ಐಪಿಎಲ್ ಆರಂಭಕ್ಕೂ ಮುನ್ನವೇ ಎಲ್ಲ ತಂಡಗಳಿಗೂ ಒಮ್ಮೆಲೇ ಶಾಕ್ ನೀಡಿದ ಬಿಸಿಸಿಐ, ತಪ್ಪು ನಿರ್ಧಾರ ಎಂದ ಫ್ಯಾನ್ಸ್. ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇನ್ನೇನು ಭಾರತೀಯ ಕ್ರಿಕೆಟ್ ಹಬ್ಬವಾಗಿರುವ ತಾಟ ಐಪಿಎಲ್ 2022 ಇದೇ ಮಾರ್ಚ್ 26 ರಂದು ಆರಂಭವಾಗಲಿದೆ. ಐಪಿಎಲ್ ಬಂತೆಂದರೆ ಸಾಕು ಭಾರತೀಯರಿಗೆ ಎಲ್ಲಿಲ್ಲದ ಸಡಗರ ಸಂಭ್ರಮ ಪ್ರಾರಂಭವಾಗುತ್ತದೆ. ಈ ಬಾರಿ 10 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಈಗಾಗಲೇ ಮೆಗಾ ಹರಾಜು ಮುಗಿದಿದ್ದು ಬಹುತೇಕ ಎಲ್ಲಾ ತಂಡಗಳು ಕೂಡ ಹೊಸಹೊಸ ಆಟಗಾರರೊಂದಿಗೆ ಕಣಕ್ಕಿಳಿಯುತ್ತಿವೆ. ಈ ಬಾರಿ ಕಪ್ಪನ್ನು ಯಾರು ಗೆಲ್ಲುತ್ತಾರೆ ಎನ್ನುವ ಕುರಿತಂತೆ ಸಾಕಷ್ಟು ಲೆಕ್ಕಾಚಾರಗಳು ಹಾಗೂ ಗುಸುಗುಸು ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿದೆ.

ಮೊದಲ ಪಂದ್ಯ ಇದೇ ಮಾರ್ಚ್ 26 ರಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ನಡೆಯಲಿದೆ. ಈ ಬಾರಿ ಸಾಕಷ್ಟು ಆಟಗಾರರ ಬದಲಾವಣೆಯಾಗಿರುವುದು ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚು ಮಾಡುವಂತೆ ಮಾಡಿರುವಂತಹ ಅಂಶಗಳಲ್ಲಿ ಪ್ರಮುಖವಾಗಿದೆ. ಕೆಲವೊಂದು ಆಟಗಾರರು ಆಯ್ಕೆ ಕೂಡ ಆಗಿರಲಿಲ್ಲ. ಒಟ್ಟಾರೆಯಾಗಿ ಈ ಬಾರಿ ಐಪಿಎಲ್ ಟೂರ್ನಮೆಂಟಿಗೆ ಹೊಸ ಮುಖಚರ್ಯೆ ಸಿಗಲಿದೆ ಎಂದು ಹೇಳಬಹುದಾಗಿದೆ. ಇನ್ನು ಈ ಬಾರಿಯ ಐಪಿಎಲ್ ಪ್ರಾರಂಭವಾಗುವ ಮುನ್ನವೇ ಬಿಸಿಸಿಐ ಐಪಿಎಲ್ ಅಭಿಮಾನಿಗಳಿಗೆ ಶಾ’ಕಿಂಗ್ ನ್ಯೂಸ್ ಒಂದನ್ನು ನೀಡಿದೆ. ಹಾಗಿದ್ದರೆ ಆ ಶಾ’ಕಿಂಗ್ ನ್ಯೂಸ್ ಏನೆಂಬುದನ್ನು ತಿಳಿಯೋಣ ಬನ್ನಿ.

ಐಪಿಎಲ್ ಆರಂಭಕ್ಕೂ ಮುನ್ನವೇ ಎಲ್ಲ ತಂಡಗಳಿಗೂ ಒಮ್ಮೆಲೇ ಶಾಕ್ ನೀಡಿದ ಬಿಸಿಸಿಐ, ತಪ್ಪು ನಿರ್ಧಾರ ಎಂದ ಫ್ಯಾನ್ಸ್. ಯಾಕೆ ಗೊತ್ತೇ?? 2

ಹೌದು ನಿಮಗೆಲ್ಲರಿಗೂ ತಿಳಿದಿರುವಂತೆ ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತೀಯ ಆಟಗಾರರಷ್ಟೇ ವಿದೇಶಿ ಆಟಗಾರರ ಪ್ರಮುಖ್ಯತೆ ಕೂಡ ಇದೆ. ಈ ಬಾರಿಯ ಐಪಿಎಲ್ ಟೂರ್ನಮೆಂಟಿನ ಮೊದಲ ವಾರದಲ್ಲಿ ಬರೋಬ್ಬರಿ 26 ವಿದೇಶಿ ಆಟಗಾರರು ಲಭ್ಯವಿರುವುದಿಲ್ಲ ಎಂಬುದಾಗಿ ಬಿಸಿಸಿಐ ತಿಳಿಸಿದೆ. ಕೆಲವು ವೈಯಕ್ತಿಕ ಕಾರಣಗಳಿಂದ ತಡ ಮಾಡುತ್ತಿದ್ದರೆ ಇನ್ನು ಕೆಲವರು ರಾಷ್ಟ್ರೀಯ ತಂಡದ ಜವಾಬ್ದಾರಿಯಿಂದ ತಂಡವನ್ನು ಸೇರಿಕೊಳ್ಳಲು ಸಮಯವನ್ನು ತೆಗೆದುಕೊಳ್ಳುತ್ತಿದ್ದಾರೆ. ಅವರಲ್ಲಿ ಪ್ರಮುಖವಾಗಿ ಗ್ಲೆನ್ ಮ್ಯಾಕ್ಸ್ವೆಲ್ ರಬಾಡ ಡಿಕಾಕ್ ಹಾಗೂ ಡೇವಿಡ್ ವಾರ್ನರ್ ರವರಂತಹ ಆಟಗಾರರು ಕೂಡ ಇದ್ದಾರೆ. ಐಪಿಎಲ್ ಪಂದ್ಯಾವಳಿಗಳು ಪ್ರಾರಂಭವಾಗಲು 2 ವಾರಗಳಿಗೂ ಕಡಿಮೆ ಸಮಯವಿದ್ದು ಕ್ರಿಕೆಟ್ ಪ್ರೇಮಿಗಳು ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ನೋಡಲು ಕಾತರರಾಗಿದ್ದಾರೆ.