ನಾವು ಓಟು ಹಾಕುವಾಗ , ನಮ್ಮ ಕೈಗೆ ಹಚ್ಚುವ ಶಾಯಿ/ಬಣ್ಣ ಯಾವ ಗಿಡದಿಂದ ಮಾಡಿರುತ್ತಾರೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನೀವು 18 ವರ್ಷ ಮೇಲ್ಪಟ್ಟಿದ್ದರೇ ಖಂಡಿತವಾಗಿ ನಿಮ್ಮ ಮೂಲಭೂತ ಹ ಕ್ಕಾದ ಮತದಾನ ಅಂದರೇ ವೋಟು ಹಾಕುವ ಕೆಲಸವನ್ನು ಮಾಡಿರುತ್ತಿರಿ. ಪ್ರತಿ ಭಾರಿ ವೋಟು ಹಾಕುವ ಸಂದರ್ಭದಲ್ಲಿಯೂ ಸಹ ನಿಮ್ಮ ಕೈಯ ಒಂದು ಬೆರಳಿಗೆ ಮತಗಟ್ಟೆಯ ಅಧಿಕಾರಿಗಳು ಶಾಯಿ/ಬಣ್ಣ ಬಳಿಯುತ್ತಾರೆ. ಆ ಬಣ್ಣ ಎಷ್ಟು ಗಾಢವಾಗಿರುತ್ತೆಂದರೇ, ನೀವು ಆ ಬಣ್ಣವನ್ನ ಹೊಗಲಾಡಿಸಲು ಅದೆಷ್ಟೇ ಪ್ರಯತ್ನಪಟ್ಟರೂ ಆ ಬಣ್ಣ ಕನಿಷ್ಠ ಒಂದು ತಿಂಗಳ ತನಕ ನಿಮ್ಮ ಕೈ ಬೆರಳ ಮೇಲಿರುತ್ತದೆ. ಅಷ್ಟಕ್ಕೂ ಆ ಬಣ್ಣ ಯಾವುದು ಅದನ್ನು ಹೇಗೆ ಮತ್ತು ಯಾವುದರಿಂದ ತಯಾರಿಸುತ್ತಾರೆ ಎಂಬ ಮಾಹಿತಿ ನಿಮಗೆ ಗೊತ್ತಿಲ್ಲವಾದರೇ ಬನ್ನಿ ತಿಳಿಯೋಣ.

ಮತದಾರರ ಕೈ ಮೇಲೆ ಹಾಕುವ ಶಾಯಿ/ಬಣ್ಣವನ್ನು ತಯಾರಿಸುವ ಕಂಪನಿ ಮೈಸೂರಿನಲ್ಲಿದೆ. ಆ ಬಣ್ಣವನ್ನ ಕೆಮಿಕಲ್ ನಿಂದ ತಯಾರಿಸುತ್ತಾರೆ ಎಂದು ನೀವು ಊಹಿಸಿದ್ದರೇ, ನಿಮ್ಮ ಊಹೆ ಸಂಪೂರ್ಣ ತಪ್ಪು. ಆ ಬಣ್ಣ ಶುದ್ಧ ನೈಸರ್ಗಿಕ ಪದಾರ್ಥಗಳನ್ನು ಬಳಸಿಕೊಂಡು ತಯಾರಿಸುವ ಬಣ್ಣವಾಗಿದೆ. ಈ ಬಣ್ಣವನ್ನು ಒಂದು ಗಿಡ ಹಾಗೂ ಅದರ ಉಪ ಉತ್ಪನ್ನದಿಂದ ತಯಾರಿಸಲಾಗುತ್ತದೆ. ಈ ಮರದ ವೈಜ್ಞಾನಿಕ ಹೆಸರು ಸೆಮಿಕಾರ್ಪಸ್ ಅನಕಾರ್ಡಿಯಮ್ ಎಂದು ಕರೆಯುತ್ತಾರೆ. ಆಡು ಭಾಷೆ / ಹಳ್ಳಿ ಭಾಷೆಯಲ್ಲಿ ಕಾಡುಗೇರು ಅಥವಾ ಗುಡ್ಡೆ ಗೇರು ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಈ ಮರ ಮಲೆನಾಡು ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಯಥೇಚ್ಛವಾಗಿ ದೊರೆಯುತ್ತದೆ.

ನೀವು ಮಲೆನಾಡಿನವರಾಗಿದ್ದರೇ ನಿಮಗೆ ಈ ಗುಡ್ಡೆಗೇರು ಚಿರಪರಿಚಿತವಾಗಿರುತ್ತದೆ. ಬೇಸಿಗೆಯಲ್ಲಿ ಗುಡ್ಡೆಗೇರು ಹಣ್ಣನ್ನ ಒಣಗಿಸಿ ಇಟ್ಟುಕೊಂಡು, ಆಲೆಮನೆಯ ಬಿಸಿ ಬಿಸಿ ಬೆಲ್ಲದ ಜೊತೆ ಚಪ್ಪರಿಸಿಕೊಂಡು ತಿಂದಿರುತ್ತಿರಿ. ಇನ್ನು ಮಲೆನಾಡು ಭಾಗದಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಲೀಂದ್ರನನ್ನು ಪೂಜಿಸಲು ಗುಡ್ಡೆಗೇರನ್ನ ಬಳಸುತ್ತಾರೆ. ಇದರ ಸೊನೆ ಅಥವಾ ಹಾಲು ಬಹಳ ಘಾಟಿನಿಂದ ಕೂಡಿರುತ್ತದೆ. ಒಂದು ವೇಳೆ ಚರ್ಮದ ಮೇಲೆ ಬಿದ್ದರೇ ಆ ಕಲೆ ಹೋಗುವುದೇ ಇಲ್ಲ. ಈ ಗುಡ್ಡೆಗೇರನ್ನ ಹಲವಾರು ಆಯುರ್ವೇದ ಔಷಧ ತಯಾರಿಕೆಯಲ್ಲಿಯೂ ಸಹ ಬೆಳೆಸುತ್ತಾರೆ.

ಈಗಲೂ ಮಲೆನಾಡಿನ ಹಳ್ಳಿಯ ಕಡೆ ಗುಡ್ಡೆಗೇರನ್ನ ತಮ್ಮ ಮನೆಯ ತಾಮ್ರದ ಹಂಡೆಗಳು ಬಿರುಕು ಬಿಟ್ಟರೇ, ಅದನ್ನ ಕೂಡಿಸಲು ಬಳಸುತ್ತಾರೆ. ಅಂದರೇ ಊಹಿಸಿಕೊಳ್ಳಿ, ಗುಡ್ಡೆಗೇರು ಎಷ್ಟು ಅಂಟುದಾಯಕ ವಸ್ತು ಎಂದು. ಗುಡ್ಡೆಗೇರು ಹಣ್ಣನ್ನ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ತಿನ್ನುವುದರಿಂದ ನಿಮ್ಮ ಜೀರ್ಣಕ್ರಿಯೆ ಸುಧಾರಿಸುತ್ತದೆ. ಮಾತ್ರವಲ್ಲದೇ ನಿಶ್ಯಕ್ತಿಯಿಂದ ಬಳಲುತ್ತಿರುವ ಮಕ್ಕಳಿಗೂ ಪೌಷ್ಠಿಕ ಆಹಾರವಾಗಿ ಈ ಹಣ್ಣನ್ನ ನೀಡಲಾಗುತ್ತದೆ. ಜೊತೆಗೆ ಈ ಮರದ ಕಾಂಡ ಹಾಗೂ ಗುಡ್ಡೆಗೇರು ಕಾಯಿಯನ್ನ ಬಳಸಿ ತಯಾರಿಸಿದ ಎಣ್ಣೆಯನ್ನ ಮಂಡಿ ಹಾಗೂ ಕೀಲು ನೋವುಗಳ ತಕ್ಷಣದ ಶಮನಕ್ಕೆ ಬಳಸುತ್ತಾರೆ. ಇದರಲ್ಲಿ ಇರುವಂತಹ ಹಣ್ಣಿನ ಬೀಜಗಳನ್ನ ಚುನಾವಣೆಯ ಶಾಯಿ/ಬಣ್ಣ ತಯಾರಿಸಲು ಉಪಯೋಗಿಸುತ್ತಾರೆ. ಗುಡ್ಡೆಗೇರು ಹಣ್ಣು ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ತಿಳಿದಿದ್ದರೇ ನಮಗೆ ಕಮೆಂಟ್ ಮೂಲಕ ತಿಳಿಸಿ. ಈ ವಿಷಯವನ್ನ ಎಲ್ಲರಿಗೂ ಹಂಚಿ.