ಒಂದು ತುತ್ತು ದೋಸೆಗೆ ಒದ್ದಾಡ್ಡಿದ್ದ ಯುವಕ ಇಂದು ದೇಶಕ್ಕೆಲ್ಲಾ ದೋಸೆ ಹಂಚಿ ಸಾವಿರಾರು ಕೋಟಿ ದುಡಿದ್ದಿದ್ದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇಂದು ನಾವು ಹೇಳುತ್ತಿರುವುದು ಒಂದು ಸ್ಪೂರ್ತಿದಾಯಕ ಕತೆ. ಕೊನೆಯತನಕ ಗಮನವಿಟ್ಟು ಓದಿ. ಜೀವನದಲ್ಲಾಗಲಿ ಅಥವಾ ಉದ್ಯಮದಲ್ಲಾಗಲಿ ಯಶಸ್ಸು ಸಾಧಿಸಬೇಕೆಂದರೇ, ಹಲವಾರು ಕಷ್ಟಗಳನ್ನ ಎದುರಿಸಬೇಕು. ಇಂದು ನಾವು ಹೇಳ ಹೊರಟಿರುವುದು ಅಂತಹದೇ ಯುವಕನ ಕತೆ. ತಿನ್ನಲು ಅನ್ನವಿಲ್ಲದ ಬಡಕುಟುಂಬದ ಯುವಕನೊಬ್ಬ ಇಂದು ಸಾವಿರಾರು ಕೋಟಿ ಮೌಲ್ಯದ ಕಂಪನಿಯ ಮಾಲೀಕ. ಅದಲ್ಲದೇ ಸಾವಿರಾರು ಕುಟುಂಬಗಳ ಪಾಲಿಗೆ ಅನ್ನದಾತ ಸಹ. ಅಂದ ಹಾಗೆ ಆ ವ್ಯಕ್ತಿಯ ಹೆಸರು ಮುಸ್ತಫಾ.

ಮುಸ್ತಫಾ ಕೇರಳದ ಒಂದು ಬಡ ಕುಟುಂಬದಲ್ಲಿ ಜನಿಸುತ್ತಾರೆ. ತಂದೆ ಕೂಲಿ ಕಾರ್ಮಿಕ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. 6 ನೇ ತರಗತಿಯಲ್ಲಿ ಫೇಲ್ ಆಗಿ ಶಾಲೆ ಬಿಟ್ಟಿದ್ದ ಮುಸ್ತಫಾನಿಗೆ, ಟೀಚರ್ ಒಬ್ಬರು ತೋರಿಸಿದ ದಯೆಯಿಂದ ಮತ್ತೆ ಶಾಲೆಗೆ ಸೇರಿ , ಉತ್ತೀರ್ಣರಾಗಿ ಒಂದು ಸಣ್ಣ ಕೆಲಸಕ್ಕೆ ಸೇರಿಕೊಂಡರು. ಆದರೇ ಕೆಲಸದಲ್ಲಿ ಹೇಳಿಕೊಳ್ಳುವಂತಹ ಪ್ರಗತಿ ಇರದ ಕಾರಣ, ಒಂದು ಹೊಸ ಉದ್ಯಮ ಸ್ಥಾಪಿಸಲು ಯೋಚನೆ ಮಾಡುತ್ತಾರೆ. ಆಗ ಹೊಳೆದಿದ್ದೇ , ನಾವೇಕೆ ರೆಡಿ ದೋಸೆ ಹಿಟ್ಟನ್ನ ಪ್ಯಾಕ್ ಮಾಡಿ ಮಾರಬಾರದೆಂದು. ತಕ್ಷಣ ಐವತ್ತು ಸಾವಿರ ರೂಪಾಯಿ ಬಂಡವಾಳ ಹೂಡಿ, ಕಂಪನಿ ಶುರು ಮಾಡುತ್ತಾರೆ. ಆದರೇ ತಾನು ಕೆಲಸ ಬಿಡದೇ ನಿರ್ವಹಣೆಗೆಂದು ಬೇರೆಯವರನ್ನು ನೇಮಿಸುತ್ತಾರೆ.

ಆದರೇ ನಂಬಿಕಸ್ತ ಸರಿಯಾಗಿ ಕೆಲಸ ಮಾಡದ ಕಾರಣ ಕಂಪನಿ ಕುಂಟುತ್ತಾ ಸಾಗಿತು. ಕೊನೆಗೆ ತಾನು ಮಾಡುವ ಕೆಲಸ ಬಿಟ್ಟು , ಕಂಪನಿಯನ್ನ ತಾನೇ ನಡೆಸಲು ಶುರು ಮಾಡಿದರು. ಆರಂಭದಲ್ಲಿ ಎಲ್ಲರೂ ದೋಸೆಗೆ ಗತಿಯಿಲ್ಲದವರು, ದೋಸೆ ಹಿಟ್ಟನ್ನು ಮಾರುತ್ತಾರೆಂದು ಹೀಯಾಳಿಸುತ್ತಿದ್ದರು.ಆದರೇ ಛಲ ಬಿಡದ ಮುಸ್ತಫಾ , ಉದ್ಯಮವನ್ನು ನಿಧಾನವಾಗಿ ಕುಂಟುತ್ತಾ ಸಾಗಿಸಿದರು. ನಂತರ ತಮ್ಮ ಐಡಿ ಫ್ರೆಶ್ ಫುಡ್ ಗೆ ಹೊಸ ಬಂಡವಾಳ ಹೂಡಿಕೆಯನ್ನು ತಂದರು.

ಐಟಿ ಉದ್ಯಮ ಬೆಳೆದಂತೆ ಐಡಿ ಫ್ರೆಶ್ ಫುಡ್ ಕಂಪನಿಯಲ್ಲಿ 2000 ಕೋಟಿ ರೂಪಾಯಿ ಹೂಡಿಕೆ ಹರಿದು ಬಂತು. ಆನ್ ಲೈನ್ ಮಾರುಕಟ್ಟೆಯಲ್ಲಿ ಹಾಗೂ ರಿಟೇಲ್ ಮಾರುಕಟ್ಟೆಯಲ್ಲಿ ಜನ ರೆಡಿ ದೋಸೆ ಹಿಟ್ಟಿಗೆ ಮುಗಿಬಿದ್ದರು. ದೋಸೆ ಹಿಟ್ಟಿನ ಮಾರಾಟ ಕಾರ್ಪೋರೇಟ್ ಶೈಲಿಯಲ್ಲಿ ಮಾರಾಟವಾಯಿತು. ಹೀಗೆ ದೋಸೆ ಹಿಟ್ಟಿನ ಕಂಪನಿ ಈಗ ಜನಪ್ರಿಯವಾಗಿ ಬೆಳೆದಿದೆ. ಕಷ್ಟಗಳು ಸಾವಿರಾರು ಬಂದರೂ, ಅದನ್ನ ಧೈರ್ಯದಿಂದ ಎದುರಿಸಿದರೇ, ಯಶಸ್ಸು ಸಿಗುತ್ತದೆ ಎನ್ನುವುದಕ್ಕೆ ಮುಸ್ತಫಾರ ಈ ಕತೆಯೇ ಉದಾಹರಣೆಯಾಗಿದೆ.