ಯಾವ ಮಹಿಳೆಯರು ಹೇಳದೆ ಇದ್ದರೂ ಮದುವೆಯಾದ ಮೇಲೆ ಪತಿಯಿಂದ ಈ ಮೂರು ವಿಚಾರಗಳನ್ನು ಬಯಸುತ್ತಾರೆ ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರ ಜೀವನದಲ್ಲಿ ಕೂಡ ಪ್ರಾಚೀನ ಕಾಲದಿಂದ ಇಂದಿನವರೆಗೂ ಕೂಡ ಪವಿತ್ರವಾಗಿರುವ ಸಂಬಂಧವೆಂದರೆ ಅದು ಗಂಡ-ಹೆಂಡತಿ ಸಂಬಂಧ ಎನ್ನುವುದು ತಪ್ಪಾಗಲಾರದು. ಇಬ್ಬರ ಮದುವೆಯೆನ್ನುವುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬುದಾಗಿ ಹಿರಿಯರು ಹೇಳುತ್ತಾರೆ. ಹೀಗಾಗಿ ಮದುವೆಯನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಕೂಡ ಪ್ರಮುಖವಾದ ಅಂಶವನ್ನು ಹಾಗೂ ಮಹತ್ವವಾದ ಪಾತ್ರವನ್ನು ವಹಿಸುತ್ತದೆ.

ಇದಕ್ಕಾಗಿ ಮದುವೆಯಾಗುವ ಮುಂಚೆ ತಮ್ಮ ಸಂಗಾತಿಯ ಕುರಿತಂತೆ ನೂರು ಬಾರಿ ಯೋಚಿಸಿ ನಂತರ ನಿರ್ಧಾರ ತೆಗೆದುಕೊಳ್ಳುವುದು ಪ್ರತಿಯೊಬ್ಬರ ಮದುವೆಗೂ ಕೂಡ ಉತ್ತಮವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ನೀವೇ ನೋಡಿರುವ ಹಾಗೆ ಒಮ್ಮೆ ಇಷ್ಟವಾದರೆ ಸಾಕು ಮದುವೆಯಾಗುವ ನಿರ್ಧಾರವನ್ನು ಮಾಡಿಬಿಡುತ್ತಾರೆ. ಯೋಚಿಸದೆ ಮದುವೆಯಾಗಿರುವ ಮದುವೆ ಹೆಚ್ಚು ದಿನಗಳ ಕಾಲ ಉಳಿಯುವುದಿಲ್ಲ ಎನ್ನುವುದು ಕೂಡ ನೀವು ಹಲವಾರು ಬಾರಿ ಸುದ್ದಿಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೀರಿ.

ಯಾವ ಮಹಿಳೆಯರು ಹೇಳದೆ ಇದ್ದರೂ ಮದುವೆಯಾದ ಮೇಲೆ ಪತಿಯಿಂದ ಈ ಮೂರು ವಿಚಾರಗಳನ್ನು ಬಯಸುತ್ತಾರೆ ಯಾವ್ಯಾವು ಗೊತ್ತೇ?? 4

ಹೀಗಾಗಿ ತಾವು ಜೀವನಪರ್ಯಂತ ಜೊತೆಯಾಗಿ ಜೀವಿಸುವಂತೆ ಸಂಗಾತಿಯ ಕುರಿತು ನೂರಾರು ಬಾರಿ ಯೋಚಿಸಿ ನಿರ್ಧಾರ ತೆಗೆದುಕೊಂಡು ಮದುವೆಯಾಗುವುದು ಉತ್ತಮ. ಅದರಲ್ಲೂ ಒಬ್ಬ ಹುಡುಗಿ ಹುಟ್ಟಿದ ದಿನದಿಂದಲೂ ಕೂಡ ತಮ್ಮ ತಂದೆ ತಾಯಿಯ ಜೊತೆಗೆ ರಾಜಕುಮಾರಿಯಂತೆ ಬೆಳೆದಿರುತ್ತಾಳೆ. ಹೀಗಾಗಿ ಆಕೆ ತನ್ನ ತವರು ಮನೆಯಲ್ಲಿ ಬಿಟ್ಟು ನಿಮ್ಮ ಮನೆಗೆ ಬರುತ್ತಿದ್ದಾರೆ ಎಂದರೆ ನೀವು ಕೂಡ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಆಗಿರುವುದು ಆದ್ಯ ಕರ್ತವ್ಯವಾಗಿದೆ. ಹೀಗಾಗಿ ಮದುವೆಯಾದಮೇಲೆ ನಿಮ್ಮ ಹೆಂಡತಿ ನಿಮ್ಮ ಕುರಿತಂತೆ ಮೂರು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ.

ಅವರು ಅದನ್ನು ಬಾಯಿಬಿಟ್ಟು ಹೇಳದಿದ್ದರೂ ಕೂಡ ನೀವು ಅದನ್ನು ಪೂರೈಸ ಬೇಕಾಗಿರುವುದು ಆದ್ಯ ಕರ್ತವ್ಯವಾಗಿದೆ. ಹೀಗಾಗಿ ಆ ಮೂರು ವಿಚಾರಗಳನ್ನು ಈ ಲೇಖನಿಯ ಮೂಲಕ ತೆಗೆದುಕೊಂಡು ಒಳ್ಳೆಯ ಗಂಡನಾಗಲು ಪ್ರಯತ್ನಿಸಿ.

ಯಾವ ಮಹಿಳೆಯರು ಹೇಳದೆ ಇದ್ದರೂ ಮದುವೆಯಾದ ಮೇಲೆ ಪತಿಯಿಂದ ಈ ಮೂರು ವಿಚಾರಗಳನ್ನು ಬಯಸುತ್ತಾರೆ ಯಾವ್ಯಾವು ಗೊತ್ತೇ?? 5

ಮೊದಲಿಗೆ ಆಸೆಯನ್ನು ಪೂರೈಸುವುದು; ನಿಮಗಾಗಿ ಜೀವನಪೂರ್ತಿ ಮನೆಯವರನ್ನು ಬಿಟ್ಟು ಬಂದಿರುವ ಹುಡುಗಿ ನಿಮ್ಮ ಬಳಿ ಏನಾದರೂ ಆಸೆಯನ್ನು ಕೇಳಿದರೆ ಅದನ್ನು ಪೂರೈಸುವ ಪ್ರಯತ್ನವಾದರೂ ಖಂಡಿತವಾಗಿ ಮಾಡಲೇಬೇಕಾಗುತ್ತದೆ. ಆಗಲೇ ನಿಮ್ಮ ಸಂಗಾತಿಗೆ ನೀವು ನಿಮ್ಮ ದಾಂಪತ್ಯ ಜೀವನದಲ್ಲಿ ನಿಮ್ಮ ಸಂಗಾತಿಗಾಗಿ ಏನು ಕೂಡ ಮಾಡಲು ಸಿದ್ಧರಾಗಿದ್ದೀರಿ ಅನ್ನುವ ಸಂದೇಶವನ್ನು ನೀಡಿದಂತಾಗುತ್ತದೆ. ಆಗ ದಾಂಪತ್ಯಜೀವನದಲ್ಲಿ ಇಬ್ಬರ ನಡುವೆ ಕೂಡ ಸಂಬಂಧ ಎನ್ನುವುದು ಇನ್ನಷ್ಟು ಬಲಿಷ್ಠವಾಗುತ್ತದೆ. ಹೀಗಾಗಿ ನಿಮ್ಮ ಧರ್ಮಪತ್ನಿ ನಿಮ್ಮ ಬಳಿ ಏನನ್ನಾದರೂ ಕೇಳಿದರೆ ಅದನ್ನು ಪೂರೈಸುವ ಪ್ರಯತ್ನವನ್ನು ಮಾಡಿದರೆ ಖಂಡಿತವಾಗಿ ನಿಮ್ಮ ದಾಂಪತ್ಯ ಜೀವನ ಎನ್ನುವುದು ದೀರ್ಘಕಾಲದವರೆಗೆ ಯಾವುದೇ ಸಮಸ್ಯೆಗಳಿಲ್ಲ ಸುಖ ಶಾಂತಿಯಿಂದ ಮುಂದುವರೆಯುತ್ತದೆ.

ಎರಡನೇದಾಗಿ ನಿಮ್ಮ ಹೆಂಡತಿಗೆ ಸಮಯವನ್ನು ನೀಡಿ; ಇಂದಿನ ಸ್ವಾರ್ಥ ಜಗತ್ತಿನಲ್ಲಿ ಹಣವನ್ನು ಗಳಿಸುವುದು ಪ್ರಮುಖ ಕಾರ್ಯವಾಗಿದೆ ನಿಜ ಆದರೆ ಹಣಗಳಿಸುವ ಕಾರ್ಯದ ಹಿಂದೆ ಬಿದ್ದು ನಿಮ್ಮ ಹೆಂಡತಿಯನ್ನು ಮರೆತುಬಿಡಬೇಡಿ. ಆಕೆ ನಿಮಗಾಗಿ ಮನೆಯಲ್ಲಿ ಕಾಯುತ್ತ ಕುಳಿತಿರುತ್ತಾಳೆ. ಹೀಗಾಗಿ ಆಕೆಯ ಜೊತೆಗೆ ಕೂಡ ಉತ್ತಮ ಮೌಲ್ಯಯುತ ಸಮಯಗಳನ್ನು ಕಳೆಯುವುದು ಪ್ರಮುಖವಾಗಿರುತ್ತದೆ. ಆಗ ಆಕೆಗೆ ಒಂಟಿ ಅನುಭವ ಆಗುವುದಿಲ್ಲ.

ವಾರದಲ್ಲಿ ಅಥವ ತಿಂಗಳಿನಲ್ಲಿ ಒಮ್ಮೆಯಾದರೂ ಆಕೆಯನ್ನು ಬೇರೆ ಬೇರೆ ವಿಶೇಷ ಸ್ಥಳಗಳಿಗೆ ಹೋಗಿ ಆಕೆಗೆ ವಿಶೇಷ ಫೀಲಿಂಗ್ ನೀಡುವಂತಹ ಕಾರ್ಯವನ್ನು ಮಾಡಿದರೆ ನಿಮ್ಮ ಕುರಿತಂತೆ ಕೂಡ ಆಕೆಗೆ ಇರುವಂತಹ ಗೌರವ ಹಾಗೂ ಪ್ರೀತಿಗಳು ಹೆಚ್ಚಾಗುತ್ತದೆ. ನೀವು ನಿಮ್ಮ ಹೆಂಡತಿಗಾಗಿ ಸಮಯವನ್ನು ನೀಡದಿದ್ದರೆ ನಿಮ್ಮ ಮೇಲೆ ಗೌರವ ಹಾಗೂ ಪ್ರೀತಿ ಕಡಿಮೆ ಆಗುವುದು ಮಾತ್ರವಲ್ಲದೆ ನಿಮ್ಮ ಮೇಲೆ ಕೋಪ ಕೂಡ ಹೆಚ್ಚಾಗುತ್ತದೆ. ಈ ಮೂಲಕ ದಾಂಪತ್ಯ ಜೀವನದಲ್ಲಿ ಬಿರುಕು ಕೂಡ ಮೂಡಬಹುದಾಗಿದೆ.

ಯಾವ ಮಹಿಳೆಯರು ಹೇಳದೆ ಇದ್ದರೂ ಮದುವೆಯಾದ ಮೇಲೆ ಪತಿಯಿಂದ ಈ ಮೂರು ವಿಚಾರಗಳನ್ನು ಬಯಸುತ್ತಾರೆ ಯಾವ್ಯಾವು ಗೊತ್ತೇ?? 6

ಮೂರನೇದಾಗಿ ಪ್ರಾಮಾಣಿಕರಾಗಿರಬೇಕು; ಪ್ರತಿಯೊಬ್ಬರ ದಾಂಪತ್ಯ ಜೀವನದಲ್ಲಿ ಕೂಡ ಹೆಂಡತಿ ಗಂಡ ತನಗೆ ಪ್ರಾಮಾಣಿಕನಾಗಿರಬೇಕು ಎನ್ನುವ ಆಸೆಯನ್ನು ವ್ಯಕ್ತಪಡಿಸುತ್ತಾಳೆ. ಅದು ರಹಸ್ಯವಾದ ವಿಚಾರಗಳೇ ಇರಲಿ ಅಥವಾ ಕಷ್ಟ-ಸುಖಗಳೇ ಇರಲಿ. ಯಾವುದನ್ನು ಕೂಡ ತನ್ನಿಂದ ತನ್ನ ಗಂಡ ಮುಚ್ಚಿಡಬಾರದು ಎನ್ನುವುದಾಗಿ ಎಂದು ಅಂದುಕೊಳ್ಳುತ್ತಾರೆ. ಸಂಸಾರದಲ್ಲಿ ದಂಪತಿಗಳ ನಡುವೆ ಎಷ್ಟು ಪಾರದರ್ಶಕತೆ ಇರುತ್ತದೆಯೋ ಅಷ್ಟು ಚೆನ್ನಾಗಿ ಸಂಸಾರ ಸುಖ ಶಾಂತಿಯಿಂದ ಮುಂದುವರಿಯುತ್ತದೆ.

ಇಲ್ಲದಿದ್ದರೆ ನೀನೊಂದು ತೀರ ನಾನೊಂದು ತೀರ ಎನ್ನುವ ಭಾವನೆ ಇಬ್ಬರಲ್ಲು ಕೂಡ ಮೂಡುತ್ತದೆ. ಹೀಗಾಗಿ ಆದಷ್ಟು ನಿಮ್ಮ ಹೆಂಡತಿಗೆ ನೀವು ಪ್ರಾಮಾಣಿಕರಾಗಿ ರಲು ಪ್ರಯತ್ನಿಸಿ. ಯಾವುದೇ ಕಷ್ಟ-ಸುಖಗಳು ರಹಸ್ಯ ವಿಚಾರಗಳು ಏನಿದ್ದರೂ ಕೂಡ ನಿಮ್ಮ ಹೆಂಡತಿಯೊಂದಿಗೆ ಚರ್ಚಿಸಿ. ಅವರು ನಿಮ್ಮ ಹೆಂಡತಿ ಖಂಡಿತವಾಗಿ ನಿಮ್ಮ ಸಾಥ್ ನೀಡುತ್ತಾರೆ. ಈ ಮೂರು ವಿಚಾರಗಳನ್ನು ಮದುವೆಯಾದಮೇಲೆ ಹೆಂಡತಿಯರು ನಿಮ್ಮಿಂದ ಅಪೇಕ್ಷಿಸುತ್ತಾರೆ. ನೀವು ಕೂಡ ಇದನ್ನು ಒಪ್ಪುವುದಾದರೆ ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ಮೂಲಕ ಅಭಿಪ್ರಾಯಗಳನ್ನು ಹಂಚಿಕೊಳ್ಳಿ ಹಾಗೂ ಶೇರ್ ಮಾಡಿ