ಒಂದು ಕಡೆ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಕೊಹ್ಲಿಯ ಇನ್ನಿಂಗ್ಸ್ ಕುರಿತು ಕೊಹ್ಲಿ ಕೋಚ್ ವಿಕ್ರಮ್ ರಾಥೋರ್ ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿರ್ಣಾಯಕವಾದ ದಕ್ಷಿಣ ಆಫ್ರಿಕಾದ ಮೂರನೇ ಟೆಸ್ಟ್ ಕೇಪ್ ಟೌನ್ ನಲ್ಲಿ ಮುಗಿದಿದೆ, ಸರಣಿ ಸೋಲಿನ ಬಳಿಕ ವಿರಾಟ್ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ಕೂಡ ನೀಡಿದ್ದಾರೆ. ಮೂರನೇ ಟೆಸ್ಟ್ ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ವಿರಾಟ್ ಕೊಹ್ಲಿಯವರ ಸಾಹಸಮಯ ಇನ್ನಿಂಗ್ಸ್ ನಿಂದ 223 ರನ್ ಗಳಿಸಿತು. ಬೇರೆಲ್ಲಾ ಬ್ಯಾಟ್ಸಮನ್ ಗಳು ಕ್ರೀಸ್ ನಲ್ಲಿ ರನ್ ಗಳಿಸಲು ಪರದಾಡಿದರೇ, ವಿರಾಟ್ ಮಾತ್ರ ಹೆಬ್ಬಂಡೆಯಂತೆ ನಿಂತು ತಾಳ್ಮೆಯ 79 ರನ್ ಗಳಿಸಿದರು. ಆರ್.ಅಶ್ವಿನ್ ಅಥವಾ ಶಾರ್ದುಲ್ ಠಾಕೂರ್ ವಿಕೇಟ್ ಒಪ್ಪಿಸದೇ ವಿರಾಟ್ ಗೆ ಸಾಥ್ ನೀಡಿದ್ದರೇ, ವಿರಾಟ್ ಬ್ಯಾಟಿನಿಂದ ಬಾರದ ಶತಕ ಬಂದರೂ ಅಚ್ಚರಿಯಿರಲಿಲ್ಲ.

ಆದರೇ ಬಾಲಂಗೋಚಿಗಳ ಸಹಾಯ ಸರಿಯಾಗಿ ದೊರೆಯದ ಕಾರಣ, ವಿರಾಟ್ ಕೊಹ್ಲಿ ರನ್ ಗಳಿಸುವ ಆತುರದಲ್ಲಿ ತಮ್ಮ ವಿಕೇಟ್ ಒಪ್ಪಿಸಿದರು. ಬಹುದಿನಗಳ ನಂತರ ವಿರಾಟ್ ಕ್ಲಾಸಿಕ್ ಶಾಟ್ ಗಳಾದ ಕವರ್ ಡ್ರೈವ್ ಮುಂತಾದ ಶಾಟ್ ಗಳು ಎರಡು ಇನ್ನಿಂಗ್ಸ್ ನಲ್ಲಿ ಅಭಿಮಾನಿಗಳನ್ನ ರಂಜಿಸಿದವು. ಇನ್ನು ವಿರಾಟ್ ಕೊಹ್ಲಿಯ ಕ್ಲಾಸಿಕ್ ಇನ್ನಿಂಗ್ಸ್ ಬಗ್ಗೆ ಹೊಗಳಿಕೆಯ ಮಾತನಾಡಿದ ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ , ಅವರದ್ದು ಶಿಸ್ತಿನ ಆಟ ಎಂದು ಹೇಳಿದ್ದಾರೆ.

ಒಂದು ಕಡೆ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಕೊಹ್ಲಿಯ ಇನ್ನಿಂಗ್ಸ್ ಕುರಿತು ಕೊಹ್ಲಿ ಕೋಚ್ ವಿಕ್ರಮ್ ರಾಥೋರ್ ಹೇಳಿದ್ದೇನು ಗೊತ್ತಾ?? 2

ವಿರಾಟ್ ಬ್ಯಾಟಿಂಗ್ ನಲ್ಲಿ ಯಾವ ಸಮಸ್ಯೆಯೂ ಇರಲಿಲ್ಲ. ಅವರು ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿಲ್ಲ, ರನ್ ಗಳಿಸುತ್ತಿಲ್ಲ ಎಂದು ಬ್ಯಾಟಿಂಗ್ ಕೋಚ್ ಆದ ನಾನು ಎಂದಿಗೂ ತಲೆಕೆಡಿಸಿಕೊಂಡಿರಲಿಲ್ಲ. ನೆಟ್ಸ್ ನಲ್ಲಿಯೂ ಸಹ ಅವರು ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಪ್ರತಿ ಪಂದ್ಯದಲ್ಲಿಯೂ ಅವರು ಉತ್ತಮ ಆರಂಭ ಪಡೆದರೂ, ಅದನ್ನ ದೊಡ್ಡ ಮೊತ್ತವಾಗಿಸುವಲ್ಲಿ ವಿಫಲವಾಗುತ್ತಿದ್ದರು. ಆದರೇ ಕಳೆದ ಟೆಸ್ಟ್ ಇನ್ನಿಂಗ್ಸ್ ನಲ್ಲಿ ಅವರು ಎಲ್ಲಾ ಪ್ರಶ್ನೆಗಳಿಗೂ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿದರು ಎಂದು ಹೇಳಿದರು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.