ಪಂದ್ಯ ಮುಗಿದ ಬಳಿಕ ಮಾತನಾಡಿ ನಾನು ಔಟ್ ಆಗಲು ಸಿದ್ಧನಾಗಿದ್ದೆ, ಅದಕ್ಕೆ ಕಾರಣ ಕೂಡ ಇದೆ ಎಂದ ಡುಪ್ಲೆಸಿಸಿ. ಯಾಕಂತೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಳೆದ ಬಾರಿಯ ಸನ್ರೈಸರ್ಸ್ ವಿರುದ್ಧ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 68 ರನ್ನುಗಳಿಗೆ ಆಲೌಟ್ ಆಗಿತ್ತು. ಹಾಗೂ ಆ ಪಂದ್ಯದಲ್ಲಿ ಹೀನಾಯ ಸೋಲನ್ನು ಅನುಭವಿಸಿತ್ತು. ಆದರೆ ಈಗ ಆ ಸೋಲಿಗೆ ಸರಿಯಾದ ಪ್ರತ್ಯುತ್ತರವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನೀಡಿದೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ನಿನ್ನೆ ನಡೆದ ಪಂದ್ಯದಲ್ಲಿ ಹಸಿರು ಜರ್ಸಿಯಲ್ಲಿ ಕಾಣಿಸಿಕೊಂಡಿದ್ದಾರೆ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದಿದ್ದು ಕಡಿಮೆಯಾಗಿತ್ತು ಹೀಗಾಗಿ ಈ ಪಂದ್ಯದಲ್ಲಿ ಕೂಡ ಸೋಲುತ್ತದೆ ಎಂಬುದಾಗಿ ಎಲ್ಲರೂ ಭಾವಿಸಿದ್ದರು.

ಈ ಎಲ್ಲ ನಂಬಿಕೆಗಳನ್ನು ಗಾಳಿಗೆ ತೋರುವಂತೆ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು 67 ರನ್ನುಗಳಿಂದ ಸೋಲಿಸಿದೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಹಾಗೂ ಸಮರ್ಥಕರಿಗೆ ಸಂತೋಷವನ್ನು ನೀಡಿದೆ ಎಂದು ಹೇಳಬಹುದಾಗಿದೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿರುವ 12 ಪಂದ್ಯಗಳಲ್ಲಿ ಏಳರಲ್ಲಿ ಗೆದ್ದು ಐದರಲ್ಲಿ ಸೋತು ನಾಲ್ಕನೇ ಸ್ಥಾನದಲ್ಲಿ ಭದ್ರವಾಗಿ ಕುಳಿತುಕೊಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೂರು ವಿಕೆಟ್ ನಷ್ಟಕ್ಕೆ 192 ರನ್ನುಗಳನ್ನು ಗಳಿಸಿದರೆ ಸನ್ರೈಸರ್ಸ್ ಹೈದರಾಬಾದ್ ಕಂಡ 19.2 ಓವರ್ನಲ್ಲಿ 125 ರನ್ನುಗಳಿಗೆ ಆಲೌಟ್ ಆಗಿತ್ತು. ಆರ್ಸಿಬಿ ಪರ ವನಿಂದು ಹಸರಂಗ ಐದು ವಿಕೆಟ್ಗಳನ್ನು ಕಿತ್ತಿದ್ದಾರೆ.

ಪಂದ್ಯ ಮುಗಿದ ಬಳಿಕ ಮಾತನಾಡಿ ನಾನು ಔಟ್ ಆಗಲು ಸಿದ್ಧನಾಗಿದ್ದೆ, ಅದಕ್ಕೆ ಕಾರಣ ಕೂಡ ಇದೆ ಎಂದ ಡುಪ್ಲೆಸಿಸಿ. ಯಾಕಂತೆ ಗೊತ್ತೇ? 2

ಪಂದ್ಯ ಮುಗಿದ ನಂತರ ಮಾತನಾಡಿದ ತಂಡದ ನಾಯಕನಾಗಿರುವ ಡುಪ್ಲೆಸಿಸ್, ದಿನೇಶ್ ಕಾರ್ತಿಕ್ ರವರು ಪ್ರತಿಯೊಂದು ಹೊಡೆತವನ್ನು ಕೂಡ ಕ್ಲಿಯರ್ ಆಗಿ ಅದು ಸೇರಬೇಕಾದ ಜಾಗಕ್ಕೆ ತಲುಪಿಸುತ್ತಿದ್ದಾರೆ. ಅವರನ್ನು ಇನ್ನೂ ಮೇಲಿನ ಬ್ಯಾಟಿಂಗ್ ಕ್ರಮಕ್ಕೆ ಕಳಿಸಬೇಕಾಗಿತ್ತು ಅದಕ್ಕಾಗಿಯೇ ನಾನು ಔಟ್ ಆಗಲೂ ಕೂಡ ಸಿದ್ಧನಾಗಿದ್ದೆ ಎಂಬುದಾಗಿ ಕೂಡ ಡುಪ್ಲೆಸಿಸ್ ರವರು ಹೇಳಿದ್ದಾರೆ. ಇನ್ನು ನಿನ್ನೆಯ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ರವರು ಕೊನೆಯಲ್ಲಿ ಬ್ಯಾಟಿಂಗ್ ಗೆ ಬಂದು 8 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಹಾಗೂ ಒಂದು ಬೌಂಡರಿ ಸಮೇತ ಬರೋಬ್ಬರಿ 30 ರನ್ನುಗಳನ್ನು ಬಾರಿಸಿದ್ದರು. ನಿನ್ನೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ್ಫಾರ್ಮೆನ್ಸ್ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.