ಶ್ರೀ ಕೃಷ್ಣನ ಹೃದಯ ಇಂದಿಗೂ ಬಡಿಯುತ್ತಾ ಎಲ್ಲಿದೆ ಗೊತ್ತಾ?? ಇನ್ನು ಜೀವಂತವಾಗಿದೆ ಎನ್ನುತ್ತಿರುವ ಸ್ಥಳ ಎಲ್ಲಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಸಖಿಯರ ಪ್ರಿಯ ಸಖ ಶ್ರೀಕೃಷ್ಣ. ಆತನನ್ನು ಅನುಸರಿಸದವರ್ಯಾರು? ಇಷ್ಟ ಪಡದವರ್ಯಾರು!? ಎಲ್ಲರ ಮೆಚ್ಚಿನ ರಾಧೇಶ್ಯಾಮನ ಹೃದಯ ಮಾತ್ರ ಇಂದಿಗೂ ಬಡಿದುಕೊಳ್ಳುತ್ತಿದೆ ಎಂದರೆ ನಂಬುವಿರೇ!? ಬನ್ನಿ ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ.

ಕೃಷ್ಣ ನ ಅಂತ್ಯ ಯಾವಾಗ: 36ವರ್ಷಗಳ ಮಹಾಭಾರತ ಯುದ್ಧ ಮುಗಿಸಿ ಕೃಷ್ಣ ತನ್ನ ಅವತಾರವನ್ನು ಮುಗಿಸುತ್ತಾನೆ. ಮಹಾವಿಷ್ಣುವಿನ ದ್ವಾಪರ ಯುಗದಲ್ಲಿನ ಕೃಷ್ಣನ ಅವತಾರವನ್ನು ಮಾನವ ರೂಪಿ ಎಂದು ಹೇಳಲಾಗುತ್ತದೆ. ಹಾಗಾಗಿ ಕುರುಕ್ಷೇತ್ರ ಯುದ್ಧದ ನಂತರ ಸಾಯುತ್ತಾನೆ ವಾಸುದೇವ ಕೃಷ್ಣ.

ಶ್ರೀ ಕೃಷ್ಣನ ಹೃದಯ ಇಂದಿಗೂ ಬಡಿಯುತ್ತಾ ಎಲ್ಲಿದೆ ಗೊತ್ತಾ?? ಇನ್ನು ಜೀವಂತವಾಗಿದೆ ಎನ್ನುತ್ತಿರುವ ಸ್ಥಳ ಎಲ್ಲಿದೆ ಗೊತ್ತೇ?? 2

ಶ್ರೀ ಕೃಷ್ಣನ ದೇಹ ದಹನ ಹೇಗೆ: ಶ್ರೀ ಕೃಷ್ಣ ಸ್ವರ್ಗಸ್ಥನಾದ ಮೇಲೆ ಅವನ ದೇಹವನ್ನು ಪಾಂಡವರು ಸುಡುತ್ತಾರೆ. ಆದರೆ ಕೃಷ್ಣ ನ ದೇಹ ಭಸ್ಮವಾದರೂ ಹೃದಯ ಬಡಿತವನ್ನು ನಿಲ್ಲಿಸುವುದಿಲ್ಲ.

ಕೃಷ್ಣನ ಹೃದಯವನ್ನು ಪಾಂಡವರು ಏನು ಮಾಡಿದರು: ಬೆಂಕಿಯಲ್ಲಿ ಸುಡದ ಕೃಷ್ಣ ನ ಹೃದಯವನ್ನು ನೀರಿಗೆ ಹಾಕುತ್ತಾರೆ ಪಾಂಡವರು. ನಂತರ ಒಂದು ಮರದ ತುಂಡಿನ ಆಕಾರ ಪಡೆದು ಕೃಷ್ಣನ ಹೃದಯ ನೀರಿನಲ್ಲಿ ತೇಲುತ್ತದೆ.

ಶ್ರೀ ಕೃಷ್ಣ ನ ಹೃದಯ ಸಿಕ್ಕಿದ್ದು ಯಾರಿಗೆ: ಮಾಧವನ ಹೃದಯ ಒರಿಸ್ಸಾದ ಒಂದು ಸಾಗರದಲ್ಲಿ ತೇಲಿ ಬರುತ್ತದೆ. ಒರಿಸ್ಸಾದ ರಾಜ ಇಂದ್ರದ್ಯುಮ್ನ ನಿಗೆ ಕನಸಿನಲ್ಲಿ ಕಾಣಿಸಿಕೊಂಡ ಕೃಷ್ಣ ತಾನು ಬಂದಿರುವುದಾಗಿ ಹೇಳುತ್ತಾನೆ. ಮರುದಿನ ಮರದ ತುಂಡನ್ನು ರಾಜ ನೋಡುತ್ತಾನೆ.

ವಾಸುದೇವ ಹೃದಯವಿರುವುದೇಲ್ಲಿ: ಇಂದ್ರದ್ಯುಮ್ನ ಮರದ ತುಂಡಿನ ಆಕೃತಿಯಲ್ಲಿರುವ ಕೃಷ್ಣ ನ ಹೃದಯವನ್ನು ಪುರಿ ಜಗನ್ನಾಥನ ವಿಗ್ರಹದೊಳಗೆ ಇಡುತ್ತಾನೆ. ಅಲ್ಲಿಂದ ಶ್ರೀ ಕೃಷ್ಣ ಪುರಿಯಲ್ಲಿ ನೆನೆಸಿದ್ದಾನೆಂದು ಪ್ರತೀತಿ. ಪ್ರತಿವರ್ಷ ಇಲ್ಲಿಗೆ ಲಕ್ಷಾಂತರ ಭಕ್ತರು ಜಗನ್ನಾಥನ ದರ್ಶನ ಪಡೆಯಲು ಬರುತ್ತಾರೆ.