದಲಿಗೆ ನಮಗೆ ಹೇಳದಂತೆ ನಾವು ಬರಬೇಕಿದ್ದ ಫ್ಲೈಟ್ ನನ್ನು ಬದಲಾಯಿಸಲಾಯಿತು. ನಮಗೆ ಸರಿಯಾದ ತಿಂಡಿ ವ್ಯವಸ್ಥೆ ಮಾಡಲಾಗಿರಲಿಲ್ಲ. ಈಗ ನೋಡಿದರೆ 24 ಗಂಟೆಗಳು ಕಳೆದರೂ ನನ್ನ ಲಗೇಜ್ ಇನ್ನು ನನಗೆ ಬಂದು ತಲುಪಿಲ್ಲ. ಅತ್ಯಂತ ಕೆಟ್ಟ ಅನುಭವವಾಯಿತು. ನಾಳೆ ನಾನು ಪಂದ್ಯದಲ್ಲಿ ಆಡಬೇಕಿದೆ. ಇಂತಹ ಪರಿಸ್ಥಿತಿಯನ್ನು ತಂದಿದೆ” ಎಂದು ಅವರು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ. ಇದೀಗ ಟೀಮ್ ಇಂಡಿಯಾ ಗೆ ಇಂತಹ ಆತಂಕ ಎದುರಾಗಿದ್ದು ಇಂದೂ ಸಹ ಅವರ ಲಗ್ಗೇಜ್ ಅವರ ಕೈ ಸೇರದೆ ಹೋದರೆ ಬಹುತೇಕ ನಾಳಿನ ಪಂದ್ಯದಲ್ಲಿ ಅವರು ಟೀಮ್ ಇಂಡಿಯಾ ಪರ ಆಡುವುದು ಅನುಮಾನವಾಗಿದೆ. ಇದನ್ನು ಓದಿ.. IPL 2023: ಐಪಿಎಲ್ ಗೆ ಹಿಂದೆಂದೂ ಕಂಡಿರದ ರೂಲ್ಸ್ ಅಳವಡಿಸಿದ ಬಿಸಿಸಿಐ: ಇನ್ಮುಂದೆ ಇದೆ ಆಟಗಾರರಿಗೆ ಹಬ್ಬ. ಹೇಗಿದೆ ಗೊತ್ತೇ ರೂಲ್ಸ್?