ಬಿಗ್ ಬ್ರೇಕಿಂಗ್ ನ್ಯೂಸ್: ಸೌತ್ ಆಫ್ರಿಕಾ ಸರಣಿಗೆ ಭಾರತ ತಂಡದ ಘೋಷಣೆ, ಸ್ಟಾರ್ ಆಟಗಾರನಿಗೆ ಕೊಕ್ ನೀಡಿದ ಆಯ್ಕೆ ಸಮಿತಿ. ಯಾರೆಲ್ಲ ಆಯ್ಕೆಯಾಗಿದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತ ನ್ಯೂಜಿಲೆಂಡ್ ವಿರುದ್ದದ ಸರಣಿಯಲ್ಲಿ ಏರಡನೇ ಟೆಸ್ಟ್ ನ್ನು ಭರ್ಜರಿ ರನ್ನುಗಳ ಅಂತರದೊಂದಿಗೆ ಜಯಗಳಿಸಿತು. ಈಗ ಮಹತ್ವದ ದಕ್ಷಿಣ ಆಫ್ರಿಕಾದ ಸರಣಿಯ ಸಮಯ. ಮೊದಲು ಸುದೀರ್ಘವಾಗಿದ್ದ ದಕ್ಷಿಣ ಆಫ್ರಿಕಾ ಸರಣಿ ಈಗ ಮೊಟಕಾಗಿದೆ. ಮೂರು ಟೆಸ್ಟ್ ಹಾಗೂ ಮೂರು ಏಕದಿನ ಮಾತ್ರ ನಡೆಯಲಿದೆ‌. ನಡೆಯಬೇಕಿದ್ದ ಐದು ಟಿ 20 ಪಂದ್ಯಗಳನ್ನ ಕಡಿತಗೊಳಿಸಿದೆ. ಇನ್ನು ನ್ಯೂಜಿಲೆಂಡ್ ಸರಣಿ ಮುಕ್ತಾಯವಾದ ಹಿನ್ನಲೆಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡವನ್ನ ಇಂದು ಅಥವಾ ನಾಳೆ ಅಂತಿಮಗೊಳಿಸಲಿದೆ.

ಇನ್ನು ನ್ಯೂಜಿಲೆಂಡ್ ವಿರುದ್ದದ ಸರಣಿ ತಪ್ಪಿಸಿಕೊಂಡಿದ್ದ ರೋಹಿತ್ ಶರ್ಮಾ, ರಿಷಭ್ ಪಂತ್, ಮಹಮದ್ ಶಮಿ, ಜಸಪ್ರಿತ್ ಬುಮ್ರಾ ತಂಡಕ್ಕೆ ವಾಪಸ್ ಆಗುವ ಸಾಧ್ಯತೆ ಇದೆ. ಇನ್ನು ಬಹಳಷ್ಟು ದಿನಗಳಿಂದ ಕಳಪೆ ಫಾರ್ಮ್ ಎದುರಿಸುತ್ತಿರುವ ಅಜಿಂಕ್ಯಾ ರಹಾನೆ ತಂಡದಲ್ಲಿ ಮುಂದುವರೆದರೂ, ಆಡುವ ಹನ್ನೊಂದರ ಬಳಗದಲ್ಲಿ ಆಡುವ ಅವಕಾಶ ಸಿಗುವುದು ಕಷ್ಟ. ಇದರ ಜೊತೆ ರಹಾನೆ ಉಪನಾಯಕನ ಪಟ್ಟ ಕಳೆದುಕೊಳ್ಳುವುದು ಖಚಿತವಾಗಿದೆ. ರಹಾನೆ ಬದಲು ರೋಹಿತ್ ಶರ್ಮಾಗೆ ನಾಯಕತ್ವ ಪಟ್ಟ ಸಿಗುವುದು ಪಕ್ಕಾ ಆಗಿದೆ.

ಬಿಗ್ ಬ್ರೇಕಿಂಗ್ ನ್ಯೂಸ್: ಸೌತ್ ಆಫ್ರಿಕಾ ಸರಣಿಗೆ ಭಾರತ ತಂಡದ ಘೋಷಣೆ, ಸ್ಟಾರ್ ಆಟಗಾರನಿಗೆ ಕೊಕ್ ನೀಡಿದ ಆಯ್ಕೆ ಸಮಿತಿ. ಯಾರೆಲ್ಲ ಆಯ್ಕೆಯಾಗಿದ್ದಾರೆ ಗೊತ್ತೇ?? 2

ಇನ್ನು ಉಳಿದ ಆಟಗಾರರೆಲ್ಲಾ ತಂಡದಲ್ಲಿ ಮುಂದುವರೆಯಲಿದ್ದು, ಸದ್ಯ ಭಾರತ ಎ ತಂಡದ ಪರ ಆಡುತ್ತಿರುವ ಹನುಮ ವಿಹಾರಿ ಆಫ್ರಿಕಾದಲ್ಲೇ ಉಳಿದುಕೊಳ್ಳುವ ಸಾಧ್ಯತೆ ಇದೆ. ಇನ್ನು ವೃದ್ಧಿಮಾನ್ ಸಹಾ ಬದಲು ಮೀಸಲು ವಿಕೇಟ್ ಕೀಪರ್ ಆಗಿ ಕೆ.ಎಸ್.ಭರತ್ ಗೆ ಸ್ಥಾನ ಸಿಗುವ ಸಾಧ್ಯತೆ ದಟ್ಟವಾಗಿದೆ. ಆದರೇ ವಿದೇಶಿ ಪಿಚ್ ಗಳಲ್ಲಿ ಪರಿಣಾಮಕಾರಿಯಾಗಿದ್ದ ವೇಗದ ಬೌಲರ್ ಇಶಾಂತ್ ಶರ್ಮಾ ಸ್ಥಾನ ಕಳೆದುಕೊಳ್ಳುವುದು ಬಹುತೇಖ ಖಚಿತವಾಗಿದೆ. ಅಸ್ಥಿರ ಫಾರ್ಮ್ ನಿರ್ವಹಣೆಯಿಂದ ಬಳಲುತ್ತಿರುವ ಇಶಾಂತ್ , ಬೌಲಿಂಗ್ ನಲ್ಲಿಯೂ ಸಹ ಲಯ ತಪ್ಪುತ್ತಿದ್ದಾರೆ. ಅದಲ್ಲದೇ ಲಾಂಗ್ ಸ್ಪೆಲ್ ಸಹ ಮಾಡಲು ಆಗುತ್ತಿಲ್ಲ. ಹಾಗಾಗಿ ಇಶಾಂತ್ ಬದಲು ಮಹಮದ್ ಸಿರಾಜ್ ಹಾಗೂ ಪ್ರಸಿಧ್ದ್ ಕೃಷ್ಣ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.