ಹೋಟೆಲ್ ನಂತೆ ಮೃದು ಇಡ್ಲಿ ಮಾಡಲು ಸರಿಯಾದ ಅಳತೆಯಲ್ಲಿ ಹೀಗೆ ಇಡ್ಲಿ ಮಾಡಿ, ಹೋಟೆಲ್ ಕೂಡ ಇಡಬಹುದು. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇಡ್ಲಿ ಮಾಡೋದು ಅಂದ್ರೆ ಎಲ್ಲರಿಗೂ ಸುಲಭವಾದ ಕೆಲಸವಲ್ಲ. ಯಾಕೆಂದ್ರೆ ಸರಿಯಾದ ಅಳತೆಯಲ್ಲಿ ಸಾಮಗ್ರಿಗಳನ್ನು ಹಾಕದೇ ಇದ್ರೆ ಇಡ್ಲಿ ಮೆದುವಾಗಿ ಬರಲು ಸಾಧ್ಯವೇ ಇಲ್ಲ. ಹಾಗಾಗಿ ಸರಿಯಾದ ಪ್ರಮಾಣದಲ್ಲಿ ಸಾಮಗ್ರಿಗಳನ್ನು ಹಾಕಿದ್ರೆ ಇಡ್ಲಿ ಸೂಪರ್ ಆಗಿ ಬರತ್ತೆ. ನಾವಿಂದು ಹೇಳುವ ರೀತಿಯಲ್ಲಿ ಅಳತೆ ಮಾಡಿ ಸಾಮಗ್ರಿಗಳನ್ನು ಹಾಕಿ ಇಡ್ಲಿ ಮಾಡಿ ನೋಡಿ. ಇಡ್ಲಿ ಬಿಸನೆಸ್ ಮಾಡುವವರುಗೂ ಕೂಡ ಈ ಅಳತೆ ಸಹಾಯಕವಾಗುತ್ತದೆ. ಒಮ್ಮೆ ಟ್ರೈ ಮಾಡಿ.

ಮೆದುವಾದ ಇಡ್ಲಿ ಮಾಡಲು ಬೇಕಾಗುವ ಸಾಮಗ್ರಿಗಳು: ಇಡ್ಲಿ ಅಕ್ಕಿ 4 ಲೋಟ, ಉದ್ದಿನ ಬೇಳೆ 1 ಲೋಟ, ಅನ್ನ – 4 ಇಡ್ಲಿ ತಟ್ಟೆಯಷ್ಟು,. (ಈ ಅನ್ನ ಮಾಡಲು ಕುಚ್ಚಲಕ್ಕಿ ಅಥವಾ ಬಿಳಿ ಅಕ್ಕಿಯನ್ನು ತೆಗೆದುಕೊಳ್ಳಬಹುದು) ಈಸ್ಟ್ ಒಂದು ಚಮಚ, ಉಪ್ಪು ರುಚಿಗೆ ತಕ್ಕಷ್ಟು, ನೀರು.

ಇಡ್ಲಿ ಮಾಡುವ ವಿಧಾನ: ಮೊದಲು 4 ಕಪ್ ಅಕ್ಕಿ, ಒಂದು ಕಪ್ ಉದ್ದಿನ ಬೇಳೆಯನ್ನು ರಾತ್ರಿ ಪೂರ್ತಿ ನೆನೆಸಿಡಿ. ನಂತರ ನೆನೆದ ಬೆಲೆ ಹಾಗೂ ಅಕ್ಕಿಯನ್ನು ಸೇರಿಸಿ. ಇದಕ್ಕೆ 4 ಇಡ್ಲಿ ಕಪ್ ಅಳತೆಯ ಅನ್ನವನ್ನು ಸೇರಿಸಿ. ಇದನ್ನು ಒಂದು ಲೋಟ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿಕೊಂಡ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ತೆಗೆದಿಟ್ಟುಕೊಳ್ಳಿ. ನಂತರ ಒಂದು ಚಿಕ್ಕ ಬೌಲ್ ತೆಗೆದುಕೊಂಡು ಅದಕ್ಕೆ ಈಸ್ಟ್ ನ್ನು ಹಾಕಿ ನಂತರ ಸ್ವಲ್ಪ ಉಗುರುಬೆಚ್ಚಗಿನ ನೀರನ್ನು ಹಾಕಿ, ಇದಕ್ಕೆ ಕಾಲು ಕಪ್ ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

ನಂತರ ಇದನ್ನು ಇಡ್ಲಿ ಮಿಶ್ರಣಕ್ಕೆ ಸೇರಿಸಿ. ಸುಮಾರು 5 ನಿಮಿಷಗಳ ಕಾಲ ಚೆನ್ನಾಗಿ ಮಿಕ್ಸ್ ಮಾಡಿ. ಸರಿಯಾಗಿ ಮಿಶ್ರಣ ಮಾಡದಿದ್ದರೆ ಈಸ್ಟ್ ಮಿಕ್ಸ್ ಆಗುವುದಿಲ್ಲ ಆಗ ಇಡ್ಲಿ ಮೆದುವಾಗುವುದಿಲ್ಲ. ಈ ಮಿಶ್ರಣದ ಪಾತ್ರೆಯನ್ನು ಒಂದು ತೆಳುವಾದ ಶುಭ್ರ ಬಟ್ಟೆಯನ್ನು ಮುಚ್ಚಿಇಡಿ. ರಾತ್ರಿ ಇಡೀ ಹಾಗೇ ಇಟ್ಟರೆ ಬೆಳಗಾಗುವಷ್ಟರಲ್ಲಿ ಈ ಮಿಶ್ರಣ ಚೆನ್ನಾಗು ಉಬ್ಬಿಬರುತ್ತದೆ. ನಂತರ ಬೆಳಗ್ಗೆ ಇಡ್ಲಿ ಕಪ್ ಗೆ ಎಣ್ಣೆ ಸವರಿ ಇಡ್ಲಿ ಹಿಟ್ಟನ್ನು ಹಾಕಿ ಬೇಯಿಸಿ. ಹೀಗೆ ಮೃದುವಾದ ಇಡ್ಲಿ ತಯಾರಿಸಿದರಾಯಿತು.