ಭಾರತ ವಿರುದ್ಧ ಸೋತ ಬೆನ್ನಲ್ಲೇ ಇಂಗ್ಲೆಂಡ್ ತಂಡಕ್ಕೆ ಮತ್ತೊಂದು ಶಾಕ್, ಆರಂಭದಲ್ಲಿಯೇ ಬಾರಿ ವಿಗ್ನ. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆ ತಿಳಿದಿರುವಂತೆ ಈಗಾಗಲೇ ಐಪಿಎಲ್ ಹಬ್ಬ ಮುಗಿದು ಟಿ ಟ್ವೆಂಟಿ ವರ್ಲ್ಡ್ ಕಪ್ ನತ್ತ ಕ್ರಿಕೆಟ್ ಪ್ರೇಮಿಗಳು ತಮ್ಮ ದೃಷ್ಟಿಯನ್ನು ನೆಟ್ಟಿದ್ದಾರೆ. ಈಗಾಗಲೇ 2021 ಐಪಿಎಲ್ ಮುಗಿದು ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಇದನ್ನು ಗೆದ್ದಿತ್ತು. ಇನ್ನು ಇತರ ಗುಂಗು ಮರೆಯುವ ಹೊತ್ತಲ್ಲೇ ಟಿ ಟ್ವೆಂಟಿ ವರ್ಲ್ಡ್ ಕಪ್ ಪ್ರಾರಂಭವಾಗಿದೆ. ಈಗಾಗಲೇ ವಾರ್ಮ್ ಅಪ್ ಮ್ಯಾಚ್ ಗಳು ಹಾಗೂ ಕ್ವಾಲಿಫೈಯರ್ ಪಂದ್ಯಗಳು ನಡೆಯುತ್ತಿವೆ.

ಇನ್ನು ಈಗಾಗಲೇ ಮೊದಲ ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತೀಯ ಕ್ರಿಕೆಟ್ ತಂಡ ಇಂಗ್ಲೆಂಡ್ ತಂಡದ ವಿರುದ್ಧ ಅಭೂತಪೂರ್ವ ಜಯವನ್ನು ಸಾಧಿಸಿದೆ. ಈ ಗೆಲುವಿನ ಮೂಲಕ ಭಾರತೀಯ ಕ್ರಿಕೆಟ್ ತಂಡ ಟೂರ್ನಮೆಂಟ್ ನಲ್ಲಿ ಪ್ರಬಲ ಎದುರಾಳಿ ಆಗಿದ್ದೇನೆ ಎಂಬ ಸುಳಿವನ್ನು ಬೇರೆ ತಂಡಗಳಿಗೆ ನೀಡಿದೆ ಎಂದರೆ ತಪ್ಪಾಗಲಾರದು. ಇನ್ನು ಸೋತ ದುಃಖದಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಹಾಗಿದ್ದರೆ ಆ ಸಂಕಟ ಯಾವುದೆಂಬುದು ನಾವು ನಿಮಗೆ ವಿವರವಾಗಿ ಹೇಳುತ್ತೇವೆ ತಪ್ಪದೇ ಕೊನೆಯವರೆಗೂ ಓದಿ.

ಹೌದು ಗೆಳೆಯರೇ ಇಂಗ್ಲೆಂಡ್ ತಂಡದ ಭರವಸೆಯ ಆಲ್-ರೌಂಡರ್ ಆಟಗಾರ ಲಿವಿಂಗ್ಸ್ಟೋನ್ ಗಾ’ಯದ ಸಮಸ್ಯೆಯಿಂದ ಮೊದಲ ಚರಣದ ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆ ಎದ್ದು ಕಾಣುತ್ತಿದೆ. ಬೌಂಡರಿ ಬಳಿ ಕ್ಯಾಚ್ ಹಿಡಿಯುವಾಗ ಬೆರಳಿಗೆ ಸಮಸ್ಯೆಯನ್ನು ಮಾಡಿಕೊಂಡಿದ್ದಾರೆ. ಇನ್ನು ಭಾರತದ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ 20 ಎಸೆತಗಳಲ್ಲಿ 30 ರನ್ ಹಾಗೂ ಬೌಲಿಂಗ್ನಲ್ಲಿ ಎರಡು ವರ್ಗಗಳಲ್ಲಿ 10 ರನ್ ನೀಡಿ 1 ವಿಕೆಟ್ ಕೂಡ ಪಡೆದಿದ್ದರೂ ಅದು ಕೂಡಾ ವಿಕೆಟ್ ಭಾರತೀಯ ಕ್ರಿಕೆಟ್ ತಂಡದ ನಾಯಕರಾಗಿರುವ ವಿರಾಟ್ ಕೊಹ್ಲಿ ಅವರದ್ದು. ಬೆನ್ ಸ್ಟೋಕ್ಸ್ ಬದಲಾಗಿ ಬಂದಿದ್ದಂತಹ ಲಿವಿಂಗ್ಸ್ಟೋನ್ ಕೂಡ ಈ ರೀತಿಯ ಸಮಸ್ಯೆಯನ್ನು ಎದುರಿಸುತ್ತಿರುವುದು ಇಂಗ್ಲೆಂಡ್ ತಂಡಕ್ಕೆ ಸಾಕಷ್ಟು ಸಮಸ್ಯೆಯನ್ನು ಎದುರಿಸುವಂತೆ ಮಾಡುತ್ತಿದೆ.