ಎಂಟು ಸೋಲಿನ ಬೆನ್ನಲ್ಲೇ ಕಾಮೆಂಟರ್ ಆಗಿ ಕೆಲಸ ಮಾಡುತ್ತಿರುವ ಆಟಗಾರರನ್ನು ಕರೆತರಲು ಸಿದ್ದವಾದ ಮುಂಬೈ: ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಈ ಬಾರಿ ಐದು ಬಾರಿಯ ಚಾಂಪಿಯನ್ ತಂಡವಾಗಿರುವ ಮುಂಬೈ ಇಂಡಿಯನ್ಸ್ ತಂಡ ಆಡಿರುವ 8 ಪಂದ್ಯಗಳಲ್ಲಿ ಎಂಟನ್ನು ಕೂಡ ಹೀನಾಯವಾಗಿ ಸೋತಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ತಂಡದ ಪ್ಲೇಆಫ್ ಗೆ ತಲುಪುವಂತಹ ಕನಸು ಕಮರಿಹೋಗಿದೆ ಎಂದು ಹೇಳಬಹುದಾಗಿದೆ. ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಈ ಬಾರಿ ಸ್ಟಾರ್ ಆಟಗಾರರು ಇದ್ದರು ಕೂಡ ನಿರೀಕ್ಷಿತ ಪ್ರದರ್ಶನವನ್ನು ನೀಡುವಲ್ಲಿ ವಿಫಲವಾಗಿದೆ ಎಂದು ಅನುಮಾನವಿಲ್ಲದೆ ಹೇಳಬಹುದು.

ಯಾಕೆಂದರೆ ಯಾವ ಪಂದ್ಯವನ್ನು ಕೂಡ ವಿರೋಚಿತವಾಗಿ ಸೋತಿಲ್ಲ ಬಹಳಷ್ಟು ಹೀನಾಯವಾಗಿ ಸೋತಿದೆ ಎಂಬುದು ನೀವೇ ನೋಡಿದ್ದೀರಿ. ತಂಡದ ಪ್ರಮುಖ ಬ್ಯಾಟ್ಸ್ಮನ್ಗಳಾಗಿರುವ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಇಬ್ಬರು ಕೂಡ ಸಂಪೂರ್ಣವಾಗಿ ವೈಫಲ್ಯವನ್ನು ಕಂಡಿದ್ದಾರೆ. ತಂಡದಲ್ಲಿ ಪ್ರದರ್ಶನ ನೀಡುತ್ತಿರುವ ಏಕೈಕ ಆಟಗಾರ ಎಂದರೆ ಆದರು ಸೂರ್ಯ ಕುಮಾರ್ ಯಾದವ್ ಮಾತ್ರ. ಅವರನ್ನು ಬಿಟ್ಟರೆ ತಿಲಕ್ ವರ್ಮ ಹಾಗೂ ಬ್ರೇವಿಸ್ ರವರು ಕೊಂಚಮಟ್ಟಿಗೆ ಪ್ರದರ್ಶನವನ್ನು ನೀಡುತ್ತಿದ್ದಾರೆ. ತಂಡದ ಪ್ರಮುಖ ಬೌಲರ್ ಆಗಿರುವ ಜಸ್ಪ್ರೀತ್ ಬುಮ್ರಾ ಈ ಬಾರಿಯ ಐಪಿಎಲ್ ಸೀಸನ್ ನಲ್ಲಿ ಸಂಪೂರ್ಣ ಸತ್ಯ ಯಾಗಿದ್ದಾರೆ ಎಂದರೆ ತಪ್ಪಾಗಲಾರದು. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಕೂಡ ಮುಂಬೈ ಇಂಡಿಯನ್ಸ್ ತಂಡ ನೀರಸವಾದ ಪ್ರದರ್ಶನವನ್ನು ನೀಡುವ ಮೂಲಕ ತಂಡದ ಅಭಿಮಾನಿಗಳಿಗೂ ಕೂಡ ಅಸಮಾಧಾನ ಮೂಡುವಂತೆ ಮಾಡಿದ್ದಾರೆ.

ಎಂಟು ಸೋಲಿನ ಬೆನ್ನಲ್ಲೇ ಕಾಮೆಂಟರ್ ಆಗಿ ಕೆಲಸ ಮಾಡುತ್ತಿರುವ ಆಟಗಾರರನ್ನು ಕರೆತರಲು ಸಿದ್ದವಾದ ಮುಂಬೈ: ಯಾರು ಗೊತ್ತೇ?? 2

ಈ ಬಾರಿ ದೊಡ್ಡ ಮಟ್ಟಕ್ಕೆ ಖರೀದಿಸಿದ್ದ ಜೋಫ್ರಾ ಆರ್ಚರ್ ಕೂಡ ತಂಡದಲ್ಲಿ ಸೇರಿಕೊಳ್ಳದೆ ಇದ್ದದ್ದು ತಂಡದ ನೀರಸ ಪ್ರದರ್ಶನಕ್ಕೆ ಮತ್ತೊಂದು ಕಾರಣವಾಗಿದೆ ಎಂದು ಹೇಳಬಹುದಾಗಿದೆ. ಇನ್ನುಳಿದ ಪಂದ್ಯಗಳನ್ನು ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡಲು ಈಗ ಹೊಸ ಆಟಗಾರನ ಎಂಟ್ರಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಗುತ್ತಿದೆ ಎಂದು ಸುದ್ದಿಗಳು ಕೇಳಿಬರುತ್ತಿವೆ. ಹೌದು ಗೆಳೆಯರೇ ಮುಂಬೈ ಇಂಡಿಯನ್ಸ್ ತಂಡದ ಪಾಳಯಕ್ಕೆ ಎಂಟ್ರಿ ನೀಡುತ್ತಿರುವ ಆಟಗಾರ ಇನ್ಯಾರೂ ಅಲ್ಲ ಧವಳ್ ಕುಲಕರ್ಣಿ. ಈ ಬಾರಿಯ ಮೆಗಾ ಹರಾಜಿನಲ್ಲಿ ಧವಲ್ ಕುಲಕರ್ಣಿ ರವರ ಹೆಸರು ಇದ್ದರೂ ಕೂಡ ಯಾರು ಖರೀದಿಸಲಿಲ್ಲ. ಈಗ ಮುಂಬೈ ಇಂಡಿಯನ್ಸ್ ತಂಡ ಉಳಿದ ಪಂದ್ಯಗಳಲ್ಲಿ ತನ್ನ ಮರ್ಯಾದೆಯನ್ನು ಉಳಿಸುವ ಸಲುವಾಗಿ ಈಗಾಗಲೇ ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಧವಲ್ ಕುಲಕರ್ಣಿ ಅವರನ್ನು ಮುಂದಿನ ಪಂದ್ಯಗಳಿಗೆ ತಂಡದಲ್ಲಿ ಆಡಿಸಲಿದೆ ಎಂಬುದಾಗಿ ಕೇಳಿಬಂದಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.