DK Shivakumar: ಅಕ್ಕಿ ವಿಚಾರದಲ್ಲಿ ರೊಚ್ಚಿಗೆದ್ದ ಡಿಕೆಶಿ- ಕೇಂದ್ರ ಸರ್ಕಾರ ಅಕ್ಕಿ ಕೊಡದೆ ಇದ್ದರೇ ಏನು ಮಾಡುತ್ತಾರಂತೆ ಗೊತ್ತೆ? ಏನೆಲ್ಲಾ ಮಾಡಬಹುದು ಅಂತೇ ಗೊತ್ತೇ?

Dk Shivakumar: ಕಾಂಗ್ರೆಸ್ ಪಕ್ಷವು ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿ ಮನೆಯ ಪ್ರತಿ ವ್ಯಕ್ತಿಗೆ ತಿಂಗಳಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿದೆ. ಆದರೆ ಕೇಂದ್ರ ಸರ್ಕಾರದಿಂದ ಇದಕ್ಕೆ ಸರಿಯಾದ ಸಹಕಾರ ಸಿಗುತ್ತಿಲ್ಲ. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಹೇಳೋದೇನು ಗೊತ್ತಾ? ಕೇಂದ್ರ ಸರ್ಕಾರ ಅಕ್ಕಿ ಕೊಡದೆ ಇದ್ದರೆ ಏನು ಮಾಡುತ್ತಾರಂತೆ ಗೊತ್ತಾ?

DK Shivakumar: ಅಕ್ಕಿ ವಿಚಾರದಲ್ಲಿ ರೊಚ್ಚಿಗೆದ್ದ ಡಿಕೆಶಿ- ಕೇಂದ್ರ ಸರ್ಕಾರ ಅಕ್ಕಿ ಕೊಡದೆ ಇದ್ದರೇ ಏನು ಮಾಡುತ್ತಾರಂತೆ ಗೊತ್ತೆ? ಏನೆಲ್ಲಾ ಮಾಡಬಹುದು ಅಂತೇ ಗೊತ್ತೇ? 2

“ಶುರುವಿನಲ್ಲಿ FCI ಅಕ್ಕಿ ಕೊಡುವುದಾಗಿ ಹೇಳಿ ನಂತರ ಮಾತು ಬದಲಾಯಿಸಿದೆ, ಅವರಿಗೆ ರಾಜಕೀಯವೇ ಮುಖ್ಯವಾಗಿದೆ. ಆದರೆ ನಾವು ಜನರಿಗೆ ಕೊಟ್ಟಿರುವ ಮಾತನ್ನು ಪೂರ್ತಿ ಮಾಡುತ್ತೇವೆ, ವಿರೋಧ ಪಕ್ಷಗಳು ಮಾಡುತ್ತಿರುವ ಟೀಕೆ ಮುಂದುವರೆಯಲಿ, ನಾವು ಒಗ್ಗಟ್ಟಿನಿಂದ ಇರುತ್ತೇವೆ, ನಾವು ಅವರಿಗೆ ಫ್ರೀಯಾಗಿ ಅಕ್ಕಿ ಕೊಡಿ ಅಂತ ಕೇಳ್ತಿಲ್ಲ, ಅಕ್ಕಿ ಪೂರೈಸಲು ನಮ್ಮ ಸರ್ಕಾರ ಬೇರೆ ರಾಜ್ಯಗಳು ಜೊತೆಗೆ ಸಂಪರ್ಕದಲ್ಲಿದೆ. ಈ ಮೊದಲು ಶೋಭಕ್ಕ ಅವರು ಯೋಜನೆಯನ್ನು ಜಾರಿಗೆ ತರುವ ಮೊದಲು ಕಾಂಗ್ರೆಸ್ ನವರ ತಲೆಯಲ್ಲಿ ಮೆದುಳು ಇತ್ತಾ ಎಂದು ಪ್ರಶ್ನೆ ಮಾಡಿದ್ದರು.. ಇದನ್ನು ಓದಿ..KSRTC: ಕಂಡಕ್ಟರ್, ಡ್ರೈವರ್ ಗಳಿಗೆ ಖಡಕ್ ಎಚ್ಚರಿಕೆ ಕೊಟ್ಟ KSRTC- ಮಹಿಳೆಯರ ಉಚಿತ ಯೋಜನೆ ವಿಚಾರದಲ್ಲಿ ಹೇಳಿದ್ದೇನು ಗೊತ್ತೇ??

ಹೊರದೇಶದಿಂದ ಬ್ಲ್ಯಾಕ್ ಮನಿ ತಂದು ಎಲ್ಲರ ಅಕೌಂಟ್ ಗೆ 15ಲಕ್ಷ ಹಾಕುತ್ತೇವೆ, ರೈತರ ಆದಾಯವನ್ನು ಎರಡುಪಟ್ಟು ಹೆಚ್ಚು ಮಾಡುತ್ತೇವೆ, ವರ್ಷಕ್ಕೆ 2 ಕೋಟಿ ಆದಾಯ ಬರುವ ಹಾಗೆ ಮಾಡ್ತೇವೆ ಎಂದು ಹೇಳಿದಗಾ ಅವರ ತಲೆಯಲ್ಲಿ ಮೆದುಳು ಇರಲಿಲ್ಲವಾ..ನಮ್ಮ ಪಕ್ಷ ಅವರ ಪಕ್ಷದ ಹಾಗಲ್ಲ, 4 ವರ್ಷ ಆಡಳಿತ ನಡೆಸಿ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಉಳಿಸಿಕೊಳ್ಳಲಿಲ್ಲ, ರೈತರ ಸಾಲವನ್ನು 1ಲಕ್ಷದವರೆಗು ಮನ್ನಾ ಮಾಡುತ್ತೇವೆ ಎಂದು ಹೇಳಿ ಮಾಡಲಿಲ್ಲ..

ನಾವು ಪ್ರಣಾಳಿಕೆಯಲ್ಲಿ ತಿಳಿಸಿದ ಎಲ್ಲಾ ಯೋಜನೆಗಳನ್ನು ಜಾರಿಗೆ ತರುತ್ತೇವೆ ಬಡವರ ಬಗ್ಗೆ ನಮಗೆ ಕಾಳಜಿ ಇದೆ. ಅವರಲ್ಲಿ ತಾಳ್ಮೆ ಇರಬೇಕು, ನಾವು ಯೋಜನೆಗೆ ಘೋಷಿಸಿದಾಗ ಕುಮಾರಸ್ವಾಮಿ ಅವರು, ಘೋಷಣೆ ಮಾಡಿದಾಗ ಜ್ಞಾನ ಇರಲಿಲ್ಲವೇ ಎಂದು ಹೇಳಿದರು, ನಮಗೇನೋ ಜ್ಞಾನ ಇರಲಿಲ್ಲ, ಕುಮಾರಣ್ಣನಿಗೆ ಜ್ಞಾನ ಇದ್ಯಲ್ಲಾ ಅಷ್ಟೇ ಸಾಕು..” ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರವು ತಮ್ಮ ಯೋಜನೆಗಳನ್ನು ಹೇಗಾದರು ಮಾಡಿ ಜಾರಿಗೆ ತರಬೇಕು ಎಂದು ನಿರ್ಧಾರ ಮಾಡಿದೆ. ಇದನ್ನು ಓದಿ..Business Idea: ಕೆಲಸ ಮಾಡುತ್ತಾ ಈ ಬಿಸಿನೆಸ್ ಆರಂಭ ಮಾಡಿ- ಕೈತುಂಬಾ ಕಾಸು, ನಿಮಗೆ ನೀವೇ ಬಾಸ್. ಯೋಚನೆ ಮಾಡಿ ಟ್ರೈ ಮಾಡಿ. ಲಾಸ್ ಅಂತೂ ಇಲ್ಲ.

best kannada newsdk shivakumarkannada live newsKannada Newslive kannada newspm moditop kannada news