ಭಾರತ ತಂಡದಲ್ಲಿ ವಿಶ್ವಕಪ್ ಗೆ ಎಂಟ್ರಿ ಕೊಡುವ ಆಸೆಯಲ್ಲಿರುವ ಆಟಗಾರರಿಗೆ ಶಾಕ್ ನೀಡಿದ ರಾಹುಲ್ ದ್ರಾವಿಡ್. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಾಯಕ ರೋಹಿತ್ ಶರ್ಮ ಹಾಗೂ ಕೋಚ್ ರಾಹುಲ್ ದ್ರಾವಿಡ್ ಸೇರಿಕೊಂಡು ಮುಂದೆ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಆಶ್ಚರ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗಾಗಿ ತಂಡದಲ್ಲಿ ಹಲವಾರು ಬದಲಾವಣೆಗಳು ಹಾಗೂ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಸದ್ಯದ ಮಟ್ಟಿಗೆ ಎಲ್ಲಾ ವಿದೇಶಿ ಸರಣಿಗಳನ್ನು ಗೆಲ್ಲುವ ಮೂಲಕ ಈ ಪ್ರಯೋಗ ಸರಿದಾರಿಯಲ್ಲಿ ಹೋಗುತ್ತಿದೆ ಎಂಬುದನ್ನು ಇವರಿಬ್ಬರ ಸಾಬೀತುಪಡಿಸಿದ್ದಾರೆ ನಿಜ ಆದರೆ ಹಾಗೆಂದ ಮಾತ್ರಕ್ಕೆ ಎಲ್ಲಾ ಪ್ರತಿಭಾನ್ವಿತ ಆಟಗಾರರಿಗೆ ತಂಡದಲ್ಲಿ ಸ್ಥಾನ ಸಿಗುತ್ತದೆ ಎಂಬ ಅರ್ಥವಲ್ಲ.

ಎಲ್ಲದಕ್ಕಿಂತ ಪ್ರಮುಖವಾಗಿ ಇತ್ತೀಚಿನ ದಿನಗಳಲ್ಲಿ ವಿಶ್ವಕಪ್ ತಂಡದ ಆಯ್ಕೆಯ ಫಾರ್ಮೆಟ್ ಕುರಿತಂತೆ ಕೇಳಿ ಬಂದಿದ್ದು ಇದು ನಿಜಕ್ಕೂ ಕೂಡ ಬಹುತೇಕ ಎಲ್ಲಾ ನಿರೀಕ್ಷಿತ ಆಟಗಾರರು ತಂಡದಲ್ಲಿ ಸೇರಿಸಿಕೊಳ್ಳಲು ಸಾಧ್ಯವಾಗುತ್ತದೆಯೋ ಇಲ್ಲವೋ ಎನ್ನುವ ಅನುಮಾನವನ್ನು ಮೂಡಿಸುವಂತೆ ಮಾಡಿದೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ಇತ್ತೀಚಿಗಷ್ಟೇ ಕೇಳಿ ಬಂದಿರುವ ಸುದ್ದಿಯ ಪ್ರಕಾರ ಏಷ್ಯಾಕಪ್ ಗೆ ತಂಡವನ್ನು ಪ್ರಕಟಿಸಲು ಕೊನೆಯ ದಿನಾಂಕ ಆಗಸ್ಟ್ 8 ಎಂಬುದಾಗಿ ತಿಳಿದು ಬಂದಿದ್ದು ಇಲ್ಲಿ ಆಯ್ಕೆ ಮಾಡುವ ತಂಡವನ್ನೇ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಆಡಿಸಲಾಗುತ್ತದೆ ಎಂಬುದಾಗಿ ಬಿಸಿಸಿಐ ನ ಒಳಮೂಲಗಳು ಚರ್ಚೆ ನಡೆಸುತ್ತಿವೆ ಎಂಬುದಾಗಿ ತಿಳಿದು ಬಂದಿದೆ. ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ತಂಡದ ಹಲವಾರು ಸ್ಟಾರ್ ಆಟಗಾರರು ತಂಡದಿಂದ ವಿಶ್ರಾಂತಿಯಲ್ಲಿ ಹೊರಗಿದ್ದಾರೆ.

ಭಾರತ ತಂಡದಲ್ಲಿ ವಿಶ್ವಕಪ್ ಗೆ ಎಂಟ್ರಿ ಕೊಡುವ ಆಸೆಯಲ್ಲಿರುವ ಆಟಗಾರರಿಗೆ ಶಾಕ್ ನೀಡಿದ ರಾಹುಲ್ ದ್ರಾವಿಡ್. ಏನು ಗೊತ್ತೇ?? 2

ಅಂದರೆ ಕಳಪೆ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ತಂಡದಿಂದ ವಿಶ್ರಾಂತಿಯನ್ನು ಪಡೆದುಕೊಂಡಿರುವ ಜಸ್ಪ್ರೀತ್ ಬುಮ್ರಾ ಸೇರಿದಂತೆ ಇಂಜುರಿನಿಂದ ಹೊರಗೆ ಬಿದ್ದಿರುವ ಕೆಎಲ್ ರಾಹುಲ್ ಎಲ್ಲರಿಗೂ ಕೂಡ ಆಗಸ್ಟ್ ಕೊನೆಯ ವಾರದಲ್ಲಿ ಪ್ರಾರಂಭವಾಗಲಿರುವ ಏಷ್ಯಾಕಪ್ ಟಿ ಟ್ವೆಂಟಿ ವಿಶ್ವ ಕಪ್ ತಂಡದಲ್ಲಿ ಆಡಲು ಕೊನೆ ಅವಕಾಶ ಎಂದು ಭಾವಿಸಲಾಗುತ್ತಿದೆ. ಹೀಗಾಗಿ ಏಷ್ಯಾಕಪ್ ನಲ್ಲಿ ಆಯ್ಕೆ ಆಗುವ ಆಟಗಾರರೇ ತಮ್ಮ ಸಂಪೂರ್ಣ ಪರಿಶ್ರಮವನ್ನು ಟೂರ್ನಮೆಂಟ್ ನಲ್ಲಿ ತೋರ್ಪಡಿಸಿ ವಿಶ್ವಕಪ್ ತಂಡಕ್ಕೆ ಆಯ್ಕೆ ಆಗಬೇಕಾಗಿರುವ ಸಾಧ್ಯತೆ ಹಾಗೂ ಅನಿವಾರ್ಯತೆ ಹೆಚ್ಚಾಗಿದೆ ಎಂದು ಹೇಳಬಹುದಾಗಿದ್ದು ಇದು ಕೋಚ್ ರಾಹುಲ್ ದ್ರಾವಿಡ್ ಹಾಗೂ ರೋಹಿತ್ ಶರ್ಮ ರವರ ಐಡಿಯಾ ಕೂಡ ಆಗಿರಬಹುದು ಎಂಬುದಾಗಿ ಮಾತನಾಡಿಕೊಳ್ಳಲಾಗುತ್ತಿದೆ.