ಕೊಹ್ಲಿ ಯನ್ನು ಅನಾವಶ್ಯಕವಾಗಿ ಕೆಣಕಿದ ಗಂಗೂಲಿಗೆ ಶಾಕ್: ಕರ್ಮಾ ತಿರುಗೇಟು ಕೊಟ್ಟಿದ್ದು ಹೇಗೆ ಗೊತ್ತೇ?? ಗಂಗೂಲಿ ಪರಿಸ್ಥಿತಿ ಈಗ ಏನಾಗಿದೆ ಗೊತ್ತೇ??

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಧ್ಯಕ್ಷ ಸ್ಥಾನದಿಂದ ಹೊರಗುಳಿಯುತ್ತಿದ್ದು, ರೋಜರ್ ಬಿನ್ನಿ ಅವರ ಉತ್ತರಾಧಿಕಾರಿಯಾಗುವ ಸಾಧ್ಯತೆಯಿದೆ. ಈ ಬಗ್ಗೆ ಸೌರವ್ ಗಂಗೂಲಿ ಅವರು ಗುರುವಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ತಮ್ಮ ಬಿಸಿಸಿಐ ಅಧಿಕಾರಾವಧಿಯ ಬಗ್ಗೆ ಮೌನ ಮುರಿದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸ್ಥಾನದ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ, ಅಕ್ಟೋಬರ್ 18 ರ ನಂತರ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಸೌರವ್ ಗಂಗೂಲಿ ಕೆಳಗಿಳಿಯಲಿದ್ದಾರೆ. ಇದರ ಮಧ್ಯೆ ಕೊಹ್ಲಿ ಅವರಿಗೆ ಅದ ಅನ್ಯಾಯಕ್ಕೆ ನಿಮಗೆ ಈ ಪರಿಸ್ಥಿತಿ, ಕರ್ಮ ಎಂದೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡುತ್ತಿದ್ದಾರೆ.

ಈ ನಡುವೆ ವಾಸ್ತವವಾಗಿ, ಗುರುವಾರ, ಬಿಸಿಸಿಐ ಅನುಭವಿಗಳ ಎರಡು ಪ್ರಮುಖ ಸಭೆಗಳು ದೆಹಲಿಯಲ್ಲಿ ನಡೆದಿವೆ. ಈ ಸಭೆಯ ನಂತರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ನಿರ್ಧರಿಸಲಾಗಿದೆ. ಯಾರೂ ಶಾಶ್ವತವಾಗಿ ಆಡಲು ಸಾಧ್ಯವಿಲ್ಲ. ಶಾಶ್ವತವಾಗಿ ಆಡಳಿತದಲ್ಲಿ ಉಳಿಯಲೂ ಸಾಧ್ಯವಿಲ್ಲ ಎಂದು ಹೇಳುವ ಮೂಲಕ ತಮ್ಮ ನಿರ್ಗಮನವನ್ನು ನಿಗೂಢ ರೀತಿಯಲ್ಲಿ ಹೇಳಿದ್ದಾರೆ. ಅವರ ನಿರ್ಗಮನದ ಬಗ್ಗೆ ಅಧಿಕೃತ ಹೇಳಿಕೆ ಬರಬೇಕಿದೆ. ಭಾರತದ ಮಾಜಿ ಕ್ರಿಕೆಟಿಗ ಮತ್ತು 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ರೋಜರ್ ಬಿನ್ನಿ ಅವರು ಸೌರವ್ ಗಂಗೂಲಿ ಬದಲಿಗೆ ಬಿಸಿಸಿಐ ಮುಂದಿನ ಅಧ್ಯಕ್ಷರಾಗುವ ಸಾಧ್ಯತೆಯಿದೆ ಮತ್ತು ಅರುಣ್ ಧುಮಾಲ್ ಬದಲಿಗೆ ಬಿಜೆಪಿ ಶಾಸಕ ಆಶಿಶ್ ಶೆಲಾರ್ ಖಜಾಂಚಿಯಾಗುವ ಸಾಧ್ಯತೆಯಿದೆ ಎಂದು ಕ್ರಿಕೆಟ್ ನಿಯಂತ್ರಣ ಮಂಡಳಿಯ ಮೂಲಗಳು ತಿಳಿಸಿವೆ. ಭಾರತ. ಜಯ್ ಶಾ ಬಿಸಿಸಿಐ ಕಾರ್ಯದರ್ಶಿ ಸ್ಥಾನವನ್ನು ಉಳಿಸಿಕೊಳ್ಳಲಿದ್ದಾರೆ. 50 ವರ್ಷದ ಗಂಗೂಲಿ 2019ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿದ್ದು ಈ ವಾರದದಲ್ಲಿ ಈ ಸ್ಥಾನಕ್ಕೆ ತೆರೆ ಬೀಳಲಿದೆ. ಆದರೆ, ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಬೇಕಾದ ಬೆಂಬಲ ಸಿಗದ ಕಾರಣ ಸೌರವ್‌ ಕೆಳಗಿಳಿಯುವಂತ್ತಾಗಿದೆ. ಒಟ್ಟಾರೆ ಅಧಿಕಾರಕ್ಕಾಗಿ ನಡೆಯುತ್ತಿರುವ ರಾಜಕೀಯಕ್ಕೆ ಸೌರವ್‌ ಬಲಿಪಶುವಾಗಿರುವುದು ಮೇಲ್ನೋಟಕ್ಕೆ ಕಂಡಬರುತ್ತಿದೆ.

ಕೊಹ್ಲಿ ಯನ್ನು ಅನಾವಶ್ಯಕವಾಗಿ ಕೆಣಕಿದ ಗಂಗೂಲಿಗೆ ಶಾಕ್: ಕರ್ಮಾ ತಿರುಗೇಟು ಕೊಟ್ಟಿದ್ದು ಹೇಗೆ ಗೊತ್ತೇ?? ಗಂಗೂಲಿ ಪರಿಸ್ಥಿತಿ ಈಗ ಏನಾಗಿದೆ ಗೊತ್ತೇ?? 2

ಇದಕ್ಕೂ ಮುನ್ನ ಟಿ20 ನಾಯಕತ್ವದ ಸ್ಥಾನದಿಂದ ಕೊಹ್ಲಿ ಕೆಳಗಿಳಿದಿರುವುದಾಗಿ ಗಂಗೂಲಿ ಹೇಳಿಕೆ ನೀಡಿದ್ದು, ಭಾರತಕ್ಕೆ ನಾಯಕತ್ವ ಒಡೆದು ಹಾಕಿಲ್ಲ ಎಂದು ಹೇಳಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳುವ ಮುನ್ನ ಮಾಧ್ಯಮಗೋಷ್ಠಿಯಲ್ಲಿ ಗಂಗೂಲಿ ಮಾಡಿದ ಕಾಮೆಂಟ್‌ಗಳ ಕುರಿತು ಕೊಹ್ಲಿ ನೀಡಿದ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿತ್ತು. ಕಳೆದ ವರ್ಷ ಟಿ 20 ವಿಶ್ವಕಪ್‌ಗೆ ಮುನ್ನ, ಕೊಹ್ಲಿ ಅವರು ಟಿ20 ಸ್ವರೂಪದ ನಾಯಕತ್ವದಿಂದ ಕೆಳಗಿಳಿದರು ಮತ್ತು ಇತರ ಸ್ವರೂಪಗಳಲ್ಲಿ ನಾಯಕರಾಗಿ ಮುಂದುವರಿಯುತ್ತೇನೆ ಎಂದು ಹೇಳಿಕೊಂಡರು. ಆದ್ರೆ ಬಿಸಿಸಿಐ ಒತ್ತಾಯಪೂರ್ವಕವಾಗಿ ಕೊಹ್ಲಿಯನ್ನು ಏಕದಿನ ಫಾರ್ಮೆಟ್ ನಾಯಕತ್ವದಿಂದ ಕೆಳಗಿಳಿಸಿತು. ಇದ್ರಿಂದಾಗಿ ಸೌರವ್ ಗಂಗೂಲಿ ವಿರುದ್ಧ ಕೊಹ್ಲಿ ಫ್ಯಾನ್ಸ್ ಸಿಟ್ಟಾದರು. ಇದಾಗಿ ಕೆಲವೇ ವಾರಗಳಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವದಿಂದಲೂ ಹೊರಬಂದರು. ಹೀಗಾಗಿ ಕೊಹ್ಲಿ ಅವರಿಗೆ ಅದ ಅನ್ಯಾಯಕ್ಕೆ ನಿಮಗೆ ಈ ಪರಿಸ್ಥಿತಿ, ಮಾಡಿದ ಕರ್ಮ ತಿರುಗೇಟು ಎಂದೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡುತ್ತಿದ್ದಾರೆ.