ನಾಯಕತ್ವದ ಚರ್ಚೆ ಜೋರಾಗಿರುವ ಸಮಯದಲ್ಲಿ ಕೊಹ್ಲಿ ನಾಯಕತ್ವದ ಬಗ್ಗೆ ಗೌತಮ್ ಗಂಭೀರ್ ಕೊಟ್ಟ ಷಾಕಿಂಗ್ ಹೇಳಿಕೆ ಏನ್ ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತ ತಂಡದಲ್ಲಿ ನಾಯಕತ್ವದ ವಿಚಾರದಲ್ಲಿ ಉಂಟಾಗಿರುವ ವಿವಾದ ಏಕೋ ತಣ್ಣಗಾಗುವಂತೆ ಕಾಣುತ್ತಿಲ್ಲ. ದಿನೇ ದಿನೇ ವಿವಾದದ ಸ್ವರೂಪ ಬೇರೆ ರೀತಿ ಹೋಗುತ್ತಿದ್ದು, ಹಿರಿಯ ಕ್ರಿಕೇಟಿಗರು, ದಿನಕ್ಕೊಬ್ಬರಂತೆ ತಮ್ಮ.ತಮ್ಮ ಅಭಿಪ್ರಾಯಗಳನ್ನು ಹೇಳುತ್ತಿದ್ದಾರೆ. ಈಗ ಭಾರತ ತಂಡದ ಮಾಜಿ ಉಪನಾಯಕ ಗೌತಮ್ ಗಂಭೀರ್ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ವಿರಾಟ್ ಕೊಹ್ಲಿ ಬಗ್ಗೆ ಪ್ರಪಂಚದ ಇತರ ಕ್ರಿಕೇಟ್ ಆಡುವ ದೇಶಗಳು ಎಚ್ಚರಿಕೆಯಿಂದರಬೇಕೆನ್ನುವ ಹೇಳಿಕೆ ನೀಡಿದ್ದಾರೆ.

ನಾಯಕತ್ವದ ಚರ್ಚೆ ಜೋರಾಗಿರುವ ಸಮಯದಲ್ಲಿ ಕೊಹ್ಲಿ ನಾಯಕತ್ವದ ಬಗ್ಗೆ ಗೌತಮ್ ಗಂಭೀರ್ ಕೊಟ್ಟ ಷಾಕಿಂಗ್ ಹೇಳಿಕೆ ಏನ್ ಗೊತ್ತೇ?? 2

ಹೌದು ಭಾರತ ತಂಡದ ನಾಯಕತ್ವ ಇಭ್ಭಾಗ ಆಗಿರುವುದು ಒಳ್ಳೆಯ ಬೆಳವಣಿಗೆ. ರೆಡ್ ಬಾಲ್ ಕ್ರಿಕೇಟ್ ಗೆ ಒಬ್ಬರು ಹಾಗೂ ವೈಟ್ ಬಾಲ್ ಕ್ರಿಕೇಟ್ ಗೆ ಒಬ್ಬರು ನಾಯಕರಿರುವುದು ಉತ್ತಮ. ವಿರಾಟ್ ಕೊಹ್ಲಿ ಇನ್ಮುಂದೆ ಏಕದಿನ ಹಾಗೂ ಟೆಸ್ಟ್ ಕ್ರಿಕೇಟ್ ನಲ್ಲಿ ಮತ್ತಷ್ಟು ಆಕ್ರಮಣಕಾರಿಯಾಗಿ ಆಡುತ್ತಾರೆ. ವಿರಾಟ್ ಬ್ಯಾಟಿಂಗ್ ನಲ್ಲಿ ತಮ್ಮ ವಿರಾಟ್ ಸ್ವರೂಪ ತೋರಿದರೂ ಅಚ್ಚರಿಯಿಲ್ಲ. ನಾಯಕತ್ವದ ಒತ್ತಡ ಕೆಳಗಿಳಿದ ಕಾರಣ ನಿರ್ಭೀತಿಯಿಂದ ಬ್ಯಾಟ್ ಬೀಸಬಹುದು.

ಇದು ಉಳಿದೆಲ್ಲಾ ದೇಶಗಳಿಗೆ ಎಚ್ಚರಿಕೆಯ ಕರೆಘಂಟೆಯಾಗಿರುತ್ತದೆ. ಸದ್ಯ ರೆಡ್ ಬಾಲ್ ಕ್ರಿಕೇಟ್ ನಲ್ಲಿ ರೋಹಿತ್ ನಿಭಾಯಿಸುತ್ತಿರುವ ಪಾತ್ರವನ್ನು, ಇನ್ಮುಂದೆ ವೈಟ್ ಬಾಲ್ ಕ್ರಿಕೇಟ್ ನಲ್ಲಿ ವಿರಾಟ್ ನಿರಾವಹಿಸಬಹುದು ಎಂದು ಗೌತಮ್ ಗಂಭೀರ್ ಭವಿಷ್ಯ ನುಡಿದಿದ್ದಾರೆ. ಮೇಲಾಗಿ ರಾಹುಲ್ ದ್ರಾವಿಡ್ ಕೋಚ್ ಆದ ಕಾರಣ ಭಾರತ ತಂಡ ಮುಂದಿನ ದಿನಗಳಲ್ಲಿ ಮತ್ತಷ್ಟು ಬಲಿಷ್ಠವಾಗಬಹುದು ಎಂದು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ