ಭಗವಂತ ನೀವು ಲಕ್ಷಾಧಿಪತಿ ಆಗುವ ಮೊದಲು ಈ ಚಿಕ್ಕ ಸೂಚನೆ ನೀಡುತ್ತಾರೆ, ಏನೇ ಆದರೂ ಸರಿ ಕಡೆಗಣಿಸಬೇಡಿ.

ನಮಸ್ಕಾರ ಸ್ನೇಹಿತರೇ ಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬ ವ್ಯಕ್ತಿಗೂ ತಾನು ದುಡ್ಡು ಮಾಡಬೇಕು , ಶ್ರೀಮಂತ ಜೀವನವನ್ನು ಅನುಭವಿಸಬೇಕೆಂಬ ಕನಸು ಇದ್ದೇ ಇರುತ್ತೆ. ಕೆಲವರು ಅದನ್ನು ಸಾಧಿಸಲು ಪ್ರಾಮಾಣಿಕ ಮಾರ್ಗದಿಂದ ಕಷ್ಟಪಟ್ಟರೆ ಕೆಲವರು ಆಡ್ಡಮಾರ್ಗದಲ್ಲಿ ಅದನ್ನು ಸಾಧಿಸಲು ಹವಣಿಸುತ್ತಾರೆ. ಆದರೆ ನಮ್ಮ ಪುರಾತನ ಆಚರಣೆ ಹಾಗೂ ನಂಬಿಕೆಗಳ ಹಾಗೂ ಜ್ಯೋತಿಷ್ಯದ ಪ್ರಕಾರ ಹೇಳೋದಾದ್ರೆ ಮಾನವರಿಗೆ ಭವಿಷ್ಯದಲ್ಲಿ ಅಂದರೆ ಮುಂದೆ ಒಳಿತಾಗುವ ಹಾಗೂ ಕೆಡುಕಾಗುವ ಶಕುನ ಅಪಶಕುನಗಳು ಕೆಲವು ಲಕ್ಷಣಗಳ ಮೂಲಕ ಕಾಣುತ್ತವೆ.

ಅದರಲ್ಲಿ ಶ್ರೀಮಂತ ರಾಗುವ ಲಕ್ಷಣಗಳ ಸೂಚನೆ ಕೂಡ ಇದೆ. ಇಂದು ಆ ಅದೃಷ್ಟಕಾರಿ ಸೂಚನೆಗಳ ಬಗ್ಗೆ ತಿಳಿಯೋಣ. ಯಾವುದು ನಮ್ಮನ್ನು ಶ್ರೀಮಂತ ವ್ಯಕ್ತಿಯನ್ನಾಗಿ ಮಾಡುತ್ತವೆಯೆಂದು. ಸ್ನೇಹಿತರೇ ಪುರಾಣಗಳ ಪ್ರಕಾರ ನೀವೆಲ್ಲಾದರೂ ಹೋಗುತ್ತಿದ್ದರೆ ಶಂಖನಾದ ಕೇಳಿಸಿದರೆ ಅದು ಶುಭ ಶಕುನ , ನಾವು ಹೋಗುವ ಕಡೆ ಅಥವಾ ನಾವು ಕೈ ಹಾಕಿರುವ ಕೆಲಸ ನಮಗೆ ಶುಭವನ್ನು ತಂದು ಕೊಡುತ್ತದೆ ಎಂಬುದರ ಸಂಕೇತ. ಈ ಶಂಖನಾದವನ್ನು ಕೇಳಿಸಿಕೊಳ್ಳುವುದರ ಇನ್ನೊಂದು ಅರ್ಥವೇನೆಂದರೆ ನಿಮ್ಮ ಅದೃಷ್ಟದ ಮುಚ್ಚಿದ ಬಾಗಿಲುಗಳು ಈ ಶಂಖನಾದದ ಪವಿತ್ರ ಸದ್ದಿನಿಂದ ತೆರೆದುಕೊಳ್ಳುತ್ತೆವೆ ಎಂಬುದು ಕೂಡ ಪ್ರತೀತಿ.

ಎಲ್ಲಾದರೂ ಹೊರ ಸಂಚರಿಸುವಾಗ ಕಬ್ಬನ್ನು ನೋಡಿದರೆ ಅದು ಕೂಡ ನಿಮ್ಮ ಆ ದಿನದ ಸಮಯದಲ್ಲಿ ಒಂದಾದರೂ ಶುಭ ಸುದ್ದಿ ತರೋದು ಗ್ಯಾರಂಟಿ. ಅಲ್ಲದೇ ಧನಲಕ್ಷ್ಮಿ ಯ ವಾಹನವೆಂದೇ ನಂಬಲಾಗುವ ಗೂಬೆ ನಿಮಗೆ ಪದೇ ಪದೇ ಗೋಚರಿಸುತ್ತಿದೆ ಎಂದರೆ ಖಂಡಿತವಾಗಿಯೂ ನಿಮಗೆ ಕೆಲವೇ ದಿನಗಳಲ್ಲಿ ಶ್ರೀ ಲಕ್ಷ್ಮಿ ದೇವಿಯ ಕೃಪಾ ಕಟಾಕ್ಷ ಪ್ರಾಪ್ತಿಯಾಗುತ್ತದೆ ಎನ್ನೋದ್ರಲ್ಲಿ ಯಾವ ಅನುಮಾನವೂ ಇಲ್ಲ. ಯಾಕೆಂದರೆ ಇದು ಶತಃಸಿದ್ಧ ಸಮೃದ್ಧಿ ಹಾಗೂ ಅಭಿವೃದ್ಧಿಯ ಸಂಕೇತ.

ಇನ್ನು ನೀವೆಲ್ಲಾದರೂ ಹೊರಗಡೆ ಹೋಗುವ ಸಂದರ್ಭದಲ್ಲಿ ನಾಯಿ ತನ್ನ ಬಾಯಲ್ಲಿ ಆಹಾರವನ್ನು ಕಚ್ಚಿಕೊಂಡು ಬರುವುದು ನಿಮಗೆ ಕಾಣಿಸಿದೆ ಎಂದರೆ ಖಂಡಿತ ನಿಮಗೂ ಕೂಡ ಎಲ್ಲಿಂದಲೋ ಆವತ್ತು ಧನ ಪ್ರಾಪ್ತಿಯಾಗುತ್ತದೆ ಎಂಬುದು ಅದರ ಸಂಕೇತ. ಮತ್ತೆ ಪದೇ ಪದೇ ನೀವು ಎದ್ದಾಗ ಪೊರಕೆಯ ದರ್ಶನ ಆಗುತ್ತಿದೆಯೆಂದರೆ ನಿಮಗೆ ಸದ್ಯದಲ್ಲೇ ದೊಡ್ಡ ಮೊತ್ತದ ಧನರಾಶಿ ಸಿಗಲಿದೆ ಎಂಬುದು ಶಾಸ್ತ್ರ ಗಳ ಕಂಡು ಕೊಂಡ ನಂಬಿಕೆ.

ಹೀಗಾಗಿ ಈ ಮೇಲೆ ನಮೂದಿಸಿರುವ ಯಾವುದೇ ಘಟನೆಗಳು ಹಾಗೂ ವಸ್ತುಸ್ಥಿತಿ ನಿಮ್ಮ ದೈನಂದಿನ ಜೀವನದಲ್ಲಿ ನಡೆದರೆ ಕಡೆಗಣಿಸದೆ ಖಂಡಿತವಾಗಿಯೂ ನಂಬಿಕೆ ಇಡಿ. ನಿಮಗೆ ಅದೃಷ್ಟದ ಬಾಗಿಲು ಸದ್ಯದಲ್ಲೇ ತೆರೆದೇ ತೆರೆಯುತ್ತದೆ. ಈಗಿನ ಸಮಯದಲ್ಲಿ ಪ್ರತಿಯೊಂದು ರೂಪಾಯಿ ಕೂಡ ಲೆಕ್ಕಕ್ಕೆ ಬರುತ್ತದೆ. ಕೆಲಸ ವಿಲ್ಲದೆ ಇದ್ದಾಗ ಇಂತಹ ಅದೃಷ್ಟದ ಬಾಗಿಲು ತೆರೆದಾಗ ಯಾರಿಗೆ ಗೊತ್ತು ನಿಮಗೆ ಬದುಕು ಬಂಗಾರ ಕೂಡ ಆದೀತು. ಯಾಕೆಂದರೆ ಶಾಸ್ತ್ರ ಪುರಾಣಗಳಲ್ಲಿ ಸುಮ್ಮ ಸುಮ್ಮನೆ ಇಂತಹ ವಿಚಾರಗಳನ್ನು ನಮೂದಿಸಿರುವುದಿಲ್ಲ.

ಸರಿಯಾದ ಕಾರಣ ಅಥವಾ ಅದನ್ನು ನಮ್ಮ ಪೂರ್ವಜರು ಪ್ರತ್ಯಕ್ಷವಾಗಿ ಅನುಭವಿಸಿದ ಮೇಲಷ್ಟೇ ಈ ವಿಚಾರಕ್ಕೆ ಪುಷ್ಟಿಯನ್ನು ನೀಡಿರುತ್ತಾರೆ. ಹಾಗಾಗಿ ಇದನ್ನು ಮೂಢನಂಬಿಕೆ ಎಂದು ಕಡೆಗಣಿಸದೆ ಪಾಲಿಗೆ ಬಂದದ್ದು ಪಂಚಾಮೃತ ಎಂದು ಈ ಗುಣಲಕ್ಷಣಗಳು ನಿಮ್ಮ ಬದುಕಿನಲ್ಲಿ ಕಂಡು ಬಂದರೆ ತಪ್ಪದೇ ಅನುಸರಿಸಿ, ಯಾಕೆಂದರೆ ನಿಮ್ಮ ಅದೃಷ್ಟದ ಬಾಗಿಲು ನಿಮ್ಮನ್ನು ಕೈಬೀಸಿ ಕರೆದಾಗಲೂ ನೀವು ಅದಕ್ಕೆ ಪ್ರತಿಕ್ರಿಯೆ ನೀಡದೇ ಹೋದರೆ ನಂತರ ಅದರ ನಷ್ಟ ನಿಮಗೆ ಆಗೋದ್ರಿಂದ ಇದನ್ನು ಪಾಲಿಸಿದರೆ ನಷ್ಟವೇನು ಇಲ್ವಲ್ಲ. ಇದರ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ಹಾಗೂ ಅಭಿಪ್ರಾಯಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ವ್ಯಕ್ತಪಡಿಸಿ.