ಈ ಕುತೂಹಲಕಾರಿ ಘಟನೆಯಿಂದಲೇ ಧರ್ಮಸ್ಥಳ ಸ್ಥಾಪನೆ ಆಗಿದ್ದು..!

ಸ್ನೇಹಿತರೆ ಧರ್ಮಸ್ಥಳದ ಬಗ್ಗೆ ನೀವು ಕೇಳಿರುತ್ತೀರಿ ಹಾಗೆಯೇ ಮಂಜುನಾಥ ಸ್ವಾಮಿಯ ದರ್ಶನವನ್ನು ಸಹ ಮಾಡಿರುತ್ತೀರಿ. ಆದರೆ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಬಗ್ಗೆ ನಿಮಗೆಷ್ಟು ಗೊತ್ತು? ಅಷ್ಟಕ್ಕೂ ಮಂಜುನಾಥ ಸ್ವಾಮಿಯ ದೇವರು ಧರ್ಮಸ್ಥಳಕ್ಕೆ ಬಂದು ನೆಲೆಸಿದ್ದು ಹೇಗೆ? ಯಾಕೆ ವೀರೇಂದ್ರ ಹೆಗ್ಗಡೆಯವರನ್ನು ಧರ್ಮಸ್ಥಳದಲ್ಲಿ ದೇವರು ಎಂದು ಕರೆಯುತ್ತಾರೆ ಎಲ್ಲಾ ಸಮಗ್ರ ಮಾಹಿತಿಗಳನ್ನು ಇಲ್ಲಿ ಎಳೆಎಳೆಯಾಗಿ ಬಿಚ್ಚಿಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಧರ್ಮಸ್ಥಳ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಧಾರ್ಮಿಕ ತಾಣ, ಮಂಜುನಾಥಸ್ವಾಮಿ ಇರುವ ಈ ಊರು ಬಹಳ ಪ್ರಸಿದ್ಧವಾದ ಊರು, ಶ್ರವಣಬೆಳಗೊಳದ ಬಾಹುಬಲಿಯ ಪ್ರತಿಮೆಯನ್ನು ಹೊಂದಿರುವ ಒಂದು ಅದ್ಭುತ ತಾಣವಾಗಿದೆ. ಈ ಧರ್ಮಸ್ಥಳ ಕ್ಷೇತ್ರಕ್ಕೆ ಸುಮಾರು 700 ವರ್ಷಗಳ ಇತಿಹಾಸವಿದೆ. ನೇತ್ರಾವತಿ ನದಿಯ ತೀರದಲ್ಲಿರುವ ದೇವಸ್ಥಾನದ ಆರಾಧ್ಯ ದೇವರು ಶ್ರೀ ಮಂಜುನಾಥ ಸ್ವಾಮಿ. ಇನ್ನು ಮಂಜುನಾಥಸ್ವಾಮಿ ಇಲ್ಲಿಗೆ ಹೇಗೆ ಬಂದಿದ್ದು ಎಂಬುದೇ ಒಂದು ರೋಚಕವಾದ ಕಥೆ.

ಧರ್ಮಸ್ಥಳದ ಹಿಂದಿನ ಹೆಸರು ಕುಡುಮ ಎಂದು ಈ ಗ್ರಾಮದಲ್ಲಿ ಓರ್ವ ದಂಪತಿಗಳು ದೇವರ ಮೇಲೆ ಅಪಾರ ಭಕ್ತಿಯನ್ನು ಹೊಂದಿದ್ದರು. ಒಂದು ದಿನ ಅವರ ಮನೆಗೆ ನೆಂಟರು ಬರುತ್ತಾರೆ ಮನೆಗೆ ಬಂದವರನ್ನು ಚೆನ್ನಾಗಿ ಅತಿಥಿ ಸತ್ಕಾರ ಮಾಡಿ ಅವರನ್ನು ನೋಡಿಕೊಳ್ಳುತ್ತಾರೆ. ಆ ನಾಲ್ವರು ಅತಿಥಿಗಳು ಧರ್ಮದೇವತೆಗಳ ರೂಪದಲ್ಲಿ ಭೀಮಣ್ಣ ಪರಗಡೆ ಅವರ ಕನಸಿನಲ್ಲಿ ಕಾಣಿಸಿಕೊಂಡರು, ಮತ್ತೆ ತಾವೆಲ್ಲರೂ ಈ ಮನೆಯಲ್ಲಿ ನೆಲೆಸುವ ಆಸೆಯನ್ನು ತಿಳಿಸಿದರು ನಂತರ ಮನೆಯನ್ನು ಖಾಲಿ ಮಾಡಿ ಅವರಿಗೆ ಬಿಟ್ಟುಕೊಟ್ಟರು, ಈ ರೀತಿ ಕಾಳರಾಹು ಪುರುಷ ದೈವ, ಕಲರ ಕೈ ಸ್ತ್ರೀ ದೈವ, ಕುಮಾರಸ್ವಾಮಿ ಪುರುಷದ ದೈವ, ಮತ್ತು ಕನ್ಯಾಕುಮಾರಿ ಅಂದರೆ ಸ್ತ್ರೀ ದೈವ ಅಂದಿನಿಂದ ಮನೆಯಲ್ಲಿ ನೆಲೆನಿಂತರು.

ಇದು ನಡೆದ ನಂತರ ಈ ಸ್ಥಳದಲ್ಲಿ ಒಂದು ಲಿಂಗವನ್ನು ಸ್ಥಾಪನೆಮಾಡಿ ಎಂದು ಓರ್ವ ಋಷಿಗಳು ಸೂಚಿಸಿದರು. ಅಣ್ಣಪ್ಪನನ್ನು ಮಂಜುನಾಥ ಸ್ವಾಮಿಯನ್ನು ತರೋದಕ್ಕೆ ಕಳಿಸುತ್ತಾರೆ, ಅಣ್ಣಪ್ಪ ಬರುವಷ್ಟರಲ್ಲಿ ಅಲ್ಲೊಂದು ದೊಡ್ಡ ದೇವಸ್ಥಾನ ಆಗಿಹೋಗಿತ್ತು ಇಂತಹ ಧರ್ಮಕ್ಷೇತ್ರ ಈಗ ವಿದ್ಯೆ, ಆರೋಗ್ಯ ಹಾಗೂ ಅನ್ನ ಮತ್ತು ಅಭಯ ದಾನದ ಮೂಲಕ ಚತುರನ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸುತ್ತಿದೆ. ಇವೆಲ್ಲವೂ ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಾ ಇದೆ. ಈ ಭಾಗದ ಜನರು ವೀರೇಂದ್ರ ಹೆಗ್ಗಡೆಯವರಿಗೆ ತಮ್ಮ ತಂದೆಯಂತೆ ಮರ್ಯಾದೆ ಕೊಡ್ತಾರೆ.

ವೀರೇಂದ್ರ ಹೆಗ್ಗಡೆಯವರು ತಮ್ಮ 20ನೇ ವಯಸ್ಸಿನಲ್ಲಿ ಇಲ್ಲಿ ಸೇವೆಯನ್ನು ಸಲ್ಲಿಸಲು ಪ್ರಾರಂಭ ಮಾಡಿದರು. ಇವರಿಗಿಂತ ಮೊದಲು ಇವರ ಮನೆತನದ ಹಲವಾರು ಧರ್ಮಾಧಿಕಾರಿಗಳು ಇಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ. ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯವು ದಾನ-ಧರ್ಮಕ್ಕೆ ಪ್ರಸಿದ್ಧವಾಗಿದೆ. ಭಕ್ತರು ನೇತ್ರಾವತಿ ನೀರಿನಲ್ಲಿ ಸ್ನಾನ ಮಾಡಿ ಬಹಿರಂಗ ಶುದ್ಧಿಯೊಂದಿಗೆ ಮಂಜುನಾಥಸ್ವಾಮಿ ದರ್ಶನವನ್ನು ಮಾಡುತ್ತಾ, ಅಂತರಂಗ ಶುದ್ಧಿ ಯನ್ನ ಮಾಡಿಕೊಂಡು ಮಾನಸಿಕ ಶಾಂತಿ ಹಾಗೂ ನೆಮ್ಮದಿಯನ್ನು ಹೊಂದುತ್ತಾರೆ.