ಪುಣ್ಯಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿದವರ ಪರಿಸ್ಥಿತಿ ಇಂದು ಏನಾಗಿದೆ ನೋಡಿ.

ನಮಸ್ಕಾರ ಸ್ನೇಹಿತರೇ, ಕರ್ನಾಟಕದ ಪುಣ್ಯಕ್ಷೇತ್ರವಾದ ಧರ್ಮಸ್ಥಳದ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ, ಕಷ್ಟ ಎಂದು ಬಂದವರಿಗೆ ಆ ಮಂಜುನಾಥ ಪರಿಹಾರ ವಿಲ್ಲದೆ ಕಲಿಸುವುದಿಲ್ಲ ಹಾಗೂ ದಿನಕ್ಕೆ ಲಕ್ಷಾಂತರ ಜನರಿಗೆ ಹಸಿವನ್ನು ಕೂಡ ನೀಡುತ್ತಾರೆ. ಅಷ್ಟೇ ಅಲ್ಲಾ, ಈ ಪುಣ್ಯ ಕ್ಷೇತ್ರವು ಹಲವಾರು ಜನರಿಗೆ ಕೆಲಸ, ಶಾಲೆಗಳು, ಕುಡಿಯುವ ನೀರು ಹೀಗೆ ಹೇಳುತ್ತಾ ಹೋದರೆ ಒಂದು ದೊಡ್ಡ ಸಾಲು ಉಂಟಾಗುತ್ತದೆ. ಒಟ್ಟಿನಲ್ಲಿ ಹಲವಾರು ಜನರ ಬದುಕನ್ನು ಬೆಳಗುವ ಕ್ಷೇತ್ರ ಇದಾಗಿದೆ ಎಂದರೆ ತಪ್ಪಾಗಲಾರದು.

ಸದಾ ಸಾಮಾಜಿಕ ಕಾರ್ಯಕ್ರಗಳಲ್ಲಿ ತೊಡಗಿಸಿಕೊಳ್ಳುವ ಈ ಪುಣ್ಯ ಕ್ಷೇತ್ರದ ವಿರುದ್ಧ ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್‌ ಅಧ್ಯಕ್ಷ ಕೆ. ಸೋಮನಾಥ ನಾಯಕ್‌ ರವರು ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಹೆಗ್ಗಡೆ ಅವರ ಕುಟುಂಬ ಹಾಗೂ ಸಂಸ್ಥೆಗಳ ವಿರುದ್ಧ ಗೌರವಕ್ಕೆ ದಕ್ಕೆ ತರುವಂತೆ ಮಾತನಾಡುವ ಮೂಲಕ ವಿವಾದ ಸೃಷ್ಟಿ ಮಾಡಿದ್ದರು. ಒಂದು ಬಾರಿಯಲ್ಲ ಪದೇ ಪದೇ ಈ ರೀತಿ ಹೇಳಿಕೆ ನೀಡಿದ ಕಾರಣ ವಿಚಾರಣೆ ನಡೆಸಿದ ಬೆಳ್ತಂಗಡಿ ಹೆಚ್ಚುವರಿ ಸಿವಿಲ್‌ ಕೋರ್ಟ್ 2 ತಿಂಗಳು ಕಂಬಿ ಎನಿಸುವಂತೆ ಆದೇಶ ನೀಡಿತ್ತು.

ಆದರೆ ಇದಕ್ಕೆ ಒಪ್ಪದ ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್‌ ಅಧ್ಯಕ್ಷ ಕೆ. ಸೋಮನಾಥ ನಾಯಕ್‌ ರವರು ಮತ್ತೊಮ್ಮೆ ವಿಚಾರಣೆ ನಡೆಸಲು ಮನವಿ ಮಾಡಿದ್ದರು ಹಾಗೂ ನೀಡಿರುವ ಕಂಬಿ ಎನಿಸುವುದನ್ನು ತಪ್ಪಿಸಲು ಮನವಿ ಮಾಡಿದ್ದರು, ಆದರೆ ಇದಕ್ಕೆ ಒಪ್ಪದ ಬೆಳ್ತಂಗಡಿ ಹೆಚ್ಚುವರಿ ಸಿವಿಲ್‌ ಕೋರ್ಟ್ ಇದೀಗ ಮತ್ತೆ 2 ತಿಂಗಳನ್ನು 3 ತಿಂಗಳಿಗೆ ವಿಸ್ತರಣೆ ಮಾಡಿ, ಸ್ಥಿರಾಸ್ತಿ ಮುಟ್ಟುಗೋಲು ಹಾಕಿ ಶ್ರೀ ಕ್ಷೇತ್ರಕ್ಕೆ 4.50 ಲಕ್ಷ ರು. ಪರಿಹಾರವಾಗಿ ನೀಡಬೇಕು ಎಂದು ಆದೇಶ ನೀಡಿದೆ.