ಗೂಗಲ್ ಬಿಚ್ಚಿಟ್ಟಿತು ಅಸಲಿ ಸತ್ಯ, ಹುಡುಗಿಯರು ರಾತ್ರಿ ಒಬ್ಬರೇ ಇದ್ದಾಗ ಯಾವುದರ ಬಗ್ಗೆ ಹುಡುಕುತ್ತಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಮೊಬೈಲ್ ಹಾಗೂ ಇಂಟರ್ನೆಟ್ ಎನ್ನುವುದು ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಅವುಗಳನ್ನು ಹೊರತುಪಡಿಸಿ ಮನುಷ್ಯ ಜೀವಿಸಲು ಕೂಡ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ. ಕೆಲವೊಮ್ಮೆ ಮೊಬೈಲ್ ಫೋನುಗಳು ಇಂದಿನ ಯುಗದಲ್ಲಿ ಬದುಕಲು ಎಷ್ಟು ಪ್ರಾಮುಖ್ಯವಾಗಿದೆ ಎಂಬುದನ್ನು ಕೂಡ ತಿಳಿಸಿಕೊಡುವುದರಿಂದಾಗಿ ಇದನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕು. ಮೊಬೈಲ್ಗಳು ಆಧುನಿಕ ಕಾಲದ ಜೀವಾಳ ಎಂದರೆ ಖಂಡಿತವಾಗಿಯೂ ತಪ್ಪಲ್ಲ.

ಅದರಲ್ಲಿ ಮೊಬೈಲ್ ಫೋನ್ನಲ್ಲಿ ನಮಗೆ ಯಾವ ವಿಚಾರಗಳ ಕುರಿತಂತೆ ಗೊಂದಲ ಅಥವಾ ತಿಳಿಯದೆ ಇದ್ದಾಗ ನಾವೆಲ್ಲ ಗೂಗಲ್ ನಲ್ಲಿ ಸರ್ಚ್ ಮಾಡಿಯೇ ಮಾಡುತ್ತೇವೆ. ನಮಗೆ ಯಾವುದೇ ವಿಚಾರಗಳ ಕುರಿತಂತೆ ಮಾಹಿತಿಗಳು ಬೇಕಾಗಿದ್ದಾಗ ಗೂಗಲ್ ಸರ್ಚ್ ಮಾಡುತ್ತೇವೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ನಮಗೆ ಏನೇ ಬೇಕಾದರೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಗೂಗಲ್ ನಲ್ಲಿ ಇಂಟರ್ನೆಟ್ ಸೇವೆಯ ಮೂಲಕ ಸರ್ಚ್ ಮಾಡುತ್ತೇವೆ. ನಮಗೆಲ್ಲರಿಗೂ ಹುಡುಗಿಯರು ಅಥವಾ ಮಹಿಳೆಯರು ರಾತ್ರಿಯ ಸಮಯದಲ್ಲಿ ಏನನ್ನು ಸರ್ಚ್ ಮಾಡುತ್ತಾರೆ ಎಂಬುದರ ಕುರಿತಂತೆ ಕುತೂಹಲವಿರಬಹುದು. ಇದರ ಕುರಿತಂತೆ ಕೂಡ ಗೂಗಲ್ ನಮಗೆ ಹಲವಾರು ಸುದ್ದಿಗಳನ್ನು ಬಿಚ್ಚಿಟ್ಟಿದೆ. ಹಾಗಿದ್ದರೆ ಮಲಗುವ ಸಂದರ್ಭದಲ್ಲಿ ಹುಡುಗಿಯರು ಸರ್ಚ್ ಮಾಡುವಂತಹ ನಾಲ್ಕು ಪ್ರಮುಖ ವಿಷಯಗಳು ಏನು ಎಂಬುದನ್ನು ತಿಳಿಯೋಣ ಬನ್ನಿ.

ಗೂಗಲ್ ಬಿಚ್ಚಿಟ್ಟಿತು ಅಸಲಿ ಸತ್ಯ, ಹುಡುಗಿಯರು ರಾತ್ರಿ ಒಬ್ಬರೇ ಇದ್ದಾಗ ಯಾವುದರ ಬಗ್ಗೆ ಹುಡುಕುತ್ತಾರೆ ಗೊತ್ತೇ?? 4

ಆನ್ಲೈನ್ ಶಾಪಿಂಗ್: ಹುಡುಗಿಯರು ಎಂದಾಕ್ಷಣ ಹೊಸ ಹೊಸ ಬಗೆಯ ಫ್ಯಾಷನ್ ಹಾಗೂ ಫ್ರೆಂಡ್ ಗಳನ್ನು ಅವರು ಫಾಲೋ ಮಾಡುತ್ತಲೇ ಇರುತ್ತಾರೆ. ಹೀಗಾಗಿ ಯಾವುದೇ ರೀತಿಯ ಹೊಸ ರೀತಿಯ ಫ್ಯಾಷನ್ ಹಾಗೂ ಟ್ರೆಂಡ್ ಡ್ರೆಸ್ಗಳು ಬಂದಾಗ ಮೊದಲು ಬಿಡುಗಡೆಯಾಗುವುದೇ ಆನ್ಲೈನ್ ನಲ್ಲಿ. ಹೀಗಾಗಿ ಅವರುಗಳು ರಾತ್ರಿಯಲ್ಲಿ ಫೋನ್ ಯೂಸ್ ಮಾಡುವಾಗ ಖಂಡಿತವಾಗಿ ಈ ಕುರಿತಂತೆ ಮೊದಲಿಗೆ ಹುಡುಕುತ್ತಾರೆ. ಯಾಕೆಂದರೆ ಪ್ರತಿಯೊಬ್ಬ ಹುಡುಗಿಗೂ ಕೂಡ ಹೊಸ ಫ್ಯಾಷನ್ ಹಾಗೂ ಟ್ರೆಂಡ್ ಗೆ ಅಪ್ಡೇಟ್ ಆಗಿರುವ ಬಯಕೆ ಇದ್ದೇ ಇರುತ್ತದೆ. ಹೀಗಾಗಿ ಈ ವಿಚಾರ ಅವರ ಮೊದಲ ಪ್ರಾತಿನಿಧ್ಯ ವಾಗಿರುತ್ತದೆ ಎಂದರೆ ತಪ್ಪಾಗಲಾರದು.

ಗೂಗಲ್ ಬಿಚ್ಚಿಟ್ಟಿತು ಅಸಲಿ ಸತ್ಯ, ಹುಡುಗಿಯರು ರಾತ್ರಿ ಒಬ್ಬರೇ ಇದ್ದಾಗ ಯಾವುದರ ಬಗ್ಗೆ ಹುಡುಕುತ್ತಾರೆ ಗೊತ್ತೇ?? 5

ಬ್ಯೂಟಿ ಟಿಪ್ಸ್; ಎಲ್ಲರಿಗಿಂತ ಹೆಚ್ಚಾಗಿ ಪ್ರತಿಯೊಬ್ಬ ಹೆಣ್ಣು ಮಗಳು ಕೂಡ ತಮ್ಮ ಸೌಂದರ್ಯದ ಕುರಿತಂತೆ ಬೇರೆಯಲ್ಲ ವಿಚಾರಗಳಿಗಿಂತ ಹೆಚ್ಚಾಗಿ ಆಸಕ್ತಿ ಹಾಗೂ ವಿಶೇಷ ಕಾಳಜಿಯನ್ನು ಹೊಂದಿರುತ್ತಾರೆ. ಇಂತಹ ವಿಚಾರದಲ್ಲಿ 17ರಿಂದ 34ನೇ ವಯಸ್ಸಿನ ಹುಡುಗಿಯರು ಹೆಚ್ಚಾಗಿ ಆಸಕ್ತಿಯಿಂದ ಇರುತ್ತಾರೆ. ವಿವಿಧ ಪ್ರಕಾರದ ಕಾಸ್ಮೆಟಿಕ್ಸ್ ಮೇಕಪ್ ಕಿಟ್ ಗಳ ಕುರಿತಂತೆ ಅಂತರ್ಜಾಲದಲ್ಲಿ ಹುಡುಕುತ್ತಲೇ ಇರುತ್ತಾರೆ. ಅದರಲ್ಲೂ ಹೆಚ್ಚಾಗಿ ಯೂಟ್ಯೂಬ್ನಲ್ಲಿ ಬ್ಯೂಟಿ ಟಿಪ್ಸ್ ಗಳ ಕುರಿತಂತೆ ವಿಡಿಯೋಗಳನ್ನು ನೋಡುತ್ತಲೇ ಇರುತ್ತಾರೆ. ಅದರಲ್ಲೂ ಕೂಡ ಗೂಗಲ್ ಹೇಳುವಂತೆ ಹೆಚ್ಚಾಗಿ ಹುಡುಗಿಯರು ಕೊರಿಯನ್ ಬ್ಯೂಟಿ ಟಿಪ್ಸ್ ಗಳನ್ನು ಫಾಲೋ ಮಾಡುತ್ತಾರೆ.

ಹಾಡುಗಳನ್ನು ಕೇಳುವುದು; ಗೂಗಲ್ ಹೇಳುವ ಪ್ರಕಾರ ಇಡೀ ದಿನ ಕೆಲಸ ಹಾಗೂ ಹಲವಾರು ವಿಚಾರಗಳಿಂದ ಬ್ಯುಸಿ ಆಗಿರುವ ಹುಡುಗಿಯರು ರಾತ್ರಿಯ ಸಮಯದಲ್ಲಿ ಉತ್ತಮವಾದಂತಹ ಮನಸ್ಸಿಗೆ ಹಿತವನ್ನು ನೀಡುವಂತಹ ಹಾಡುಗಳನ್ನು ಕೇಳುವಲ್ಲಿ ಮಗ್ನರಾಗಿರುತ್ತಾರೆ. ರಾತ್ರಿಯ ಸಂದರ್ಭದಲ್ಲಿ ರೋಮ್ಯಾಂಟಿಕ್ ಹಾಗೂ ಮೇಲೋಡಿಯಸ್ ಆಗಿರುವ ಹಾಡುಗಳನ್ನು ನೋಡುತ್ತ ಹಾಗೂ ಕೇಳುತ್ತಾ ತಮ್ಮ ಸಮಯಗಳನ್ನು ಹುಡುಗಿಯರು ಕಳೆಯುತ್ತಾರೆ. ಇದು ಅವರನ್ನು ಮನಸ್ಸಿಗೆ ನೆಮ್ಮದಿ ಹಾಗೂ ಎಲ್ಲ ದುಃಖಗಳಿಂದ ಹೊರಬರುವಂತಹ ಚೈತನ್ಯವನ್ನು ನೀಡುತ್ತದೆ. ಅವರ ದಿನ ಪೂರ್ತಿ ಸುಸ್ತನ್ನು ಕೂಡ ಹೋಗಲಾಡಿಸುತ್ತದೆ. ಈ ವಿಚಾರವನ್ನು ಸ್ವತಃ ಗೂಗಲ್ ಸರ್ವೆ ಪ್ರಕಾರ ತಿಳಿದುಕೊಂಡಿದೆ. ಅದರಲ್ಲೂ ಹಲವಾರು ಜನರು ಈ ಹಾಡುಗಳನ್ನು ಕೇಳುತ್ತಾ ಕೇಳುತ್ತಾ ನಿದ್ರೆಗೆ ಜಾರುವ ಪ್ರಯತ್ನವನ್ನು ಕೂಡ ಮಾಡುತ್ತಾರೆ.

ಗೂಗಲ್ ಬಿಚ್ಚಿಟ್ಟಿತು ಅಸಲಿ ಸತ್ಯ, ಹುಡುಗಿಯರು ರಾತ್ರಿ ಒಬ್ಬರೇ ಇದ್ದಾಗ ಯಾವುದರ ಬಗ್ಗೆ ಹುಡುಕುತ್ತಾರೆ ಗೊತ್ತೇ?? 6

ಸ್ಟಡಿ ಹಾಗೂ ಕರಿಯರ್; ಮೊದಲಿಗೆ ಸ್ಟಡಿಯ ಕುರಿತಂತೆ ಹೇಳುವುದಾದರೆ ತಮ್ಮ ಶಿಕ್ಷಣದ ವಿಚಾರವಾಗಿ ಏನಾದರೂ ವಿಷಯಗಳು ಹಾಗೂ ಮಾಹಿತಿಗಳು ಬೇಕೆಂದು ಅನಿಸಿದರೆ ಹುಡುಗಿಯರು ಗೂಗಲ್ನಲ್ಲಿ ಹಾಗೂ ಅಂತರ್ಜಾಲದಲ್ಲಿ ಇದರ ಕುರಿತಂತೆ ಹುಡುಕುತ್ತಾರೆ. ಇಂದಿನ ಜಗತ್ತು ಸಾಕಷ್ಟು ವೇಗವಾಗಿ ಇರುವುದರಿಂದಾಗಿ ಹುಡುಗಿಯರು ತಮ್ಮ ಕರಿಯರ್ ಕುರಿತಂತೆ ಸಾಕಷ್ಟು ಚಿಂತಿತರಾಗುತ್ತಾರೆ. ಹೀಗಾಗಿ ಗೂಗಲ್ನಲ್ಲಿ ತಮ್ಮ ವಿದ್ಯಾರ್ಹತೆಗೆ ಎಂತಹ ಕೆಲಸಗಳನ್ನು ನಾವು ಟ್ರೈ ಮಾಡಬಹುದು ಎಂಬುದರ ಕುರಿತಂತೆ ಹುಡುಕುತ್ತಲೇ ಇರುತ್ತಾರೆ. ಈ ನಾಲ್ಕು ವಿಚಾರಗಳ ಕುರಿತಂತೆ ಪ್ರಮುಖವಾಗಿ ಹುಡುಗಿಯರು ಗೂಗಲ್ ಹಾಗೂ ಇನ್ನಿತರ ಮಾಧ್ಯಮಗಳ ಮೂಲಕ ರಾತ್ರಿಯ ಸಮಯದಲ್ಲಿ ಮೊಬೈಲ್ನಲ್ಲಿ ವೀಕ್ಷಿಸುತ್ತಾರೆ ಎನ್ನುವುದನ್ನು ಸರ್ವೆ ಮೂಲಕ ತಿಳಿಯಲಾಗಿದೆ. ಈ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.