ದೀಪಾವಳಿ ಸಮಯದಲ್ಲಿ ಹಳೆ ಪೊರಕೆ ಬಳಸಿ ಇದೊಂದು ಕೆಲಸ ಮಾಡಿ ಸಾಕು, ಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲಿಯೇ ಶಾಶ್ವತವಾಗಿ ಇರುತ್ತಾರೆ. ಏನು ಮಾಡಬೇಕು ಗೊತ್ತೇ?

ನಮ್ಮ ದೇಶದಲ್ಲಿ ದೀಪಾವಳಿ ಹಬ್ಬ ಬಹಳ ಮುಖ್ಯವಾದ ಹಬ್ಬಗಳಲ್ಲಿ ಒಂದು, ದೀಪಾವಳಿ ಹಬ್ಬವನ್ನು ಐದು ದಿನಗಳವರೆಗು ಆಚರಿಸಲಾಗುತ್ತದೆ. ಈ ಹಬ್ಬ ಶುರುವಾಗುವುದು ಧನತ್ರಯೋದಶಿ ಇಂದ, ಈ ದಿನ ಲಕ್ಷ್ಮೀದೇವಿ, ಕುಬೇರ ಮತ್ತು ಧನ್ವಂತರಿಯನ್ನು ಪೂಜೆ ಮಾಡಲಾಗುತ್ತದೆ. ಇವರಿಗೆ ಪೂಜೆ ಸಲ್ಲಿಸಿ ಆರಾಧನೆ ಮಾಡುವುದರಿಂದ ಇಡೀ ವರ್ಷ ಲಕ್ಷ್ಮೀದೇವಿ ನಿಮ್ಮ ಮನೆಯಲ್ಲೇ ಇರುತ್ತಾಳೆ ಎಂದು ಅರ್ಥ. ಈ ದಿನ ದೇವರ ಆಶೀರ್ವಾದ ಪಡೆಯಲು ಕೆಲವು ವಸ್ತುಗಳನ್ನು ಖರೀದಿ ಮಾಡಬೇಕು ಎಂದು ಹೇಳಲಾಗುತ್ತದೆ. ಬೆಲೆಬಾಳುವ ಪದಾರ್ಥ ಎಂದು ಅಲ್ಲ, ಕಡಿಮೆ ಬೆಲೆಯ ಪದಾರ್ಥಗಳನ್ನು ಸಹ ಖರೀದಿ ಮಾಡಬಹುದು.

ಈ ಹಬ್ಬದ ದಿನ ಹಳೆ ಪೊರಕೆಯನ್ನು ಮನೆಯಿಂದ ಹೊರಗೆ ಹಾಕಿ, ಹೊಸ ಪೊರಕೆಯನ್ನು ಖರೀದಿ ಮಾಡುತ್ತಾರೆ. ಆದರೆ ಹಳೆಯ ಪೊರಕೆಯನ್ನು ಮನೆಯಿಂದ ಹೊರಗೆ ಹಾಕುವುದಕ್ಕಿಂತ ಮೊದಲು, ಕೆಲವು ಕ್ರಮಗಳನ್ನು ನೀವು ಅನುಸರಿಸಬೇಕಾಗುತ್ತದೆ, ರೀತಿ ಮಾಡುವುದರಿಂದ ನಿಮಗೆ ಆರ್ಥಿಕ ಸಮಸ್ಯೆಗಳು ಆಗುವುದಿಲ್ಲ.
*ಪೊರಕೆ ಲಕ್ಷ್ಮೀದೇವಿಯ ಸ್ವರೂಪ ಎಂದು ಭಾವಿಸುವ ಕಾರಣ, ದೀಪಾವಳಿ ಹಬ್ಬದ ದಿನ ಹೊಸ ಪೊರಕೆಯನ್ನು ಮನೆಗೆ ತಂದು, ಹಳೆಯ ಪೊರಕೆಯನ್ನು ಹೊರಗೆ ಬಿಸಾಕುತ್ತಾರೆ, ಆದರೆ ಆ ರೀತಿ ಮಾಡಬಾರದು, ಇದರಿಂದ ಲಕ್ಷ್ಮೀದೇವಿಗೆ ಕಿರಿಕಿರಿ ಉಂಟಾಗಬಹುದು, ಇದರಿಂದ ಆರ್ಥಿಕ ಸಮಸ್ಯೆ ಉಂಟಾಗಬಹುದು.

ದೀಪಾವಳಿ ಸಮಯದಲ್ಲಿ ಹಳೆ ಪೊರಕೆ ಬಳಸಿ ಇದೊಂದು ಕೆಲಸ ಮಾಡಿ ಸಾಕು, ಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲಿಯೇ ಶಾಶ್ವತವಾಗಿ ಇರುತ್ತಾರೆ. ಏನು ಮಾಡಬೇಕು ಗೊತ್ತೇ? 2

*ಧನತ್ರಯೋದಶಿ ಹಬ್ಬದ ದಿನ ನಿಮ್ಮ ಮನೆಯಲ್ಲಿರುವ ಹಳೆಯ ಪೊರಕೆಗೆ ಸಿಂಧೂರ, ಅರಿಶಿನ, ಕುಂಕುಮ ಇಟ್ಟು ಪೂಜೆ ಮಾಡಿ, ಇದರಿಂದಾಗಿ ಮನೆಯಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ. ಹಳೆಯ ಪೊರಕೆ ಜೊತೆಗೆ ಹೊಸ ಪೊರಕೆಗೂ ಪೂಜೆ ಮಾಡಿ.
*ಹಳೆ ಪೊರಕೆ ತುದಿಗೆ ಕಪ್ಪು ದಾರ ಕಟ್ಟಿ ಹೊರಾಗಿನವದು ಮನೆಗೆ ಬಂದಾಗ ಕಾಣಿಸುವ ಹಾಗೆ ಇಡಿ. ಪೊರಕೆ ಶುಕ್ರ ಗ್ರಹಕ್ಕೆ ಸೇರಿದ್ದು, ಕಪ್ಪುದಾರ ಶನಿ ಗ್ರಹಕ್ಕೆ ಸೇರಿದ್ದು, ಇದರಿಂದಾಗಿ ಎರಡು ಗ್ರಹಗಳು ಬಲವಾಗಿರುತ್ತದೆ ಜೊತೆಗೆ ಮನೆಗೆ ನೆಗಟಿವ್ ಎನರ್ಜಿ ಬರುವುದಿಲ್ಲ. *ಈ ಹಬ್ಬದ ದಿನ ಮನೆಯನ್ನು ಹೊಸ ಪೊರಕೆ ಇಂದ ಗುಡಿಸುವುದು ಒಳ್ಳೆಯದು. *ಧನತ್ರಯೋದಶಿ ದಿನ ರಾತ್ರಿಯ ನಂತರ ಹಳೆಯ ಪೊರಕೆಯನ್ನು ಮನೆಯಿಂದ ಹೊರಗಡೆ ಹಾಕಬಹುದು.