ಶೀಘ್ರದಲ್ಲಿಯೇ ಪ್ರಕಟವಾಗಲಿರುವ ದಕ್ಷಿಣ ಆಫ್ರಿಕಾದ ವಿರುದ್ದದ ಸರಣಿಗೆ ಭಾರತದ ಏಕದಿನ ಸಂಭಾವ್ಯ ತಂಡ ಹೇಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಸದ್ಯ ಭಾರತ ದಕ್ಷಿಣ ಆಫ್ರಿಕಾದ ಸೆಂಚೂರಿಯನ್ ನಲ್ಲಿ ಮೊದಲನೇ ಟೆಸ್ಟ್ ಪಂದ್ಯ ಆಡುತ್ತಿದೆ. ಮೊದಲನೇ ದಿನ ಕನ್ನಡಿಗರಾದ ಕೆ.ಎಲ್.ರಾಹುಲ್ ಹಾಗೂ ಮಯಾಂಕ್ ಅಗರವಾಲ್ ಅದ್ಭುತ ಆಟವಾಡಿ ಗಮನಸೆಳೆದಿದ್ದರು. ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿ ಜನೇವರಿ 16 ಕ್ಕೆ ಮುಕ್ತಾಯವಾಗಲಿದ್ದು, ಜನೇವರಿ 19 ರಿಂದ ಮೂರು ಏಕದಿನ ಪಂದ್ಯಗಳ ಸರಣಿ ಆರಂಭವಾಗಲಿದೆ. ರೋಹಿತ್ ಶರ್ಮಾ ಭಾರತ ಏಕದಿನ ತಂಡದ ನಾಯಕನಾಗಿದ್ದು, ಶೀಘ್ರವೇ ಏಕದಿನ ತಂಡವನ್ನು ಪ್ರಕಟಿಸುವ ನೀರಿಕ್ಷೆ ಇದೆ.

ಇನ್ನು ರೋಹಿತ್ ತಮ್ಮ ದೀರ್ಘಾವಧಿ ಆರಂಭಿಕ ಜೋಡಿಯಾಗಿದ್ದ ಶಿಖರ್ ಧವನ್ ಜೊತೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಇನ್ನು ಮೂರನೇ ಕ್ರಮಾಂಕಕ್ಕೆ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ವಾಪಸ್ ಆಗುವ ಸಾಧ್ಯತೆ ಇದೆ. ನಾಲ್ಕನೇ ಕ್ರಮಾಂಕಕ್ಕೆ ಶ್ರೇಯಸ್ ಅಯ್ಯರ್ ಹಾಗೂ ಸೂರ್ಯ ಕುಮಾರ್ ಯಾದವ್ ನಡುವೆ ಪೈಪೋಟಿ ಇದೆ. ಐದನೇ ಕ್ರಮಾಂಕಕ್ಕೆ ರಿಷಭ್ ಪಂತ್ ವಾಪಸ್ ಆದರೇ, ದೇಶಿ ಕ್ರಿಕೇಟ್ ನಲ್ಲಿ ಅದ್ಭುತ ಪ್ರದರ್ಶನ ತೋರಿರುವ ವೆಂಕಟೇಶ್ ಅಯ್ಯರ್ ಆಲ್ ರೌಂಡರ್ ಆಗುವ ಸಾಧ್ಯತೆ ಇದೆ.

ಶೀಘ್ರದಲ್ಲಿಯೇ ಪ್ರಕಟವಾಗಲಿರುವ ದಕ್ಷಿಣ ಆಫ್ರಿಕಾದ ವಿರುದ್ದದ ಸರಣಿಗೆ ಭಾರತದ ಏಕದಿನ ಸಂಭಾವ್ಯ ತಂಡ ಹೇಗಿದೆ ಗೊತ್ತೇ?? 2

ಇನ್ನು ಸ್ಪಿನ್ ವಿಭಾಗದ ಬೌಲರ್ ಗಳಾಗಿ ಆರ್.ಅಶ್ವಿನ್ ಜೊತೆ ರವೀಂದ್ರ ಜಡೇಜಾ ಹಾಗೂ ಯುಜವೇಂದ್ರ ಚಾಹಲ್ ವಾಪಸ್ ಆಗುವ ಸಾಧ್ಯತೆ ಇದೆ. ಇನ್ನು ವೇಗದ ಬೌಲಿಂಗ್ ಡಿಪಾರ್ಟ್ ಮೆಂಟ್ ನಲ್ಲಿ ದೀಪಕ್ ಚಾಹರ್, ಭುವನೇಶ್ವರ್ ಕುಮಾರ್, ಮಹಮದ್ ಶಮಿ, ಜಸಪ್ರಿತ್ ಬುಮ್ರಾ ವಹಿಸುವ ಇದೆ. ಶಿಖರ್ ಧವನ್ ತಂಡಕ್ಕೆ ಮರಳಿದ್ದದ್ದಲ್ಲಿ ಕೆ.ಎಲ್.ರಾಹುಲ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಸಂಭಾವ್ಯ ತಂಡ ಇಂತಿದೆ : ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ,ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್,ರಿಷಭ್ ಪಂತ್, ವೆಂಕಟೇಶ್ ಅಯ್ಯರ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಆರ್.ಅಶ್ವಿನ್, ದೀಪಕ್ ಚಾಹರ್, ಜಸಪ್ರಿತ್ ಬುಮ್ರಾ, ಮಹಮದ್ ಶಮಿ, ಭುವನೇಶ್ವರ್ ಕುಮಾರ್, ಯುಜವೇಂದ್ರ ಚಾಹಲ್,