Kannada Story: ಏನೇ ಮಾಡಿದರೂ, ಏನೇ ಕೊಡುತ್ತೇನೆ ಎಂದರು ಗಂಡ ಮನೆಗೆ ಬೇಗನೆ ಬರುತ್ತಿರಲಿಲ್ಲ, ಕೊನೆಗೆ ಸತ್ಯ ಗೊತ್ತಾದಾಗ ಏನಾಗಿತ್ತು ಗೊತ್ತೇ?? ಹೆಂಡತಿ ಕಣ್ಣೀರು ಹಾಕಿದ್ದು ಯಾಕೆ ಗೊತ್ತೇ?

Kannada Story: ಜೀವನದಲ್ಲಿ ನಮ್ಮ ಕಣ್ಣಿಗೆ ಬೀಳುವುದು ಒಂದು ವಿಷಯ ಆದರೆ, ಅಸಲಿ ವಿಷಯ ಬೇರೆಯೇ ಇರಬಹುದು. ಇದಕ್ಕೆ ಉದಾಹರಣೆ ಎನ್ನುವ ಹಾಗೆ ಮುಂಬೈ ನಲ್ಲಿ ಹೃದಯ ಸ್ಪರ್ಶಿ ಘಟನೆ ನಡೆದಿದೆ. ಆ ಕಥೆಯನ್ನು ಇಂದು ನಿಮಗೆ ತಿಳಿಸುತ್ತೇವೆ. ಮುಂಬೈ ನಲ್ಲಿ ವಾಸವಾಗಿದ್ದ ಇಬ್ಬರು ವ್ಯಕ್ತಿಗಳು ಸುಷ್ಮಾ ಹಾಗೂ ರಾಜೇಶ್ ಶುಕ್ಲ. ಇವರಿಬ್ಬರು ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರಿಗೂ ಪರಿಚಯವಾಗಿ, ಪರಿಚಯ ಪ್ರೀತಿಯಾಗಿ, ಮನೆಯವರು ಒಪ್ಪದೇ ಮದುವೆ ಮಾಡಿಕೊಂಡು, ಜೊತೆಯಾಗಿ ವಾಸ ಮಾಡಲು ಶುರುಮಾಡಿದರು, ಸಂತೋಷದಿಂದ ಸಾಗುತ್ತಿದ್ದ ಇವರ ಸಂಸಾರಕ್ಕೆ ಒಂದೇ ವರ್ಷದಲ್ಲಿ ಮುದ್ದು ಹೆಣ್ಣುಮಗುವಿನ ಆಗಮನವು ಆಯಿತು. ಮಗಳು ಹುಟ್ಟಿದ್ದಕ್ಕೆ ರಾಜೇಶ್ ಗೆ ಬಹಳ ಸಂತೋಷವಾಯಿತು.

ಆದರೆ ಮಗು ಹುಟ್ಟಿದ ನಂತರ ಸುಷ್ಮಾ ತನ್ನ ತಾಯಿಯ ಮನೆಯಿಂದ ಗಂಡನ ಮನೆಗೆ ಬಂದಾಗ, ಸ್ವಲ್ಪ ಬದಲಾವಣೆ ಎನ್ನಿಸಿತು, ಮೊದಲಿನ ಹಾಗೆ ಗಂಡ ಮನೆಗೆ ಬರುತ್ತಿರಲಿಲ್ಲ, ತಡವಾಗಿ ಮಧ್ಯರಾತ್ರಿ ಸಮಯಕ್ಕೆ ಬರುತ್ತಿದ್ದ, ಸುಷ್ಮಾಳಿಗೆ ಬೇಸರವಾಗಿತ್ತು, ಹೆಣ್ಣುಮಗು ಹುಟ್ಟಿದ್ದಕ್ಕೆ ಅವರಿಗೆ ಬೇಜಾರಾಗಿದೆಯೇ, ತನ್ನ ಸೌಂದರ್ಯ ಕಡಿಮೆ ಆಗಿರುವುದಕ್ಕೆ ಬೇಜಾರಾಗಿದೆಯೇ ಎಂದು ಯೋಚನೆ ಮಾಡಿ, ಒಂದು ವಾರದ ನಂತರ ಗಂಡನಿಗೆ ಯಾಕೆ ಹೀಗೆ ಮಾಡುತ್ತಿದ್ದೀರಿ ಎಂದು ಕೇಳಿಯೇ ಬಿಟ್ಟಳು, ಆಗ ರಾಕೇಶ್ ಹಾಗೆಲ್ಲಾ ಏನು ಇಲ್ಲ ಎಂದು ಹೇಳಿ ಸಮಾಧಾನ ಮಾಡಿದ. ಒಂದು ವಾರ ಸಮಹಕ್ಕೆ ಸರಿಯಾಗಿ ಮನೆಗೆ ಬರುತ್ತಿದ್ದ, ಆದರೆ ಮತ್ತೆ ಹಾಗೆ ಲೇಟಾಗಿ ಬರುವುದು ಶುರುವಾಯಿತು. ಇದರಿಂದ ಸುಷ್ಮಾಗೆ ಅನುಮಾನ ಹೆಚ್ಚಾಯಿತು. ತನ್ನ ಗಂಡ ಯಾಕೆ ಹೀಗೆ ಮಾಡುತ್ತಿದ್ದಾನೆ ಎಂದು ತಿಳಿದುಕೊಳ್ಳಲು, ಅವನು ಕೆಲಸ ಮಾಡುತ್ತಿದ್ದ ಗಾರ್ಮೆಂಟ್ಸ್ ಗೆ ಮಗು ಜೊತೆ ಹೋಗುತ್ತಾಳೆ. ಇದನ್ನು ಓದಿ..News: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ದಲ್ಲಿ ಇರುವ ಮಹಿಳೆ ಯಾರು ಗೊತ್ತೇ? ಹಿಂದಿನಿಂದ ಬಂದವನು ಯಾರು ಗೊತ್ತೇ??

Kannada Story: ಏನೇ ಮಾಡಿದರೂ, ಏನೇ ಕೊಡುತ್ತೇನೆ ಎಂದರು ಗಂಡ ಮನೆಗೆ ಬೇಗನೆ ಬರುತ್ತಿರಲಿಲ್ಲ, ಕೊನೆಗೆ ಸತ್ಯ ಗೊತ್ತಾದಾಗ ಏನಾಗಿತ್ತು ಗೊತ್ತೇ?? ಹೆಂಡತಿ ಕಣ್ಣೀರು ಹಾಕಿದ್ದು ಯಾಕೆ ಗೊತ್ತೇ? 2

ಗಂಡ ಕೆಲಸ ಮುಗಿಸಿ ಬಸ್ ಹತ್ತುತ್ತಾನೆ, ತಾನು ಕೂಡ ಅದೇ ಬಸ್ ಹತ್ತಿ ಹೋಗುತ್ತಾಳೆ, ಆಕೆಯ ಗಂಡ ಒಂದು ಸ್ಟಾಪ್ ನಲ್ಲಿ ಇಳಿದು, ಬಾರ್ ಗೆ ಹೋಗುತ್ತಾನೆ. ಆಗ ಸುಷ್ಮಾ ಗಂಡ ಕುಡಿಯುವ ಅಭ್ಯಾಸ ಮಾಡಿಕೊಂಡಿದ್ದಾನಾ ಎಂದು ಶಾಕ್ ಆಗಿ ಒಳಗೆ ಹೋಗುತ್ತಾಳೆ. ಅಲ್ಲಿ ಆಕೆಯ ಗಂಡ ಸರ್ವರ್ ಆಗಿ ಕೆಲಸ ಮಾಡುತ್ತಿರುವುದನ್ನು ನೋಡಿ ಆಕೆಗೆ ನಂಬಲು ಆಗುವುದಿಲ್ಲ. ನಂತರ ರಾಜೇಶ್ ಹೆಂಡತಿಯನ್ನು ನೋಡಿ, ಇಷ್ಟು ಹೊತ್ತಲ್ಲಿ ಮಗುನ ಕರ್ಕೊಂಡು ಯಾಕೆ ಬಂದಿದ್ದೀಯಾ ಎಂದು ಹೇಳಿ ಕೂರಿಸುತ್ತಾನೆ. ಸುಷ್ಮಾ ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಾಳೆ, ಆದರೆ ರಾಜೇಶ್ ಉತ್ತರಿಸುವುದಿಲ್ಲ. ತುಂಬಾ ಬಲವಂತ ಮಾಡಿದ ನಂತರ ಹೇಳುತ್ತಾನೆ. ಬಾಣಂತನಕ್ಕಾಗಿ ಸುಷ್ಮಾ ತಾಯಿ ಮನೆಗೆ ಹೋಗಿದ್ದಾಗ, ರಾಜೇಶ್ ಗೆ ಎದೆ ನೋವು ಕಾಣಿಸಿಕೊಳ್ಳುತ್ತದೆ.

ಡಾಕ್ಟರ್ ಹತ್ತಿರ ತೋರಿಸಿದಾಗ, ಕಾರ್ಡಿಯೋವ್ಯಸ್ಕ್ಯುಲರ್ ಎನ್ನುವ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಇದೆ ಎಂದು ಹೇಳುತ್ತಾರೆ, ಆ ಸಮಸ್ಯೆಗೆ ಔಷಧಿ ಇಲ್ಲ, ಯಾವಾಗ ಬೇಕಾದರು ಹೃದಯಬಡಿತ ನಿಲ್ಲಬಹುದು ಎನ್ನುತ್ತಾರೆ, ಹಾಗಾಗಿ ತನಗೆ ಏನಾದರೂ ಆದರೆ ಹೆಂಡತಿ ಮಗಳು ಕಷ್ಟಪಡುವುದು ಬೇಡ ಎಂದು ಹೀಗೆ ಎಕ್ಸ್ಟ್ರಾ ಕೆಲಸ ಮಾಡಿ, ದುಡ್ಡು ಹೊಂದಿಸಿ ಹೆಂಡತಿ ಮಕ್ಕಳ ಭವಿಷ್ಯ ಸರಿಮಾಡುವ ಪ್ರಯತ್ನದಲ್ಲಿರುತ್ತಾನೆ ರಾಜೇಶ್. ಅಸಲಿ ವಿಷಯ ತಿಳಿದು, ಸುಷ್ಮಾ ಕಣ್ಣೀರು ಹಾಕತ್ತಾಳೆ. ಬೇರೆ ಡಾಕ್ಟರ್ ಹತ್ತಿರ ತೋರಿಸಿದರೆ ಅವರು ಆ ಮಾತನ್ನೇ ಹೇಳುತ್ತಾಳೆ. ಕೊನೆಗೆ ರಾಜೇಶ್ ಇರುವಷ್ಟು ದಿನ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಮೂರ್ನಾಲ್ಕು ವರ್ಷಗಳ ನಂತರ ರಾಜೇಶ್ ಇಹಲೋಕ ತ್ಯಜಿಸುತ್ತಾನೆ, ಆದರೆ ತಾನು ಅಂದುಕೊಂಡ ಹಾಗೆ, ಹೆಂಡತಿ ಮಗುವಿಗಾಗಿ ಒಂದು ಮನೆ, ಮಗುವಿನ ಭವಿಷ್ಯಕ್ಕೆ ಒಂದಷ್ಟು ಹಣ, ಹಾಗೂ ಹೆಂಡತಿ ಜೀವನ ನಡೆಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಿಟ್ಟು ಹೋಗಿರುತ್ತಾನೆ. ಈಗ ಅವನ ಹೆಂಡತಿ ಮಗು ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದಾರೆ. ಇದನ್ನು ಓದಿ..Kannada News: ಬಡವರು ಎಂಬುದನ್ನು ನೋಡದೆ ಕಮಿಷನ್ ಆಸೆಗೆ ಖಾಸಗಿ ಆಸ್ಪತ್ರೆಗೆ ಸೇರಿಸಿದ 108 ಆಂಬುಲೆನ್ಸ್ ಸಿಬ್ಬಂದಿ, ಆದ ಬಡವನ ಪಾಡು ಏನಾಗಿದೆ ಗೊತ್ತೇ?