Mutual Funds: ಯಾವುದೇ ಶೇರ್ ಮಾರುಕಟ್ಟೆ ಜ್ಞಾನವಿಲ್ಲದೆ ಇದ್ದರೂ ಉತ್ತಮ ಮ್ಯೂಚುಯಲ್ ಫಂಡ್ ಗಳನ್ನೂ ಆಯ್ಕೆ ಮಾಡುವುದು ಹೇಗೆ ಗೊತ್ತೇ?

Mutual Funds: ಹೂಡಿಕೆ ಮಾಡುವುದು ಅಷ್ಟೊಂದು ಸುಲಭದ ಮಾತಲ್ಲ. ಕೆಲವರಿಗೆ ಹೂಡಿಕೆ ಮಾಡುವುದು ರಿಸ್ಕ್ ಎಂದು ಅನಿಸುತ್ತದೆ ಅದಕ್ಕಾಗಿ ಅವರು ಸುರಕ್ಷಿತ ಮಾರ್ಗವಾಗಿರುವಂತಹ ಫಿಕ್ಸೆಡ್ ಡೆಪಾಸಿಟ್(Fixed Deposit) ನಲ್ಲಿ ಹೂಡಿಕೆ ಮಾಡುತ್ತಾರೆ. ರಿಸ್ಕ್ ತೆಗೆದುಕೊಳ್ಳಲು ಇಷ್ಟಪಡುವವರು ಮಾತ್ರ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತಹ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಈ ಸಂದರ್ಭದಲ್ಲಿ ಅವರು ಲಾಭವನ್ನು ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಕೂಡ ಮಾಡಬಹುದು ಇಲ್ಲವೇ ನಷ್ಟ ಕೂಡ ಆಗಬಹುದು. ಮಾರುಕಟ್ಟೆಯ ಬಗ್ಗೆ ಚೆನ್ನಾಗಿ ತಿಳಿದುಕೊಂಡರೆ ಇಲ್ಲಿ ಹೂಡಿಕೆ ಮಾಡುವುದು ಅಷ್ಟೊಂದು ಕಷ್ಟದ ಕೆಲಸವಲ್ಲ. ಇತ್ತೀಚಿನ ವರ್ಷಗಳಲ್ಲಿ ಮ್ಯೂಚುವಲ್ ಫಂಡ್ಗಳಲ್ಲಿ(Mutual Fund) ಕೂಡ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ.

Mutual Funds: ಯಾವುದೇ ಶೇರ್ ಮಾರುಕಟ್ಟೆ ಜ್ಞಾನವಿಲ್ಲದೆ ಇದ್ದರೂ ಉತ್ತಮ ಮ್ಯೂಚುಯಲ್ ಫಂಡ್ ಗಳನ್ನೂ ಆಯ್ಕೆ ಮಾಡುವುದು ಹೇಗೆ ಗೊತ್ತೇ? 2

ನೀವು ಕೂಡ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿರಬಹುದು ಇಲ್ಲವೇ ನಿಮ್ಮ ಸ್ನೇಹಿತರು ಈ ರೀತಿ ಮಾಡುತ್ತಿರುವುದನ್ನು ನೋಡಿರಬಹುದು. ದೀರ್ಘಕಾಲಿಕ ಹೂಡಿಕೆಯ ವಿಚಾರಕ್ಕೆ ಬಂದರೆ ಮ್ಯೂಚುವಲ್ ಫಂಡ್ ನಿಮಗೆ ದೊಡ್ಡ ಮಟ್ಟದ ಲಾಭದ ರಿಟರ್ನ್(Profitable Return) ಅನ್ನು ತಂದು ಕೊಡುತ್ತದೆ ಆದರೆ ಅದರದೇ ಆದಂತಹ ರಿಸ್ಕ್ ಗಳು ಕೂಡ ಇರುತ್ತವೆ. ಹೀಗಾಗಿ ಯಾವುದು ಸರಿಯಾದ ಯೋಜನೆ ಎಂಬುದನ್ನು ಕೂಡ ನೀವು ತಿಳಿದುಕೊಳ್ಳಬೇಕಾಗುತ್ತದೆ. ನೀವು ಹೂಡಿಕೆ ಮಾಡುವ ಮುನ್ನ ಆ ಮ್ಯೂಚುವಲ್ ಫಂಡ್ ಪ್ಲಾನ್ ಈ ಹಿಂದೆ ಉತ್ತಮ ರಿಟರ್ನ್ಸ್ ನೀಡಿದೆ ಎಂದು ಮಾತ್ರಕ್ಕೆ ಮುಂದೆ ಕೂಡ ನೀಡುತ್ತದೆ ಎಂಬ ಭ್ರಮೆಯಲ್ಲಿ ನೀವು ಹೂಡಿಕೆ ಮಾಡುವುದು ಅಪಾಯಕಾರಿಯಾಗಿದೆ. ಇದನ್ನು ಓದಿ..Financial Mistakes: ಎಷ್ಟೇ ದುಡಿದರು ಹಣ ಕೈಯಲ್ಲಿ ಉಳಿಯುತ್ತಿಲ್ಲವೇ? ಭಾರತೀಯರು ಮಾಡುತ್ತಿರುವ ತಪ್ಪುಗಳೇನು ಗೊತ್ತೇ? ಇವುಗಳನ್ನು ತಿದ್ದುಕೊಳ್ಳಿ.

ಈ ಸಂದರ್ಭದಲ್ಲಿ ಗಮನವಹಿಸಬೇಕಾದಂತ ಮತ್ತೊಂದು ವಿಚಾರವೇನೆಂದರೆ ನೀವು ಪ್ರಮುಖವಾಗಿ ಸೋಶಿಯಲ್ ಮೀಡಿಯಾ ಯುಟ್ಯೂಬ್ ಸೇರಿದಂತೆ ಹಲವಾರು ಕಡೆಗಳಲ್ಲಿ ಕೆಲವೊಂದು ಫೈನಾನ್ಸಿಯಲ್ ಇನ್ಫ್ಲುಯೆನ್ಸರ್(Financial Influencer) ಗಳು ಅವರು ಹಣ ತೆಗೆದುಕೊಂಡು ಕೆಲವೊಂದು ಮ್ಯೂಚುಯಲ್ ಫಂಡ್ ಯೋಜನೆಗಳನ್ನು ಪ್ರಮೋಟ್ ಮಾಡುತ್ತಿರುತ್ತಾರೆ ಅದನ್ನೇ ನಿಜವೇ ಎಂದು ಭಾವಿಸಿ ನೀವು ಕೂಡ ಅದರಲ್ಲಿ ಇನ್ವೆಸ್ಟ್ ಮಾಡುವುದಕ್ಕೆ ಹೋಗಬೇಡಿ. ಯಾಕೆಂದರೆ ಅದಕ್ಕೆ ಅವರಿಗೆ ಪ್ರಮೋಷನ್ ಮಾಡಲು ಹಣ ಸಿಕ್ಕಿರುತ್ತದೆ ಆದರೆ ನೀವು ನಿಮ್ಮ ಸ್ವಂತ ಹಣವನ್ನು ಅದಕ್ಕೆ ಹೂಡಿಕೆ ಮಾಡುತ್ತಿದ್ದೀರಿ ಹೀಗಾಗಿ ಅಂತವರ ಮಾತನ್ನು ಕೇಳಿ ಮೋಸ ಹೋಗಬೇಡಿ.

ಈ ಮೇಲೆ ಹೇಳಿರುವುದು ನಾವು ಮ್ಯೂಚುವಲ್ ಫಂಡ್ ನಲ್ಲಿ ಇನ್ವೆಸ್ಟ್(Invest) ಮಾಡೋಕ್ಕಿಂತ ಮುಂಚೆ ಯಾವೆಲ್ಲ ಕೆಲಸಗಳನ್ನು ಮಾಡಬಾರದು ಎನ್ನುವುದರ ಬಗ್ಗೆ. ಇನ್ನು ಹೂಡಿಕೆ ಮಾಡುವಾಗ ಯಾವೆಲ್ಲ ವಿಚಾರಗಳನ್ನು ಗಮನಿಸಬೇಕು ಎನ್ನುವುದರ ಬಗ್ಗೆ ತಿಳಿಯುವುದಾದರೆ, ಮೊದಲಿಗೆ ನೀವು ಹೂಡಿಕೆ ಮಾಡಲು ಹೊರಟಿರುವಂತಹ ಯೋಜನೆ ಯಾವ ರೀತಿಯಲ್ಲಿ ಹಣವನ್ನು ಬಳಸಿಕೊಳ್ಳುತ್ತದೆ ಅದರ ಪ್ರಕ್ರಿಯೆಗಳೇ ನಿಮ್ಮನ್ನು ತಿಳಿದುಕೊಳ್ಳಬೇಕು. ಇವುಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಖಂಡಿತವಾಗಿ ಮೊದಲಿಗೆ ನಿಮಗೆ ಇವುಗಳ ರಿಟರ್ನ್ ಯಾವ ರೀತಿಯಲ್ಲಿ ಬರುತ್ತದೆ ಎಂಬುದಾಗಿ ಕೂಡ ತಿಳಿಯಬಹುದು. ಇದನ್ನು ಓದಿ..Xtreme 160R 4V: ಹೆಚ್ಚು ಬೇಡ- ಕೇವಲ 14 ಸಾವಿರ ಖರ್ಚು ಮಾಡಿ ಬೈಕ್ ಮನೆಗೆ ತೆಗೆದುಕೊಂಡು ಹೋಗಿ- ಅದು ಹೀರೋ Xtreme 160R 4V ಬೈಕ್.

ಮಾರುಕಟ್ಟೆಯಲ್ಲಿ ನಡೆಯುವಂತಹ ಏರಿಳಿತಗಳನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಆದರೆ Nippon India Mutual Fund ಸಂಸ್ಥೆ ತನ್ನ ಹೂಡಿಕೆದಾರರಿಗೆ ಯಾವ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕು ಹಾಗೂ ಯಾವ ಸಂದರ್ಭದಲ್ಲಿ ಹಿಂದಕ್ಕೆ ಸರಿಯಬೇಕು ಎನ್ನುವುದರ ಕುರಿತಂತೆ ಸಂಪೂರ್ಣ ಮಾಹಿತಿಗಳನ್ನು ತಿಳಿಸುತ್ತದೆ. ಇದರಲ್ಲಿ ತನ್ನ ಹೂಡಿಕೆದಾರರಿಗೆ ಎಷ್ಟು ಮತದ ರಿಸ್ಕ್ ಅನ್ನು ಪಡೆದುಕೊಳ್ಳಬಹುದು ಹಾಗೂ ಯಾವ ಸಂದರ್ಭದಲ್ಲಿ ಅದನ್ನು ಪಡೆಯಬೇಕು ಎನ್ನುವುದರ ಬಗ್ಗೆ ಕೂಡ ಮಾರ್ಗ ಸೂಚಿಗಳನ್ನು(Guidance) ನೀಡಲಾಗುತ್ತದೆ. ಸರಿಯಾದ ಪ್ರಕ್ರಿಯೆಗಳೊಂದಿಗೆ ಫಂಡ್ ಹೌಸ್ ನಲ್ಲಿ ಹೂಡಿಕೆ ಮಾಡುವಂತಹ ಹೂಡಿಕೆದಾರರಿಗೆ ಉತ್ತಮವಾದ ರಿಟರ್ನ್ ಅನ್ನು ಪಡೆಯುವಂತಹ ಸಾಮರ್ಥ್ಯ ಇರುತ್ತದೆ ಎಂಬುದಾಗಿ ವಿಶ್ಲೇಷಕರು ಹೇಳುತ್ತಾರೆ. ಇದನ್ನು ಓದಿ..Maruti Suzuki: ಮಾರುತಿ ಕಾರ್ ಮೇಲೆ ಭರ್ಜರಿ ಡಿಸ್ಕೌಂಟ್- ನೋಡಿ ಇಂದೇ ಖರೀದಿ ಮಾಡಿ, ಕಾರ್ ಅನ್ನು ಮನೆಗೆ ತನ್ನಿ.

Best News in Kannadabest saving Schemes in kannadahow to earn money in kannadaHow to save money in kannadakannada livekannada moneyKannada NewsKannada Trending Newslive newsLive News Kannadalive trending newsmoney kannadamoney saving in kannadaNews in Kannadasaving Schemes in kannadatop news kannada