Jobs: ಬಿಗ್ ನ್ಯೂಸ್: ಯಾವುದೇ ಪರೀಕ್ಷೆ ಇಲ್ಲದೆ ಕಡಿಮೆ ಓದಿದ್ದರೂ, ನೇರವಾಗಿ ಉದ್ಯೋಗಿಗಳನ್ನು ಆಯ್ಕೆ ಮಾಡಲು ಮುಂದಾದ ರೈಲ್ವೆ ಇಲಾಖೆ: ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ?

Jobs: ಕೆಲಸ ಸಿಗದೆ ಇರುವವರು, ಒಳ್ಳೆಯ ಕೆಲಸ ಬೇಕು, ಕೇಂದ್ರ ಸರ್ಕಾರದ ಕೆಲಸ ಬೇಕು ಎಂದು ಹುಡುಕುತ್ತಿರುವವರಿಗೆ ಐ.ಆರ್.ಸಿ.ಟಿ.ಸಿ (IRCTC) ಇಂದ ಈಗ ಒಂದು ಬಿಗ್ ನ್ಯೂಸ್ ಸಿಕ್ಕಿದೆ. ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ಇಲಾಖೆಯಲ್ಲಿ (Indian Railwat Caterinh and Tourism) ಈಗ ಖಾಲಿ ಇರುವ ಕೆಲಸಗಳನ್ನು ಭರ್ತಿ ಮಾಡಬೇಕು ಎಂದು ಸೂಚನೆ ನೀಡಿದ್ದು, 6 ಟೂರಿಸಮ್ ಮಾನಿಟರ್ ಹುದ್ದೆಗಳನ್ನು ಭರ್ತಿ ಮಾಡಲಿದ್ದಾರೆ. ಈ ಕೆಲಸಕ್ಕೆ ವಾಕಿನ್ ಇಂಟರ್ವ್ಯೂ ಇರಲಿದ್ದು, ಬೆಂಗಳೂರು (Bangalore) ಮತ್ತು ಚೆನ್ನೈನಲ್ಲಿ (Chennai) ಕೆಲಸ ಸಿಗಲಿದೆ. ಈ ಕೆಲಸದ ಬಗ್ಗೆ ನಿಮಗೆ ಆಸಕ್ತಿ ಇದ್ದು, ಡಿಗ್ರಿ ಪಾಸ್ ಆಗಿರುವವರು..

Jobs: ಬಿಗ್ ನ್ಯೂಸ್: ಯಾವುದೇ ಪರೀಕ್ಷೆ ಇಲ್ಲದೆ ಕಡಿಮೆ ಓದಿದ್ದರೂ, ನೇರವಾಗಿ ಉದ್ಯೋಗಿಗಳನ್ನು ಆಯ್ಕೆ ಮಾಡಲು ಮುಂದಾದ ರೈಲ್ವೆ ಇಲಾಖೆ: ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ? 2

ಆಸಕ್ತಿ ಇರುವವರು ತಪ್ಪದೇ ಅಪ್ಲೈ ಮಾಡಿ. ಒಟ್ಟು 6 ಟೂರಿಸಮ್ ಮಾನಿಟರ್ ಹುದ್ದೆಗಳು ಖಾಲಿ ಇದೆ. ಟೂರಿಸಮ್ ಮಾನಿಟರ್ ಹುದ್ದೆಗೆ, ಅಪ್ಲೈ ಮಾಡುವವರು ಸರ್ಕಾರದ ಮಾನ್ಯತೆ ಇರುವ ಯೂನಿವರ್ಸಿಟಿ ಅಥವಾ ಮಂಡಳಿ ಇಂದ ಪದವಿ ಅಥವಾ ಸ್ನಾತಕೋತ್ತರ ಪದವಿ ಪೂರ್ತಿ ಮಾಡಿರಬೇಕು. ಟೂರಿಸಮ್ ಮಾನಿಟರ್ ಕೆಲಸಕ್ಕೆ ಅಪ್ಲೈ ಮಾಡುವವರಿಗೆ ಏಪ್ರಿಲ್1 2023ರ ಸಮಯಕ್ಕೆ 28 ವರ್ಷ ಮೀರಿರಬಾರದು. ಆದರೆ ವಯೋಮಿತಿ ಸಡಿಲಿಕೆ ಇದ್ದು, ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 5ವರ್ಷ. ಇದನ್ನು ಓದಿ..LIC Savings Scheme: ದಿನಕ್ಕೆ ಜುಜುಬಿ 323 ರೂಪಾಯಿ ಹಾಕಿ, 76 ಲಕ್ಷ ಪಡೆಯುವ ಅವಕಾಶ ನೀಡಿದ LIC, ಇದರ ಲಾಭ ತಿಳಿದರೆ, ಇಂದೇ ಪಾಲಿಸಿ ಹಾಕ್ತಿರಾ.

PwBD ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ ಇರುತ್ತದೆ. Aಕೆಲಸಕ್ಕೆ ಆಯ್ಕೆ ಮಾಡುವುದು ಇಂಟರ್ವ್ಯೂ ಮೂಲಕ, ವಾಕಿನ್ ಇಂಟರ್ವ್ಯೂ ಬೆಂಗಳೂರು ಮತ್ತು ಚೆನ್ನೈನಲ್ಲಿ ನಡೆಯಲಿದೆ. ಈ ಕೆಲಸಕ್ಕೆ ₹30,000 ಇಂದ ₹35,000 ಸಾವಿರ ವರೆಗು ತಿಂಗಳ ಸಂಬಳ ಸಿಗಬಹುದು. ಕೆಲಸ ಖಾಲಿ ಇರುವುದು ಬೆಂಗಳೂರು ಮತ್ತು ಚೆನ್ನೈನಲ್ಲಿ ಆಗಿದ್ದು, ಪೋಸ್ಟಿಂಗ್ ಅಲ್ಲಿಯೇ ಸಿಗುತ್ತದೆ.. ಬೆಂಗಳೂರಿನಲ್ಲಿ ಏಪ್ರಿಲ್ 13ರಂದು ಇಂಟರ್ವ್ಯೂ ಇರುತ್ತದೆ..

ಬೆಂಗಳೂರಿನಲ್ಲಿ ಇಂಟರ್ವ್ಯೂ ನಡೆಯುವ ಸ್ಥಳ, ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್, MS ಬಿಲ್ಡಿಂಗ್ ಮತ್ತು SKSJTI ಹಾಸ್ಟೆಲ್ ಹತ್ತಿರ, SJ ಪಾಲಿಟೆಕ್ನಿಕ್ ಕ್ಯಾಂಪಸ್, ಬೆಂಗಳೂರು-560001. ಚೆನ್ನೈನಲ್ಲಿ ಏಪ್ರಿಲ್ 10 ಮತ್ತು 11ರಂದು ಇಂಟರ್ವ್ಯೂ ನಡೆಯಲಿದ್ದು, ಇಂಟರ್ವ್ಯೂ ನಡೆಯುವ ಸ್ಥಳ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್, 4 ನೇ ಕ್ರಾಸ್ ಸ್ಟ್ರೀಟ್, CIT ಕ್ಯಾಂಪಸ್, ತಾರಾಮಣಿ, ಚೆನ್ನೈ – 600113 ಆಗಿದೆ. ಇದನ್ನು ಓದಿ..Business Idea: ಹೂಡಿಕೆ ಮಾಡಲು ಹೆಚ್ಚು ಹಣ ಇಲ್ಲವೇ?? ಕಡಿಮೆ ಹೂಡಿಕೆ ಮಾಡಿ, ಲೈಫ್ ಸೆಟ್ಲ್ ಆಗುವಂತೆ ದುಡಿಯುವ ಬಿಸಿನೆಸ್ ಯಾವುದು ಗೊತ್ತೇ? ಹೇಗೆ ಆರಂಭಿಸಬೇಕು ಗೊತ್ತೇ?