ಕೇವಲ 32 ದಿನದಲ್ಲಿ ಕೊತ್ತಂಬರಿ ಸೊಪ್ಪು ಬೆಳೆದ ರೈತ, ಗಳಿಸಿದ ಮೊತ್ತ ಎಷ್ಟು ಗೊತ್ತೇ?? ಯಾವ ಟ್ರಿಕ್ ಬಳಸಿದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕೊತ್ತಿಮಿರಿ ಸೊಪ್ಪು ಸ್ವಲ್ಪ ದಿನಗಳ ಕಾಲ ಟ್ರೋಲ್ ಪೇಜ್ ಅಡ್ಮಿನ್ ಗಳ ಫೆವರೇಟ್ ಕಂಟೆಂಟ್ ಆಗಿತ್ತು. ಈಗ ಅದೇ ಕೊತ್ತಂಬರಿ ಸೊಪ್ಪು ರೈತನೊಬ್ಬನ ಮನೆಯ ಭಾಗ್ಯದ ಬೆಳಕಾಗಿ ಹೊರಹೊಮ್ಮುತ್ತಿದೆ. ಅಲ್ಪಾವಧಿಯ ಕೃಷಿ ರೈತರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಹಲವಾರು ರೈತರು ಹೇಳುತ್ತಾರೆ. ಆದರೇ ಅಲ್ಪಾವಧಿ ಕೊತ್ತಂಬರಿ ಸೊಪ್ಪು ಬೆಳೆದ ರೈತರೊಬ್ಬರು ಭರ್ಜರಿ ಲಾಭಗಳಿಸಿದ ಪ್ರಸಂಗ ನೆಲಮಂಗಲ ತಾಲೂಕಿನಲ್ಲಿ ನಡೆದಿದೆ.

ಹೌದು ನೆಲಮಂಗಲ ತಾಲೂಕಿನ ಕುಲುವನಹಳ್ಳಿಯ ಗ್ರಾಮ ಪಂಚಾಯ್ತಿಯ ಬಿಲ್ಲನಕೋಟೆ ಗ್ರಾಮದ ಪ್ರಗತಿಪರ ರೈತ ರಂಗಸ್ವಾಮಿಗೆ ತನಗಿದ್ದ ಅಲ್ಪ ಜಮೀನಾದ ಎರಡು ಗುಂಟೆಯಲ್ಲಿ ಕಳೆದ ತಿಂಗಳು ಎರಡು ಸಾವಿರ ಕೊತ್ತಂಬರಿ ಬೀಜಗಳನ್ನ ಚೆಲ್ಲಿ, ಪಟ್ಟಿ ಮಾಡಿ ನೆಟ್ಟಿದ್ದರು. ಕೃಷಿಯಲ್ಲಿ ಅಪಾರ ಆಸಕ್ತಿ ಹೊಂದಿರುವ ರಂಗಸ್ವಾಮಿ ಈ ಭಾರಿ ಶತಾಯಗತಾಯ ಲಾಭಗಳಿಸಲೇಬೆಕೆಂದು ತಮಗಿದ್ದ ಎರಡು ಗುಂಟೆ ಜಾಗದಲ್ಲಿ ಕೊತ್ತಂಬರಿ ಸೊಪ್ಪು ಬೆಳೆಯಲು ನಿರ್ಧರಿಸಿದ್ದರು.

ಅವರ ಆಸೆಯಂತೆ ಅವರ ಕುಟುಂಬ ವರ್ಗದವರು ರಂಗಸ್ವಾಮಿಯವರಿಗೆ ಸಂಪೂರ್ಣ ಸಹಕಾರ ನೀಡಿದರು. ಕೇವಲ ಮೂರು ಸಾವಿರ ಖರ್ಚು ಮಾಡಿ, ಬಿತ್ತಿದ್ದ ಕೊತ್ತಂಬರಿ ಸೊಪ್ಪು ಒಂದು ತಿಂಗಳೊಳಗೆ ಬೆಳೆದು ನಿಂತಿದೆ. ಈಗ ನಿನ್ನೆ ಕಟಾವು ಮಾಡಿದ್ದ ಕೊತ್ತಂಬರಿ ಸೊಪ್ಪು ಬರೋಬ್ಬರಿ ಹದಿನಾರು ಸಾವಿರ ರೂಪಾಯಿಗೆ ಮಾರಾಟವಾಗಿದೆ. ಈ ಮೂಲಕ ತಿಂಗಳೊಳಗೆ ರೈತರಿಗೆ ಹದಿಮೂರು ಸಾವಿರ ಲಾಭ ದೊರೆತಿದೆ. ಈ ಬಗ್ಗೆ ಮಾತನಾಡಿದ ರಂಗಸ್ವಾಮಿ ತನ್ನ ಕೆಲಸಕ್ಕೆ ಸಹಕಾರ ನೀಡಿದ ಅಣ್ಣ ಗೋವಿಂದರಾಜು, ಅತ್ತಿಗೆ.ತಾಯಮ್ಮ, ಹೆಂಡತಿ ಶಾರದಮ್ಮರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅದಲ್ಲದೇ ತಮ್ಮ ಉಳಿದ ಜಮೀನಿನಲ್ಲಿ ಕೋಸು, ತರಕಾರಿ ಹೀಗೆ ಮಿಶ್ರ ಬೆಳೆಯನ್ನು ಬೆಳೆದು ಅಧಿಕ ಲಾಭ ಮಾಡುವ ಚಿಂತನೆಯಲ್ಲಿದ್ದಾರೆ.