IPL 2023: ಐಪಿಎಲ್ ಗೆ ಹಿಂದೆಂದೂ ಕಂಡಿರದ ರೂಲ್ಸ್ ಅಳವಡಿಸಿದ ಬಿಸಿಸಿಐ: ಇನ್ಮುಂದೆ ಇದೆ ಆಟಗಾರರಿಗೆ ಹಬ್ಬ. ಹೇಗಿದೆ ಗೊತ್ತೇ ರೂಲ್ಸ್?

IPL 2023: ಬಿಸಿಸಿಐ (BCCI) ಇದೀಗ IPL ಕ್ರಿಕೆಟ್ನಲ್ಲಿ ಹೊಸದೊಂದು ನಿಯಮ ಜಾರಿಗೊಳಿಸಲು ಸಜ್ಜುಗೊಂಡಿದೆ. ಈ ಮೂಲಕ ಕ್ರಿಕೆಟ್ನಲ್ಲಿ ಕೆಲವು ಬದಲಾವಣೆಗಳನ್ನು ತರಲು ಇಚ್ಚಿಸಿರುವ ಮಂಡಳಿ ಪ್ರೇಕ್ಷಕರಿಗೆ ದೊಡ್ಡ ಮನರಂಜನೆ ನೀಡುವ ಉದ್ದೇಶ ಹೊಂದಿದೆ ಎನ್ನಲಾಗುತ್ತಿದೆ. ಕ್ರಿಕೆಟ್ ಮಾದರಿಯಲ್ಲಿಯೇ ಟಿ ಟ್ವೆಂಟಿ ಫಾರ್ಮೆಟ್ ಕ್ರಿಕೆಟ್ ದೊಡ್ಡ ಹೆಸರು ಮಾಡಿದೆ. ಈ ಮಾದರಿಯ ಕ್ರಿಕೆಟ್ ಬಂದರೆ ಸಾಕು ಜನರಿಗೆ ಮನರಂಜನೆಯ ರಂಗೇರುತ್ತದೆ. IPL ಎಂದರೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಒಡಿ ಬಡಿ ಶೈಲಿಯ ಅತಿರೋಚಕ ಹಣಹಣಿ ನೋಡುವುದೇ ಒಂದು ಹಬ್ಬ. ಇದೀಗ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ ಟಿ ಟ್ವೆಂಟಿ (T20 Match) ಫಾರ್ಮೆಟ್ ನಲ್ಲಿ ಹೊಸ ನಿಯಮಗಳನ್ನು, ಬದಲಾವಣೆಗಳನ್ನು ತರಲು ಚಿಂತಿಸಿದೆ ಎನ್ನಲಾಗುತ್ತಿದೆ.

ಟಿ ಟ್ವೆಂಟಿ ಫಾರ್ಮೆಟ್ ನಿಂದಾಗಿ ಈಗಾಗಲೇ ಕ್ರಿಕೆಟ್ ಬಗ್ಗೆ ಇರುವ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಮಾದರಿಯ ಕ್ರಿಕೆಟ್ ನಡೆದರೆ ಸ್ಟೇಡಿಯಂ ಯಾವಾಗಲೂ ಹೌಸ್ ಫುಲ್ ಇರುತ್ತದೆ. ಇದೀಗ IPL ಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಇನ್ನಷ್ಟು ಮನರಂಜನೆ ನೀಡುವ ಉದ್ದೇಶ ಹೊಂದಲಾಗಿದೆ. ಮುಂದಿನ ಐಪಿಎಲ್ ಸೀಸನ್ ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ಸ್ (Impact Players) ರೂಲ್ಸ್ ಜಾರಿಗೆ ಬರಲಿದೆ. ಈಗಾಗಲೇ ಫುಟ್ಬಾಲ್ ಸೇರಿದಂತೆ ಕೆಲವು ಕ್ರೀಡೆಗಳಲ್ಲಿ ಈ ನಿಯಮ ಜಾರಿಯಲ್ಲಿದೆ. ಈ ನಿಯಮ ಜಾರಿ ಗೆ ಬಂದ ನಂತರ ಕ್ರಿಕೆಟ್ ಇನ್ನಷ್ಟು ರೋಚಕತೆಯಿಂದ ಕೂಡಿರಲಿದೆ. ಇಂಪ್ಯಾಕ್ಟ್ ಪ್ಲೇಯರ್ಸ್ ರೂಲ್ಸ್ ಜಾರಿ ಮಾಡುವುದರಿಂದಾಗಿ ಪ್ರೇಕ್ಷಕರಿಗೆ ಇನ್ನಷ್ಟು ಕಿಕ್ ಹೆಚ್ಚಲಿದೆ ಎಂದು ಮಂಡಳಿ ತಿಳಿಸಿದೆ. ಇದನ್ನು ಓದಿ..Cricket News: ಭಾರತ ತಂಡಕ್ಕೆ ಭವಿಷ್ಯದ ನಾಯಕನನ್ನು ಹೆಸರಿಸಿದ ಗಂಭೀರ್: ಪಾಂಡ್ಯ, ಪಂತ್, ರಾಹುಲ್ ಅಲ್ಲದೆ ಹೆಸರಿಸಿದ್ದು ಯಾರನ್ನು ಗೊತ್ತೇ??

IPL 2023: ಐಪಿಎಲ್ ಗೆ ಹಿಂದೆಂದೂ ಕಂಡಿರದ ರೂಲ್ಸ್ ಅಳವಡಿಸಿದ ಬಿಸಿಸಿಐ: ಇನ್ಮುಂದೆ ಇದೆ ಆಟಗಾರರಿಗೆ ಹಬ್ಬ. ಹೇಗಿದೆ ಗೊತ್ತೇ ರೂಲ್ಸ್? 2

ಇಂಪ್ಯಾಕ್ಟ್ ಪ್ಲೇಯರ್ಸ್ ರೂಲ್ಸ್ ಪ್ರಕಾರ ಪಂದ್ಯ ಆಡುವ ಎರಡು ತಂಡದಲ್ಲಿ ನಾಲ್ಕು ಆಟಗಾರರನ್ನು ಸಬ್ಸ್ಟಿಟ್ಯೂಟ್ ಆಗಿ ಆಯ್ಕೆ ಮಾಡಿಕೊಳ್ಳಬೇಕು. ಆಯ್ಕೆ ಮಾಡಿಕೊಂಡ ಆ ನಾಲ್ವರು ಆಟಗಾರರ ಹೆಸರನ್ನು ಟಾಸ್ ನಡೆಯುವ ವೇಳೆ ಆನ್ ಫೀಲ್ಡ್ ಮತ್ತು ಆಫ್ ಫೀಲ್ಡ್ ಅಂಪೈರ್ ಬಳಿ ಹೆಸರನ್ನು ತಿಳಿಸಬೇಕು. ತಾವು ಆರಿಸಿಕೊಂಡ ನಾಲ್ಕು ಆಟಗಾರರ ಪೈಕಿ ಯಾರಾದರೂ ಆಟಗಾರ ತಮ್ಮ ಪಂದ್ಯದ ಗೆಲುವಿಗೆ ಅಗತ್ಯ ಎನಿಸಿದಾಗ ತಂಡವು 14 ಓವರ್ ಬಳಿಕ ಬೋಲಿಂಗ್ ಅಥವಾ ಬ್ಯಾಟಿಂಗ್ ಮಾಡುವ ಅವಕಾಶವನ್ನು ನೀಡಬಹುದಾಗಿದೆ. ಈ ರೀತಿಯಾಗಿ ಇಂಪ್ಯಾಕ್ಟ್ ಪ್ಲೇಯರ್ಸ್ ರೂಲ್ಸ್ ಕೆಲಸ ಮಾಡಲಿದೆ. ಈ ನಿಯಮದ ಜಾರಿ ನಂತರ ಐಪಿಎಲ್ ಟಿ ಟ್ವೆಂಟಿ ಇನ್ನಷ್ಟು ಇಂಟರೆಸ್ಟಿಂಗ್ ಆಗಿ ಇರಲಿದೆ ಎಂದು ಬಿಸಿಸಿಐ ತಿಳಿಸಿದೆ. ಇದನ್ನು ಓದಿ.. Cricket News: ಮಾವ ಬಿನ್ನಿ ಬಿಸಿಸಿಐ ಅಧ್ಯಕ್ಷರಾದ ಒಂದೇ ತಿಂಗಳಿಗೆ ಸೊಸೆ ಮಾಯಾಂತಿ ರವರಿಗೆ ಬಿಗ್ ಶಾಕ್. ಏನಾಗಿದೆ ಗೊತ್ತೇ?? ಇನ್ನು ಮುಂದೆ ಮಾಯಾಂತಿ ಇರಲ್ವ?