ಪ್ರತಿದಿನ ನೀರಿಗೆ ಜೀರಿಗೆ ಬೆರೆಸಿ ಕುಡಿಯುವುದರಿಂದ ಆಗುವ ಲಾಭಗಳೇಷ್ಟು ಗೊತ್ತೇ?? ತಿಳಿದರೆ ಇಂದೇ ಕುಡಿಯಲು ಆರಂಭಿಸುತ್ತೀರಿ.

ನಮಸ್ಕಾರ ಸ್ನೇಹಿತರೇ ಅಡುಗೆ ಮನೆಯಲ್ಲಿ ಇರುವ ಯಾವುದಾದರೊಂದು ವಸ್ತು ಎಲ್ಲಾ ಕೆಲಸಗಳಿಗೂ ಉಪಯೋಗವಾಗುತ್ತದೆ ಎಂದರೇ ಅದು ಜೀರಿಗೆ ಮಾತ್ರ. ಜೀರಿಗೆ ಇಲ್ಲದೇ ಸಾಂಬಾರು ಪದಾರ್ಥಗಳ ಡಬ್ಬಿ ಪೂರ್ಣವಾಗುವುದೇ ಇಲ್ಲ. ಇಂತಹ ಜೀರಿಗೆಯನ್ನ ನೀರಿಗೆ ಸೇರಿಸಿ ಕುಡಿಯುವದರಿಂದ ನಿಮ್ಮ ದೇಹಕ್ಕೆ ಭರಪೂರ ಲಾಭಗಳಿವೆ. ಬನ್ನಿ ಆ ಲಾಭಗಳು ಯಾವುವು ಎಂದು ತಿಳಿಯೋಣ.

ನೀವು ಡಯಟ್ ಮಾಡುತ್ತಿದ್ದರೂ ನಿಮ್ಮ ತೂಕ ಇಳಿಯುತ್ತಿಲ್ಲವೆಂದರೇ ಅದಕ್ಕೆ ಜೀರಿಗೆ ನೀರು ಬಹಳ ಪ್ರಯೋಜನಕಾರಿ. ಬೆಳಗ್ಗೆ ಇದ್ದು ಬಿಸಿ ನೀರಿಗೆ ಜೀರಿಗೆ ಹಾಕಿಕೊಂಡು ಕುಡಿದರೇ, ಹತ್ತು ದಿನಗಳಲ್ಲಿ ನಿಮಗೆ ಫಲಿತಾಂಶ ತಿಳಿಯುತ್ತದೆ. ಜೀರಿಗೆ ದೇಹದಲ್ಲಿನ ಮೆಟಬಾಲಿಸಂ ಹೆಚ್ಚಿಸುವುದರಿಂದ , ತೂಕ ಇಳಿಕೆಗೆ ಇದು ಹೆಚ್ಚು ಸಹಕರಿಸುತ್ತದೆ. ಶುಗರ್ ಪೇಶೆಂಟ್ ಗಳು ತಮ್ಮ ರಕ್ತದಲ್ಲಿನ ಸಕ್ಕರೆಯ ಅಂಶದ ಬಗ್ಗೆ ಅತಿಯಾಗಿ ತಲೆಕೆಡಿಸಿಕೊಂಡು ಇನ್ಸುಲಿನ್ ನ್ನು ಹೆಚ್ಚು ಪ್ರಮಾಣದಲ್ಲಿ ತೆಗೆದುಕೊಳ್ಳುವುದು ಬೇಡ. ನೀರಿಗೆ ಜೀರಿಗೆ ಹಾಕಿಕೊಂಡು ಕುಡಿದರೇ ಅದು ರಕ್ತದಲ್ಲಿನ ಸಕ್ಕರೆಯ ಪ್ರಮಾಣದ ಅಂಶವನ್ನ ಕಡಿಮೆ ಮಾಡುತ್ತದೆ.

ಅಜೀರ್ಣದ ಸಮಸ್ಯೆ, ವಾಂತಿ, ಪಿತ್ತ, ಎದೆನೋವು, ಆಸಿಡಿಟಿ ಸಮಸ್ಯೆಯಿಂದ ಬಳಲುವವರು ಸಹ ಒಂದು ಲೋಟ ಬಿಸಿ ನೀರಿಗೆ ಜೀರಿಗೆಯನ್ನು ಹಾಕಿಕೊಂಡು ಕುಡಿದರೇ ತಕ್ಷಣ ಉಪಶಮನ ನಿಮಗೆ ದೊರೆಯುತ್ತದೆ. ಬಿಸಿ ನೀರು, ಜೀರಿಗೆ ಹಾಗೂ ಒಂದೆರೆಡು ಹನಿ ನಿಂಬೆರಸವನ್ನು ಸೇರಿಸಿ ಕುಡಿಯುವುದರಿಂದ ಚರ್ಮದ ಕಾಂತಿ ಸಹ ಹೆಚ್ಚುತ್ತದೆ. ಆದರೇ ನೆನಪಿಡಿ ಖಾಲಿ ಹೊಟ್ಟೆಯಲ್ಲಿ ಈ ರೀತಿ ಸೇವಿಸಿದರೇ ಮಾತ್ರ ಉತ್ತಮ ಫಲಿತಾಂಶ ದೊರೆಯುತ್ತದೆ. ಜೀರಿಗೆಯಿಂದ ದೊರೆಯುವ ನಿಮಗೆ ತಿಳಿದಿರುವ ಮನೆ ಔಷಧಿಗಳನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.