ಆರೋಗ್ಯವಾಗಿದ್ದ 13 ವರ್ಷದ ಹುಡುಗಿ, ಎದೆ ನೋವು ಎಂದಳು, ಆಸ್ಪತ್ರೆ ಸೇರಿದವಳು ವಾಪಸ್ಸು ಬರಲಿಲ್ಲ, ಕಾರಣ ಕೇಳಿ ಶಾಕ್ ಆದ ಪೋಷಕರು. ಏನಾಗಿತ್ತು ಗೊತ್ತೇ?

ಈಗಿನ ಕಾಲದ ಜೀವನಶೈಲಿಯಲ್ಲಿ ಯಾರಿಗೆ ಯಾವಾಗ ಏನಾಗುತ್ತದೆ ಎಂದು ಹೇಳಲು ಆಗೋದಿಲ್ಲ. ಹೃದಯ ಸಂಬಂಧಿ ಸಮಸ್ಯೆಗಳು, ಹಾರ್ಟ್ ಅಟ್ಯಾಕ್ ಇದೆಲ್ಲವೂ ಸಹ ಚಿಕ್ಕವರು ದೊಡ್ಡವರು ಎನ್ನದೆ ಎಲ್ಲರಿಗು ಬರುತ್ತಿದೆ. ಇದೀಗ ಮನಸ್ಸಿಗೆ ನೋವು ನೀಡುವಂಥ ಘಟನೆಯೊಂದು ತೆಲಂಗಾಣದ ನಡೆದಿದೆ. 13 ವರ್ಷದ ಪುಟ್ಟ ಹುಡುಗಿಯೊಬ್ಬಳು ಮಧ್ಯರಾತ್ರಿ ಮಲಗಿದ್ದವಳು ಎದ್ದು ಎದೆ ನೋವು ಎಂದು ಹೇಳಿ, ತಂದೆ ತಾಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆ ಹುಡುಗಿ ಮತ್ತೆ ಬರಲೇ ಇಲ್ಲ ಲ್.. ಅಷ್ಟಕ್ಕೂ ನಡೆದಿದ್ದೇನು ಗೊತ್ತಾ?

ಈ ಘಟನೆ ತೆಲಂಗಾಣ, ಮೆಹಬೂಬಾಬಾದ್ ಜಿಲ್ಲೆಯ, ಮಾರಿಪೆದ ಮಂಡಲಕ್ಕೆ ಸೇರಿದ ಬೋಯಪಲೇಮ್ ಗ್ರಾಮಕ್ಕೆ ಸೇರುವ ಬೋದತಾಂಡ ಎನ್ನುವಲ್ಲಿ ನಡೆದಿದೆ. 6ನೇ ತರಗತಿ ಓದುತ್ತಿರುವ ಬಾಲಕಿ ಶ್ರಾವಂತಿ. ರಾಮನವಮಿ ದಿನ ಶಾಲೆಗೆ ರಜೆ ಇದ್ದಾಗ, ಫ್ರೆಂಡ್ಸ್ ಜೊತೆಗೆ ಚೆನ್ನಾಗಿ ಆಟವಾಡಿದ್ದಾಳೆ. ಅವರ ಹೊಸ ಮನೆಗೆ ತಂದೆ ತಹಿ ಹೋದರೆ, ಶ್ರಾವಂತಿ ಮಾತ್ರ ಹಳೇ ಮನೆಯಲ್ಲಿ ಅಜ್ಜಿ ಜೊತೆ ಇರುತ್ತೇನೆ ಎಂದು ಅಲ್ಲೇ ಮಲಗಿದಳು. ಶುಕ್ರವಾರ ಮಧ್ಯರಾತ್ರಿ 3 ಗಂಟೆ ಸಮಯಕ್ಕೆ ಎದ್ದು, ಎದೆ ನೋವು ಎಂದು ಅಜ್ಜಿಗೆ ಹೇಳಿ, ವಾಶ್ ರೂಮ್ ಗೆ ಹೋಗಿ ಬಂದು ಮತ್ತೆ ಮಲಗಿದ್ದಾಳೆ. ಮೊಮ್ಮಗಳಿಗೆ ಸುಸ್ತಾಗಿರೋದು ನೋಡಿ ಅಜ್ಜಿ ತಮ್ಮ ಮಗನಿಗೆ ವಿಷಯ ತಿಳಿಸಿದ್ದಾರೆ.

ಆರೋಗ್ಯವಾಗಿದ್ದ 13 ವರ್ಷದ ಹುಡುಗಿ, ಎದೆ ನೋವು ಎಂದಳು, ಆಸ್ಪತ್ರೆ ಸೇರಿದವಳು ವಾಪಸ್ಸು ಬರಲಿಲ್ಲ, ಕಾರಣ ಕೇಳಿ ಶಾಕ್ ಆದ ಪೋಷಕರು. ಏನಾಗಿತ್ತು ಗೊತ್ತೇ? 2

ಶ್ರಾವಂತಿ ತಂದೆ ತಾಯಿ ತಕ್ಷಣವೇ ಬಂದು ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು, ಅಷ್ಟರಲ್ಲಾಗಲೇ ಆಕೆಯ ಪ್ರಾಣಪಕ್ಷಿ ಹಾರಿ ಹೋಗಿತ್ತು. ಇದನ್ನು ನಂಬಲು ಆ ತಂದೆತಾಯಿಗೆ ಸಾಧ್ಯವಾಗದೆ, ಖಮ್ಮಮ್ ನಲ್ಲಿರುವ ಆಸ್ಪತ್ರೆಗೆ ತಕ್ಷಣವೇ ಮಗಳನ್ನು ಕರೆದುಕೊಂಡು ಹೋದರು. ಆದರೆ ಶ್ರಾವಂತಿಯನ್ನು ಟೆಸ್ಟ್ ಮಾಡಿದ ಡಾಕ್ಟರ್ ಗಳು, ಹೃದಯಾಘಾತದಿಂದ ವಿಧಿವಶಳಾಗಿದ್ದಾಳೆ ಎಂದು ತಿಳಿಸಿದ್ದಾರೆ. ಕೇವಲ 13 ವರ್ಷದ ಬಾಲಕಿ, ಓದಿ ಚೆನ್ನಾಗಿ ಬೆಳೆದು ಒಳ್ಳೆಯ ಹೆಸರು ಮಾಡುವ ಕನಸು ಕಂಡಿದ್ದ ಮಗುವಿಗೆ ಹೀಗಾಯಿತು ಎಂದು ಆಕೆಯ ತಂದೆ ತಾಯಿ ಹಾಗೂ ಇಡೀ ಊರಿನವರು ಕಣ್ಣೀರು ಹಾಕಿದ್ದಾರೆ.