ಭಾರತ ತಂಡ ವಿಶ್ವಕಪ್ ಗೆಲ್ಲಲು ಪಣ ತೊಟ್ಟ ದ್ರಾವಿಡ್; ಮಾಡಿರುವ ಮಾಸ್ಟರ್ ಪ್ಲಾನ್ ಏನು ಗೊತ್ತೇ?? ಇದು ವರ್ಕೌಟ್ ಆಗುತ್ತಾ??

ನಮಸ್ಕಾರ ಸ್ನೇಹಿತರೆ ಭಾರತೀಯ ಕ್ರಿಕೆಟ್ ತಂಡ ಸದ್ಯಕ್ಕೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ನಿರತವಾಗಿದ್ದು ಇದಾದ ನಂತರ ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಕಾಣಿಸಿಕೊಳ್ಳಲಿದೆ. ಈ ಬಾರಿ ವಿಶ್ವಕಪ್ ಅನ್ನು ಗೆಲ್ಲಲೇ ಬೇಕು ಎನ್ನುವ ನಿಟ್ಟಿನಲ್ಲಿ ರಾಹುಲ್ ದ್ರಾವಿಡ್ ಒಂದು ಮನವಿಯನ್ನು ಈಗಾಗಲೇ ಬಿಸಿಸಿಐಗೆ ಮಾಡಿದ್ದು ಬಿಸಿಸಿಐ ಕೂಡ ಅದಕ್ಕೆ ಧನಾತ್ಮಕವಾಗಿ ಪ್ರತಿಕ್ರಿಯೆ ನೀಡಿದೆ. ಸಾಮಾನ್ಯವಾಗಿ ಈ ಮೊದಲೇ ನಿರ್ಧಾರ ಮಾಡಿದ್ದಂತೆ ಅಕ್ಟೋಬರ್ 9ಕ್ಕೆ ಭಾರತೀಯ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಗೆ ತೆರಳ ಬೇಕಾಗಿತ್ತು.

ಆದರೆ, ರಾಹುಲ್ ದ್ರಾವಿಡ್ ಅವರ ವಿಶೇಷ ರಿಕ್ವೆಸ್ಟ್ ಕಾರಣದಿಂದಾಗಿ ಒಂದು ವಾರ ಮುಂಚಿತವಾಗಿ ಅಂದರೆ ಅಕ್ಟೋಬರ್ 4ರಂದು ಸೌತ್ ಆಫ್ರಿಕಾ ವಿರುದ್ಧ t20 ಸರಣಿಯನ್ನು ಮುಗಿಸಿಕೊಂಡು ಅಕ್ಟೋಬರ್ 5ಕ್ಕೆ ಆಸ್ಟ್ರೇಲಿಯಾ ಗೆ ಫ್ಲೈಟ್ ಹತ್ತಲಿದೆ. ಈಗಾಗಲೇ ವಿಶ್ವಕಪ್ ಪ್ರಾರಂಭಕ್ಕೂ ಮುನ್ನ ನ್ಯೂಜಿಲ್ಯಾಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳ ವಿರುದ್ಧ ಅಭ್ಯಾಸ ಪಂದ್ಯಗಳಿದ್ದರೂ ಕೂಡ ಅದಕ್ಕೂ ಮುನ್ನವೇ ಆಸ್ಟ್ರೇಲಿಯಾ ನೆಲದಲ್ಲಿ ಹೇಗೆ ಆಡಬಹುದು ಆ ಪರಿಸ್ಥಿತಿಯನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿಯೇ ನಿಗದಿತ ಸಮಯಕ್ಕೂ ಮುನ್ನವೇ ಭಾರತೀಯ ಕ್ರಿಕೆಟ್ ತಂಡ ಆಸ್ಟ್ರೇಲಿಯಾಗಿ ಕಾಲಿಡಲಿದೆ. ಹೀಗಾಗಿ ಒಟ್ಟಾರೆಯಾಗಿ ವಿಶ್ವಕಪ್ ಗೂ ಮುನ್ನ ಹತ್ತು ದಿನಗಳ ಹೆಚ್ಚಿನ ಸಮಯ ಭಾರತೀಯ ಕ್ರಿಕೆಟ್ ತಂಡಕ್ಕೆ ಈ ಸಮಯದಲ್ಲಿ ಸಿಗಲಿದೆ ಎಂಬುದಾಗಿ ಹೇಳಬಹುದಾಗಿದೆ.

ಭಾರತ ತಂಡ ವಿಶ್ವಕಪ್ ಗೆಲ್ಲಲು ಪಣ ತೊಟ್ಟ ದ್ರಾವಿಡ್; ಮಾಡಿರುವ ಮಾಸ್ಟರ್ ಪ್ಲಾನ್ ಏನು ಗೊತ್ತೇ?? ಇದು ವರ್ಕೌಟ್ ಆಗುತ್ತಾ?? 2

ಕೇವಲ ಆಯ್ಕೆಯಾಗಿರುವ ಆಟಗಾರರು ಮಾತ್ರವಲ್ಲದೆ ಸ್ಟ್ಯಾಂಡ್ ಬೈ ಹಾಗೂ ನೆಟ್ ಬೌಲರ್ ಗಳನ್ನು ಕೂಡ ಈ ಸಂದರ್ಭದಲ್ಲಿ ಆಸ್ಟ್ರೇಲಿಯಾಗೆ ಕರೆದುಕೊಂಡು ಹೋಗಲಾಗುವುದು ಎಂಬುದಾಗಿ ಕೂಡ ತಿಳಿದು ಬಂದಿದೆ. ಸಾಕಷ್ಟು ತಪ್ಪುಗಳನ್ನು ಸರಣಿಯಲ್ಲಿ ಎಸೆಗುತ್ತಿರುವ ಭಾರತೀಯ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ನಲ್ಲಿ ಯಾವ ಮೋಡಿ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.