Gas Save: ಗ್ಯಾಸ್ ಬೆಲೆ ಹೆಚ್ಚಾಗಿರುವುದರಿಂದ ತೊಂದರೆ ಆಗುತ್ತಿದೆಯೇ?? ಈ ಚಿಕ್ಕ ಕೆಲಸ ಮಾಡಿ ಜೀವನ ಪೂರ್ತಿ ಉಚಿತವಾಗಿ ಅಡುಗೆ ಮಾಡಿ.

Gas Save: LPG ಗ್ಯಾಸ್ ಸಿಲಿಂಡರ್ ನ ಬೆಲೆ ಏರಿಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ನಡೆಯುತ್ತಲೇ ಇದೆ. ಜದರ ಪರಿಣಾಮ ಬೀರುತ್ತಿರುವುದು ಜನ ಸಾಮಾನ್ಯರ ಮೇಲೆ. ಜನರು ಇಷ್ಟು ದುಬಾರಿ ಬೆಲೆಯ ಗ್ಯಾಸ್ ಸಿಲಿಂಡರ್ ಕೊಂಡುಕೊಳ್ಳಲು ಕಷ್ಟಪಡುತ್ತಿದ್ದಾರೆ. ಆದರೆ ಒಂದು ವಿಷಯ ನಿಮಗೆ ತಿಳಿದಿರಲಿ, ಇನ್ನುಮುಂದೆ ನೀವು ಅಡುಗೆ ಮಾಡುವುದಕ್ಕೆ LPG ಸಿಲಿಂಡರ್ ನ ಅಗತ್ಯ ಇರುವುದಿಲ್ಲ. ಇದನ್ನು ನೀವು ಮಾಡಿದರೆ ಸಿಲಿಂಡರ್ ಇಲ್ಲದೆಯೇ ಫ್ರೀಯಾಗಿ ಅಡುಗೆ ಮಾಡಬಹುದು. ಸರ್ಕಾರ ಈಗ ಅಡುಗೆಗೆ ಹೊಸದೊಂದು ವಿಧಾನವನ್ನು ಪರಿಚಯ ಮಾಡಿದೆ. ಅದರ ಬಗ್ಗೆ ತಿಳಿಸುತ್ತೇವೆ ನೋಡಿ..

Gas Save: ಗ್ಯಾಸ್ ಬೆಲೆ ಹೆಚ್ಚಾಗಿರುವುದರಿಂದ ತೊಂದರೆ ಆಗುತ್ತಿದೆಯೇ?? ಈ ಚಿಕ್ಕ ಕೆಲಸ ಮಾಡಿ ಜೀವನ ಪೂರ್ತಿ ಉಚಿತವಾಗಿ ಅಡುಗೆ ಮಾಡಿ. 2

ನಮ್ಮ ದೇಶದಲ್ಲಿ ಖ್ಯಾತಿ ಹೊಂದಿರುವ ಇಂಡಿಯನ್ ಆಯ್ಲ್ ಕಂಪನಿ ಈಗ ವಿಶೇಷವಾದ ಸ್ಟವ್ ಅನ್ನು ಪರಿಚಯ ಮಾಡಿದೆ. ಇದು ಇಂಡಿಯನ್ ಆಯ್ಲ್ ಪರಿಚಯಿಸಿರುವ ಸೋಲಾರ್ ಸ್ಟವ್ ಆಗಿದೆ. ಈ ಸ್ಟವ್ ನ ಹೆಸರು ಸೂರ್ಯ ನೂತನ್ ಈ ಸ್ಟವ್ ಅನ್ನು ಫರೀದಾಬಾದ್ ನಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಗ್ಯಾಸ್ ಸಿಲಿಂಡರ್ ನ ಬೆಲೆ ಈಗ 1000 ರೂಪಾಯಿಗಿಂತ ಹೆಚ್ಚಿದೆ. ಆದರೆ ಸೂರ್ಯ ನೂತನ್ ಸ್ಟವ್ ಬಳಸಲು ಶುರು ಮಾಡಿದರೆ, ನೀವು ಗ್ಯಾಸ್ ಸಿಲಿಂಡರ್ ಗಾಗಿ ಖರ್ಚು ಮಾಡುವ ಅವಶ್ಯಕತೆ ಇಲ್ಲ. ಇದನ್ನು ಓದಿ..Free Power: ಉಚಿತ ವಿದ್ಯುತ್ ಕೊಡುಗೆಯಲ್ಲಿ ಟ್ವಿಸ್ಟ್- ಮಾಸ್ಟರ್ ಸ್ಟ್ರೋಕ್ ಕೊಟ್ಟ ಸಿದ್ದು, ಸಾವಿರಾರು ಕೋಟಿ ಉಳಿಸಿದ್ದು ಹೇಗೆ ಗೊತ್ತೇ?? ಮಾಧ್ಯಮ ಹೇಳದ ಲೆಕ್ಕಾಚಾರ ಹೇಗಿದೆ ಗೊತ್ತೇ?

ಸೋಲಾರ್ ಸ್ಟವ್ ನ ಬೆಲೆ ಎಷ್ಟು ಎಂದು ನೋಡುವುದಾದರೆ, ಇದರ ಬೆಲೆ ಸುಮಾರು ₹12,000 ರೂಪಾಯಿ ಆಗಿದೆ. ಉನ್ನತವಾದ ಮಾಡೆಲ್ ನ ಬೆಲೆ ₹23,000 ಆಗಿದೆ. ಒಂದು ಸಾರಿ ಸ್ಟವ್ ಖರೀದಿ ಮಾಡಲು ನೀವು ಹಣ ಖರ್ಚು ಮಾಡಿದರೆ ಸಾಕು, ಬಳಿಕ ಮತ್ತೆ ಖರ್ಚು ಮಾಡುವ ಅವಶ್ಯಕತೆಯೇ ಬರುವುದಿಲ್ಲ. ಇದರಿಂದ ನೀವು ಸಾಕಷ್ಟು ಹಣವನ್ನು ಉಳಿತಾಯ ಮಾಡಬಹುದು.

ಈ ಸೋಲಾರ್ ಸ್ಟವ್ ಅನ್ನು ನೀವು ಅಡುಗೆ ಮನೆಯಲ್ಲಿ ಇಡಬೇಕು. ಅದರ ಮೇಲೆ ಕೇಬಲ್ ಇರುತ್ತದೆ, ಈ ಕೇಬಲ್ ವೈರ್ ಅನ್ನು ನಿಮ್ಮ ಮನೆಯ ಮೇಲಿರುವ ಸೋಲಾರ್ ಪ್ಯಾನೆಲ್ ಗೆ ಕನೆಕ್ಟ್ ಮಾಡಲಾಗಿರುತ್ತದೆ. ಸೋಲಾರ್ ಪ್ಯಾನೆಲ್ ಇಂದ ಉತ್ಪತ್ತಿ ಆಗುವ ಸೋಲಾರ್ ಎನರ್ಜಿ ಕೇಬಲ್ ಮೂಲಕ ಸ್ಟವ್ ಗೆ ನೀಡುತ್ತದೆ. ಇದರಿಂದ ನೀವು ಸುಲಭವಾಗಿ ಅಡುಗೆ ಮಾಡಬಹುದು. ಸೂರ್ಯ ನೂತನ್ ಸೋಲಾರ್ ಸ್ಟವ್ ಬಗ್ಗೆ ಪೂರ್ತಿ ಮಾಹಿತಿ ಪಡೆಯಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ಇದನ್ನು ಓದಿ..UPI Payment: ಹೆಚ್ಚಿನ ಚಿಂತೆ ಬೇಡ- ನಿಮ್ಮ ಯುಪಿಐ ಪೇಮೆಂಟ್ ವಿಫಲವಾದರೆ ಏನು ಮಾಡಬೇಕು ಗೊತ್ತೆ?? ಏನೆಲ್ಲಾ ಮಾಡಬಹುದು ಗೊತ್ತೇ??