ನೀವು ಗಂಟಲಿನ ಕಫದ ಸಮಸ್ಯೆಯಿಂದ ಬಳಲುತ್ತಿದ್ದಿರಾ?? ಹಾಗಿದ್ದರೇ ಅದನ್ನ ಸುಲಭದಲ್ಲಿ ಹೋಗಿಸುವ ಮನೆ ಮದ್ದು.

ನಮಸ್ಕಾರ ಸ್ನೇಹಿತರೇ ಗಂಟಲು ಕೆರೆತ, ಗಂಟಲು ನೋವು ಹಾಗೂ ಥಂಡಿ ಅಥವಾ ಶೀತದಿಂದ ಉಂಟಾಗುವ ಕಫ. ಇವು ಎಲ್ಲರಲ್ಲೂ ಕಾಣಿಸುವ ಸಮಸ್ಯೆಗಳು. ಸಾಮಾನ್ಯವಾಗಿ ಇಂತಹ ರೋಗಗಳಿಗೆ ವೈದ್ಯರ ಬಳಿ ಹೋದರೇ ಖರ್ಚು ಜಾಸ್ತಿ ಹಾಗೂ ಸಮಯ ವ್ಯರ್ಥ. ಕೆಲವೊಮ್ಮೆ ಈ ಕಫ ಹೆಚ್ಚಾದರೇ ಅದು ಸುಖಾಸುಮ್ಮನೆ ದೇಹವನ್ನ ಅಪಾಯದತ್ತ ತಳ್ಳುತ್ತದೆ. ಕೆಲವರು ಇದಕ್ಕೆ ಸ್ಟೀಮ್ ತೆಗೆದುಕೊಳ್ಳುವ ಹಾಗೂ ಚಾಕಲೇಟ್ ತಿನ್ನುವುದರ ಮೂಲಕ ಪರಿಹಾರ ಕಂಡುಕೊಳ್ಳಲು ಯತ್ನಿಸುತ್ತಾರೆ. ಆದರೇ ಅದೆಲ್ಲವಕ್ಕಿಂತ ಸುಲಭವಾದ ಮನೆ ಮದ್ದು ಒಂದಿದೆ. ಅದನ್ನ ಹೇಗೆ ತಯಾರಿಸುವುದು ಎಂಬುದನ್ನ ತಿಳಿಯೋಣ ಬನ್ನಿ.

ಹಿರಿಯರು ಈ ಸುಲಭವಾದ ಮನೆಮದ್ದಿನಿಂದ ತಮ್ಮ ಗಂಟಲೂ ಕೆರೆತ, ಕಫ, ಮುಂತಾದ ಸಮಸ್ಯೆಗಳನ್ನು ಹೋಗಲಾಡಿಸುತ್ತಿದ್ದರು. ಈ ಮನೆ ಮದ್ದಿಗೆ ಬೇಕಾದ ಸಾಮಗ್ರಿಗಳು ಹೀಗಿವೆ. ಶುದ್ದ ಬೆಲ್ಲ, ಅರಿಶಿನ ಪುಡಿ ಮತ್ತು ಕಲ್ಲುಪ್ಪು. ಬೆಲ್ಲ ಹಾಗೂ ಅರಿಶಿನ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸುವ ಕಾರಣ ಈ ಮನೆಮದ್ದಿನಿಂದ ಎರಡೆರೆಡು ಉಪಯೋಗಗಳು ಸಹ ಇವೆ.

ಮೊದಲು ಬೆಲ್ಲವನ್ನು ಒಂದು ಪಾತ್ರೆಗೆ ಹಾಕಿ ಕರಗಿಸಿಕೊಳ್ಳಬೇಕು. ನಂತರ ಅದನ್ನ ಸೋಸುವ ಹುಟ್ಟಿನಿಂದ ಸೋಸಿಕೊಳ್ಳಬೇಕು. ಏಕೆಂದರೇ ಈಗ ಬೆಲ್ಲದಲ್ಲಿ ಕಲ್ಮಶಗಳೇ ಜಾಸ್ತಿ ಇರುತ್ತವೆ. ನಂತರ ಸೋಸಿದ ಶುದ್ದವಾದ ಬೆಲ್ಲದ ನೀರಿಗೆ ಅರ್ಧ ಚಮಚ ಅರಿಶಿನ ಪುಡಿ ಹಾಗೂ ಅರ್ಧ ಚಮಚ ಕಲ್ಲುಪ್ಪನ್ನ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಈ ದ್ರಾವಣವನ್ನ ದಿನಕ್ಕೆ ಮೂರು ಭಾರಿ ನಿರಂತರವಾಗಿ ಕುಡಿಯುತ್ತಾ ಬರಬೇಕು. ಹಂತ ಹಂತವಾಗಿ ನಿಮ್ಮ ಗಂಟಲಿನಲ್ಲಿ ಶೇಖರಗೊಂಡಿದ್ದ ಕಫ ಯಾವುದೇ ಅಡ್ಡಪರಿಣಾಮಗಳಿಲ್ಲದೇ, ಖರ್ಚಿಲ್ಲದೇ ಹೊರಹೊಗುತ್ತದೆ.

ಬೆಲ್ಲದಲ್ಲಿ ಇರುವಂತಹ ಕಬ್ಬಿಣದ ಅಂಶಗಳು ಹಾಗೂ ಅರಿಶಿನದಲ್ಲಿರುವ ಆಂಟಿ ಬಯೋಟಿಕ್ ಅಂಶಗಳು ದೇಹಕ್ಕೆ ಶಕ್ತಿ ನೀಡುವ ಮೂಲಕ ಕಫದ ಸಮಸ್ಯೆಯಿಂದ ನಿತ್ರಾಣ ಹೊಂದಿದ್ದ ದೇಹಕ್ಕೆ ಹೊಸಚೈತನ್ಯವನ್ನು ನೀಡುತ್ತವೆ. ಹಾಗಾಗಿ ಕಫದ ಸಮಸ್ಯೆಯಿಂದ ಬಳಲುತ್ತಿರುವವರು ಈ ಮನೆಮದ್ದನ್ನು ಬಳಸುವ ಮೂಲಕ ತಮ್ಮ ಸಮಸ್ಯೆಗಳಿಂದ ಹೊರಬರಬಹುದು. ಈ ಮನೆಮದ್ದಿನ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.