ತೋಟದಲ್ಲಿ ಬೆಳೆಯುವ ಕೆಸುವಿನಲ್ಲಿ ಎಷ್ಟೇಲ್ಲಾ ಪ್ರಯೋಜನ ಇದೆ ಗೊತ್ತಾ?? ಹೇಗೆ ಸೇವಿಸಬೇಕು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಹಳ್ಳಿಗಳಲ್ಲಿ ಅದರಲ್ಲೂ ತೋಟವಿರುವ ಮನೆಗಳಲ್ಲಿ ಮಾರುಕಟ್ಟೆಯಿಂದ ತರಕಾರಿ ತಂದು ಬಳಸೋದೆ ಕಮ್ಮಿ. ಒಂದು, ತಮಗೆ ಬೇಕಾದಷ್ಟು ತರಕಾರಿಯನ್ನು ಮನೆಯಲ್ಲಿಯೇ ಬೆಳೆಯುತ್ತಾರೆ. ಇನ್ನೊಂದು ತೋಟಗಳಲ್ಲಿ ಬೆಳೆಯುವ ನೈಸರ್ಗಿಕ ಸೊಪ್ಪು, ಬಳ್ಳಿ ಎಲೆಗಳನ್ನು ತಂದು ಅಡುಗೆ ಮಾಡುತ್ತಾರೆ. ಅರೇ, ಅದರಲ್ಲೇನಿದೆ ವಿಶೇಷ ಅಂತಿರಾ? ನಮ್ಮ ಪೂರ್ವಜರು ಅಷ್ಟು ಆರೋಗ್ಯವಾಗಿರೋದಕ್ಕೆಲ್ಲ ಇವೇ ಕಾರಣ. ಯಾಕೆಂದರೆ ಇವುಗಳಲ್ಲಿ ಇರುವ ಆರೋಗ್ಯ ಪ್ರಯೋಜನಗಳು ಹಲವಾರು. ಇಂದು ನಾವು ಹಳ್ಳಿಗಳಲ್ಲಿ ಸಿಗುವ ಕೆಸುವಿನ ಎಲೆಯ ಪ್ರಯೋಜನಗಳ ಬಗ್ಗೆ ನೋಡೋಣ.

ಹೌದು ಸ್ನೇಹಿತರೆ ಕರಾವಳಿ ಭಾಗದಲ್ಲಿ ಅದೂ ಈ ಮಳೆಗಾಲದಲ್ಲಿ ಹೆಚ್ಚಾಗಿ ಸಿಗಲ್ಪಡುವ ಗಿಡ ಈ ಕೆಸು. ಕೆಸುವಿನ ಎಲೆ, ದಂಟು, ಗಡ್ಡೆ ಹೀಗೆ ಪ್ರತಿಯೊಂದು ಕೂಡ ತಿನ್ನೋದಕ್ಕೆ ಎಷ್ಟು ರುಚಿಯೋ ಆರೋಗ್ಯಕ್ಕೂ ಕೂಡ ಅಷ್ಟೇ ಒಳ್ಳೆಯದು. ಕೆಸುವಿನಲ್ಲಿ, ಕರಿ ಕೆಸು, ಬೆಳಿ ಕೆಸು, ಉದ್ದನೆಯ ಕೆಸು, ಮರಗೆಸು ಹೀಗೆ ಸಾಕಷ್ಟು ವಿಧಗಳಿವೆ. ಈ ಎಲ್ಲವೂ ಒಂದಿಲ್ಲೊಂದು ಅಡುಗೆಯಲ್ಲಿ ಬಳಸಬಹುದಾಗಿದೆ.

ಕೆಸುವಿನ ಪ್ರಯೋಜನಗಳು: ಹಳ್ಳಿಗಳಲ್ಲಿ ಸುಲಭವಾಗಿ ಸಿಗುವ ಈ ಕೆಸು ಸಸ್ಯ ಎಷ್ಟು ಉತ್ತಮ ಎಂದರೆ ಇಂದು ಪೇಟೆಗಳಲ್ಲಿ ಅಧಿಕ ಬೆಲೆ ಕೊಟ್ಟು ಜನ ಖರೀಧಿಸುತ್ತಾರೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜೀವಸತ್ವಗಳು ಅಡಗಿವೆ. ಒಂದು ಸಣ್ಣ ಕೆಸುವಿನ ಗಡ್ಡೆಯಲ್ಲಿ 187 ಕ್ಯಾಲೋರಿ, ಕಾರ್ಬೋಹೈಡ್ರೇಟ್ ಹಾಗೂ ಅತೀ ಕಡಿಮೆ ಪ್ರೊಟೀನ್ ಹಾಗೂ ಕೊಬ್ಬಿನಂಶವಿರುತ್ತದೆ. ಜೊತೆಗೆ ಇದರಲ್ಲಿರುವ ನಾರಿನಾಂಶ ಹಾಗೂ ಪಿಷ್ಠ ಹೃದಯ ಸಂಬಂಧಿ ಖಾಯಿಲೆಗಳಿಂದ ನಮನ್ನು ದೂರವಿಡುತ್ತದೆ.

ತೂಕ ಇಳಿಕೆಗೆ ಕೂಡ ಕೆಸು ಅತ್ಯುತ್ತಮ ಆಹಾರ. ಕೆಸು ತಿಂದರೆ ಬೇಗ ಹಸಿವು ಆಗುವುದಿಲ್ಲ ಹಾಗಾಗಿ ನಾವು ದಿನದಲ್ಲಿ ಸೇವಿಸುವ ಕ್ಯಾಲೋರಿ ಪ್ರಮಾಣ ಕಡಿಮೆ ಆಗುತ್ತದೆ. ಕೆಸುವಿನ ದಂಟಿನಲ್ಲಿ ವಿಟಮಿನ್ ಸಿ ಅಂಶವಿದೆ ಇದು ಕಿಡ್ನಿಯಲ್ಲಿನ ಕಲ್ಲು ಕರಗಿಸಲು ನೆರವಾಗುತ್ತದೆ. ಅಲ್ಲದೇ ಮಧುಮೇಹಿಗಳೂ ಕೂಡ ಕೆಸುವನ್ನು ತಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳಬಹುದು. ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿನಬಲ್ಲ ಕೆಸು, ಚರ್ಮದ ಸುಕ್ಕು ನಿವಾರಿಸಲು ಕೂಡ ಸಹಾಯಕ. ಕೆಸುವಿನ ದಂಟನ್ನು ಇದಕ್ಕಾಗಿ ಬಳಸಬಹುದು. ಕೆಸುವಿನಲ್ಲಿರುವ ನಾರಿನಾಂಡ ದೇಹದ ಜೀರ್ಣಕ್ರಿಯೆಯನ್ನೂ ಕೂಡ ಸುಲಭಗೊಳಿಸುತ್ತದೆ. ಹೀಗೆ ಹತ್ತು ಹಲವು ಪ್ರಯೋಜನಗಳನ್ನು ಹೊಂದಿರುವ ಕೆಸುವನ್ನು ಆಗಾಗ್ಗೆ ಸೇವಿಸುವುದು ಅತ್ಯಂತ ಒಳ್ಳೆಯದು.