ಆಸೀಬಿ ತಂಡ ಕಪ್ ಗೆಲ್ಲುತ್ತದೆಯೇ ಎಂಬ ಪ್ರಶ್ನೆಗೆ ದಿನೇಶ್ ಕಾರ್ತಿಕ್ ಖಡಕ್ ಆಗಿ ಒಂದೇ ವಾಕ್ಯದಲ್ಲಿ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗು ತಿಳಿದಿರುವ ಹಾಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಎರಡು ಪಂದ್ಯಗಳನ್ನು ಸೋತಿದ್ದರೂ ಕೂಡ ಎರಡು ಪಂದ್ಯಗಳನ್ನು ಗೆದ್ದು ಸಮಾಧಾನಕರ ಸ್ಥಾನದಲ್ಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ತಂಡ ಬೇರೆಲ್ಲ ತಂಡಗಳಿಗೆ ಹೋಲಿಸಿದರೆ ಉತ್ತಮ ಸಮತೋಲಿತ ತಂಡವನ್ನು ಹೊಂದಿದೆ ಎಂದರೆ ತಪ್ಪಾಗಲಾರದು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋತಿರಬಹುದು ಆದರೆ ಕೊನೆಯವರೆಗೂ ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೋಲುವ ಭ’ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ನೀಡಿದ್ದರು.

ಅದರಲ್ಲೂ ಪ್ರಮುಖವಾಗಿ ತಂಡದ ಫಿನಿಶರ್ ಜವಾಬ್ದಾರಿಯನ್ನು ಹೊತ್ತಿರುವ ದಿನೇಶ್ ಕಾರ್ತಿಕ್ ರವರು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಒಂದು ಸಮಯದಲ್ಲಿ ಸೋಲುವ ಭೀ’ತಿಯನ್ನು ಉಂಟು ಮಾಡುವಂತೆ ಮಾಡಿದ್ದರು. ಈ ಟೂರ್ನಮೆಂಟ್ ಆರಂಭದಿಂದಲೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ದಿನೇಶ್ ಕಾರ್ತಿಕ್ ರವರು ಅತ್ಯಧಿಕ ರನ್ನನ್ನು ದಾಖಲಿಸಿದ್ದಾರೆ. ತಂಡ ಸೋಲಿನ ಸುಳಿಗೆ ಸಿಲುಕಿದಾಗಲೆಲ್ಲಾ ಗೆಲುವಿನ ದಡಕೆ ಸೇರಿಸಿರುವ ಕೆಲಸವನ್ನು ಮಾಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಕೇವಲ 14 ಎಸೆತಗಳಲ್ಲಿ ಬರೋಬ್ಬರಿ 34 ರನ್ನುಗಳನ್ನು ಬಾರಿಸಿದ್ದಾರೆ.

ಆಸೀಬಿ ತಂಡ ಕಪ್ ಗೆಲ್ಲುತ್ತದೆಯೇ ಎಂಬ ಪ್ರಶ್ನೆಗೆ ದಿನೇಶ್ ಕಾರ್ತಿಕ್ ಖಡಕ್ ಆಗಿ ಒಂದೇ ವಾಕ್ಯದಲ್ಲಿ ಹೇಳಿದ್ದೇನು ಗೊತ್ತೇ?? 2

ಇನ್ನು ಈ ಪಂದ್ಯದ ಆರಂಭಕ್ಕೂ ಮುನ್ನ ನಡೆದಂತಹ ಸಂದರ್ಶನದಲ್ಲಿ ದಿನೇಶ್ ಕಾರ್ತಿಕ್ ರವರು ಸಂದರ್ಶಕರು ನೀಡಿದಂತಹ ಪ್ರಶ್ನೆಗೆ ವಾರ್ನಿಂಗ್ ಮಾದರಿಯ ಉತ್ತರವನ್ನು ನೀಡಿದ್ದಾರೆ. ಸಂದರ್ಶಕರು ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗೆಲ್ಲುತ್ತದೆಯೇ ಎಂಬುದಾಗಿ ಪ್ರಶ್ನೆ ಕೇಳಿದ್ದಕ್ಕೆ ದಿನೇಶ್ ಕಾರ್ತಿಕ್ ರವರು ನಾನು ಪ್ರೆಡಿಕ್ಟರ್ ಅಂದರೆ ಊಹೆಗಾರನಲ್ಲ ಎಂಬುದಾಗಿ ಉತ್ತರ ನೀಡಿದ್ದಾರೆ. ಇದೊಂದು ರೀತಿ ಎಚ್ಚರಿಕೆ ಮಾದರಿಯ ಪ್ರತಿಕ್ರಿಯೆ ಆಗಿತ್ತು ಎಂದರೆ ತಪ್ಪಾಗಲಾರದು. ಸದ್ಯದ ಪರಿಸ್ಥಿತಿಯಲ್ಲಿ ಉತ್ತಮ ಹಂತದಲ್ಲಿದ್ದು ಸರಿಯಾದ ಮಾರ್ಗದಲ್ಲಿ ಸಾಗುತ್ತಿದ್ದೇವೆ ಎಂಬುದಾಗಿ ಪ್ರತಿಕ್ರಿಯಿಸಿದ್ದಾರೆ. ದಿನೇಶ್ ಕಾರ್ತಿಕ್ ರವರ ಈ ಪ್ರತಿಕ್ರಿಯೆ ಬಗ್ಗೆ ಅಭಿಪ್ರಾಯವನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.