ಐಸಿಸಿ ಏಕದಿನದ ರ್ಯಾಂಕಿಂಗ್ ಪಟ್ಟಿ ಪ್ರಕಟಿಸಿದ ಐಸಿಸಿ – ಭಾರತದ ದಿಗ್ಗಜರಿಗೆ ಸಿಕ್ಕ ಸ್ಥಾನ ಎಷ್ಟು ಗೊತ್ತಾ?? ರೋಹಿತ್ ಕೊಹ್ಲಿ ಯಾರು ಬೆಸ್ಟ್??

ನಮಸ್ಕಾರ ಸ್ನೇಹಿತರೇ ಕೊನೆಗೂ ಐಸಿಸಿ ಏಕದಿನ ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಭಾರತ ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿ ಸೋತರೂ, ಭಾರತೀಯ ಕ್ರೀಡಾ ಪಟುಗಳು ಮಾತ್ರ ಅಗ್ರ ಹತ್ತರೊಳಗೆ ಸ್ಥಾನ ಪಡೆದು ಮಿಂಚಿದ್ದಾರೆ. ಆಫ್ರಿಕಾ ವಿರುದ್ದ ಸೋತರೂ ಕೆಲವು ಬ್ಯಾಟ್ಸಮನ್ ಗಳು ಉತ್ತಮ ರನ್ ಗಳಿಸಿದ್ದರು.

ಐಸಿಸಿ ಏಕದಿನದ ರ್ಯಾಂಕಿಂಗ್ ಪಟ್ಟಿ ಪ್ರಕಟಿಸಿದ ಐಸಿಸಿ - ಭಾರತದ ದಿಗ್ಗಜರಿಗೆ ಸಿಕ್ಕ ಸ್ಥಾನ ಎಷ್ಟು ಗೊತ್ತಾ?? ರೋಹಿತ್ ಕೊಹ್ಲಿ ಯಾರು ಬೆಸ್ಟ್?? 2

ಇದು ಇವರು ರ್ಯಾಂಕ್ ನಲ್ಲಿ ಉತ್ತಮ ಸ್ಥಾನವನ್ನು ಗಳಿಸಲು ಸಾಧ್ಯವಾಯಿತು. ಎಂದಿನಂತೆ ಪಾಕಿಸ್ತಾನದ ಭರವಸೆಯ ಬ್ಯಾಟ್ಸಮನ್ ಬಾಬರ್ ಅಜಂ 873 ಅಂಕಗಳೊಂದಿಗೆ ಮೊದಲನೇ ಸ್ಥಾನದಲ್ಲಿ ಈ ಭಾರಿಯೂ ಸಹ ಮುಂದುವರೆದಿದ್ದಾರೆ. ಅವರ ಸ್ಥಾನ ಸದ್ಯಕ್ಕಂತೂ ಅಭಾದಿತವಾಗಿದೆ. ಇನ್ನು ಭಾರತದ ಟೆಸ್ಟ್ ತಂಡದ ನಾಯಕತ್ವಕ್ಕೆ ಸದ್ಯ ರಾಜೀನಾಮೆ ನೀಡಿರುವ ವಿರಾಟ್ ಕೊಹ್ಲಿ ಆಫ್ರಿಕಾ ವಿರುದ್ದದ ಆಡಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಅರ್ಧ ಶತಕ ಗಳಿಸಿದ್ದರು. ಒಂದರಲ್ಲಿ ಶೂನ್ಯ ಸುತ್ತಿದ್ದರು. ಹೀಗಾಗಿ ಆವರು ಎರಡನೇ ಸ್ಥಾನ ಉಳಿಸಿಕೊಂಡಿದ್ದಾರೆ. ಸರಣಿಯಲ್ಲಿ ಒಂದೆರೆಡು ಶತಕ ದಾಖಲಿಸಿದ್ದರೇ, ಮೊದಲನೇ ಸ್ಥಾನಕ್ಕೆ ಏರುವ ಅವಕಾಶ ಇತ್ತು.

ಇನ್ನು ಗಾಯದ ಸಮಸ್ಯೆಯ ಕಾರಣ ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಹಾಗೂ ಏಕದಿನ ಸರಣಿಯನ್ನು ತಪ್ಪಿಸಿಕೊಂಡಿದ್ದ ರೋಹಿತ್ ಶರ್ಮಾ ಮೂರನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಅವರು ಈ ಸರಣಿಯಲ್ಲಿ ಆಡಿದ್ದರೇ, ಮೊದಲ ಸ್ಥಾನ ಪಡೆಯುವ ಸಾಧ್ಯತೆ ಇತ್ತು. ಮುಂಬರುವ ವಿಂಡೀಸ್ ಸರಣಿಯಲ್ಲಿ ಉತ್ತಮವಾಗಿ ಆಡಿ, ಅಂಕಪಟ್ಟಿಯಲ್ಲಿ ಮೇಲೆರುವ ಅವಕಾಶ ವಿರಾಟ್ ಹಾಗೂ ರೋಹಿತ್ ಗಿದೆ. ಅವರು ಅದನ್ನು ಹೇಗೆ ಬಳಸಿಕೊಳ್ಳುತ್ತಾರೆಂಬುದನ್ನು ಕಾದು ನೋಡಬೇಕಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.