ಮೂತ್ರಪಿಂಡದಲ್ಲಿನ ಕಲ್ಲನ್ನು ನೀರಿನಂತೆ ಕರಗಿಸರು ಈ ರೀತಿ ಈ ಪಲ್ಯವನ್ನು ಮಾಡಿ ತಿಂದು ನೋಡಿ, ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಮೂತ್ರಪಿಂಡದಲ್ಲಿ ಕಲ್ಲು ಅಥವಾ ಕಿಡ್ನಿ ಸ್ಟೋನ್ ಅಂತಾರಲ್ಲ ಇದು ಬಂದರೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತೆ. ಅದರಲ್ಲೂ ಈ ಕಲ್ಲು ಸುಲಭವಾಗಿ ಕರಗದೇ ಇದ್ರೆ ಶಸ್ತ್ರಚಿಕಿತ್ಸೆಯ ಮೊರೆಹೋಗಬೇಕು. ಆದರೆ ಆರಂಭದ ಸ್ಟೆಜ್ ಆಗಿದ್ರೆ ಸಣ್ಣ ಕಲ್ಲನ್ನು ಸುಲಭವಾಗಿ ಕರಗಿಸಬಹುದು, ಅದೂ ಮನೆಮದ್ದುಗಳಿಂದ.

ಸೂಕ್ತ ಪ್ರಮಾಣದಲ್ಲಿ ನೀರು ದೇಹಕ್ಕೆ ಸಿಗದಿದ್ದಾಗ ಮಾತ್ರ ಕಿಡ್ನಿ ಸ್ಟೋನ್ ಕಾಣಿಸಿಕೊಳ್ಳಬಹುದು. ಹಾಗಾಗಿ ತಪ್ಪದೇ ಅಗತ್ಯವಿದ್ದಷ್ಟು ನೀರನ್ನು ಮಾತ್ರ ಕುಡಿಯಲೇ ಬೇಕು. ಇನ್ನು ಕಿಡ್ನಿ ಸ್ಟೋನ್ ನಿರ್ಮೂಲನೆಗೆ ಒಂದೊಳ್ಳೆ ಔಷಧವನ್ನು ನಾವಿಲ್ಲಿ ಹೇಳುತ್ತಿದ್ದೇವೆ. ಅದುವೇ ಬಾಳೆಕಾಯಿ ಪಲ್ಯ. ಇದೇನು ಪಲ್ಯನಾ ಅಂದುಕೊಳ್ಳಬೇಡಿ. ಬಾಳೆಕಾಯಿ ದೇಹಕ್ಕೆ ಅತ್ಯಂತ ಒಳ್ಳೆಯದು. ಮೂತ್ರಪಿಂಡದ ಕಲ್ಲು ಕರಗಿಸಲು ದಿನವೂ ಬಾಳೆಕಾಯಿ ಪಲ್ಯ ತಿನ್ನುವುದು ಒಳ್ಳೆಯದು.

ಬಾಳೆಕಾಯಿ ಪಲ್ಯ ಮಾಡುವುದು ಹೇಗೆ?? : ಮೊದಲಿಗೆ ಸರಿಯಾಗಿ ಬೆಳೆದ ಬಾಳೆಕಾಯಿಗಳನ್ನು ತೆಗೆದುಕೊಂಡು ಅದರ ಸಿಪ್ಪೆ ತೆಗೆಯಿರಿ. ಇದು ನಾರಿನ ರೂಪದಲ್ಲಿರುತ್ತದೆ. ಹಾಗಾಗಿ ಸ್ವಲ್ಪ ಅಂಟುಅಂಟಾಗುತ್ತದೆ. ನಂತರ ತುಂಡುಗಳನ್ನಾಗಿ ಮಾಡಿ. ಈ ಹೆಚ್ಚಿಕೊಂಡ ಬಾಳೆಕಾಯಿಯನ್ನು ಬಿಸಿ ನೀರಿನಲ್ಲಿ ಹಾಕಿ ಬೇಯಿಸಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಬೇಕು. ತದ ನಂತರ ಜೀರಿಗೆ, ಉದ್ದಿನ ಬೇಳೆ, ತೊಗರಿಬೇಳೆ ಇವುಗಳನ್ನು ಹುರಿದುಕೊಂಡು ಪುಡಿ ಮಾಡಿಕೊಳ್ಳಿ. ಈಗ ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ ಇದಕ್ಕೆ ಸಾಸಿವೆ, ಮೆಣಸಿನಕಾಯಿ, ಕರಿಬೇವು ಹಾಗೂ ಅರಿಶಿನ ಹಾಕಿ ಸ್ವಲ್ಪ ಹುರಿಯಿರಿ. ಇದಕ್ಕೆ ಬೆಂದ ಬಾಳೆಕಾಯಿ ತುಂಡನ್ನು ಸೇರಿಸಿ. ನಂತರ ಪುಡಿ ಮಾಡಿಟ್ಟುಕೊಂಡ ಮಸಾಲವನ್ನು ಮಿಶ್ರಣ ಮಾಡಿದರೆ ರುಚಿಕರವಾದ ಬಾಳೆಕಾಯಿ ಪಲ್ಯ ರೆಡಿಯಾಗುತ್ತದೆ. ಇದಕ್ಕೆ ಅಗತ್ಯವಿದ್ದರೆ ಸ್ವಲ್ಪ ಬೆಲ್ಲವನ್ನು ಸೇರಿಸಬಹುದು. ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಬೇಕಿದ್ದರೆ ಕಟ್ ಮಾಡಿ ಹಾಕಿ. ಸರಿಯಾದ ಪ್ರಮಾಣದ ನೀರು ಸೇವನೆ ಹಾಗೂ ಈ ಪಲ್ಯ ಸೇವಿಸಿದರೆ ಕಿಡ್ನಿ ಸಮಸ್ಯೆಗಳು ದೂರವಾಗುತ್ತವೆ.