Mahila Samman Scheme: ಮಹಿಳೆಯರಿಗಾಗಿ ಲಕ್ಷ ಲಕ್ಷ ಲಾಭ ನೀಡುವ ಪೋಸ್ಟ್ ಆಫೀಸ್ ಯೋಜನೆ- ಇದು ಕೇವಲ ಮಹಿಳೆಯರಿಗೆ ಮಾತ್ರ.

Mahila Samman Scheme: ಫಿಕ್ಸೆಡ್ ಡೆಪಾಸಿಟ್ ಯೋಜನೆಯನ್ನು ಕೂಡ ಹಿಂದಿಕ್ಕುವಂತೆ ಕೇಂದ್ರ ವಿತ್ತ ಸಚಿವೆ ಆಗಿರುವಂತಹ ನಿರ್ಮಲ ಸೀತಾರಾಮನ್(Nirmala Seetharaman) ರವರು 2023 ಹಾಗೂ 24ರ ಸಾಲಿನ ಬಜೆಟ್ ಮಂಡನೆ ಮಾಡುವಾಗ ಘೋಷಿಸಿರುವಂತಹ ಒಂದು ಸ್ಕೀಮ್ ಈಗ ಸಾಕಷ್ಟು ಜನಪ್ರಿಯವಾಗುತ್ತಿದೆ. ನಾವು ಮಾತನಾಡುತ್ತಿರುವುದು ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್ ಸ್ಕೀಮ್(Mahila Samman Saving Certificate Scheme) ಬಗ್ಗೆ. ಈ ಜನಪ್ರಿಯ ಯೋಜನೆ ಯಾವ ರೀತಿಯಲ್ಲಿ ಸದ್ದು ಮಾಡುತ್ತಿದೆ ಎಂದರೆ ಈ ಯೋಜನೆ ಪ್ರಾರಂಭಿಸಿದ ಎರಡು ತಿಂಗಳಲ್ಲಿಯೇ 5 ಲಕ್ಷಕ್ಕೂ ಅಧಿಕ ಖಾತೆಗಳು ಓಪನ್ ಆಗಿವೆ. ಮಹಿಳೆಯರ ಆಸಕ್ತಿಯ ಮೇರೆಗೆ ಈ ಯೋಜನೆಯನ್ನು ಕೇವಲ ಪೋಸ್ಟ್ ಆಫೀಸ್ನಲ್ಲಿ ಮಾತ್ರ ಪ್ರಾರಂಭಿಸಲಾಗಿದೆ. ಇದೊಂದು ಚಿಕ್ಕ ಸೇವಿಂಗ್ ಯೋಜನೆಯಾಗಿದ್ದು ಆರ್ಥಿಕ ವ್ಯವಸ್ಥೆಯಲ್ಲಿ ಮಹಿಳೆಯರು ಕೂಡ ಪಾಲುದಾರಿಕೆಯನ್ನು ಹೊಂದಲಿ ಎನ್ನುವ ಕಾರಣಕ್ಕಾಗಿ ನಿರ್ಮಿಸಲಾಗಿದೆ.

Mahila Samman Scheme: ಮಹಿಳೆಯರಿಗಾಗಿ ಲಕ್ಷ ಲಕ್ಷ ಲಾಭ ನೀಡುವ ಪೋಸ್ಟ್ ಆಫೀಸ್ ಯೋಜನೆ- ಇದು ಕೇವಲ ಮಹಿಳೆಯರಿಗೆ ಮಾತ್ರ. 2

ಈ ವರ್ಷದ ಏಪ್ರಿಲ್ 1ರಿಂದ ಪ್ರಾರಂಭಿಸಿ 2025ರ ಮಾರ್ಚ್ 15 ರ ತನಕ ಕೂಡ ಈ ಯೋಜನೆಯಲ್ಲಿ ನೀವು ಖಾತೆಯನ್ನು ತೆರೆಯಬಹುದಾಗಿದೆ. ಈ ಯೋಜನೆಯನ್ನು ಕೇವಲ ಎರಡು ವರ್ಷಗಳಿಗಾಗಿ ತಯಾರಿಸಿದ್ದು ಭಾರತದ 1.59 ಲಕ್ಷಕ್ಕೂ ಅಧಿಕ ಪೋಸ್ಟ್ ಆಫೀಸ್ನಲ್ಲಿ(Post Office) ಯೋಜನೆಯನ್ನು ನೀವು ಕಾಣಬಹುದಾಗಿದೆ. ಈ ಯೋಜನೆಯನ್ನು ನೀವು ಕೂಡ ಪ್ರಾರಂಭಿಸಲು Form 1 ಅನ್ನು ಭರ್ತಿ ಮಾಡಬೇಕಾಗಿದ್ದು, ಈ ಯೋಜನೆಯಲ್ಲಿ ಕಡಿಮೆ ಎಂದರೆ ಸಾವಿರ ರೂಪಾಯಿ ಹಾಗೂ ಹೆಚ್ಚೆಂದರೆ 2 ಲಕ್ಷ ರೂಪಾಯಿಗಳವರೆಗು ಕೂಡ ಜಮಾ ಮಾಡಬಹುದಾಗಿದೆ. ಬಾಲಕಿಯರ ಖಾತೆಯನ್ನು ಕೂಡ ಅವರ ತಾಯಿಯ ಹೆಸರಿನಲ್ಲಿ ತೆರೆಯಬಹುದಾಗಿದ್ದು ಇದು ಎರಡು ವರ್ಷಗಳ ಯೋಜನೆಯಾಗಿದೆ. ಇದನ್ನು ಓದಿ..Ram Mandir: ಅಯೋಧ್ಯೆ ರಾಮಮಂದಿರ ಬೇರೆ ದೇವಸ್ಥಾನಗಳಿಗಿಂತ ಹೇಗೆ ಭಿನ್ನವಾಗಿರಲಿದೆ ಗೊತ್ತೇ?? ಹಣದ ಆಟ ನಡೆಯುವುದಿಲ್ಲವೇ? ಭಕ್ತಿಗಳಿಗೆ ಸಿಹಿ ಸುದ್ದಿ.

ಮಹಿಳೆಯರಿಗೊಂದು ತಯಾರಾಗಿರುವಂತಹ ಈ ವಿಶೇಷ ಯೋಜನೆಯಲ್ಲಿ ಈಗಾಗಲೇ ಎರಡು ತಿಂಗಳ ಅಂತ್ಯದ ಒಳಗೆ 5 ಲಕ್ಷಕ್ಕೂ ಅಧಿಕ ಮಹಿಳೆಯರು ಖಾತೆಯನ್ನು ತೆರೆದು ಹೂಡಿಕೆ ಮಾಡಿದ್ದಾರೆ ಎಂದರೆ ಇದರ ಮೇಲೆ ನಂಬಿಕೆ ಹಾಗೂ ಇದರ ಜನಪ್ರಿಯತೆ ಎಷ್ಟಿರಬಹುದು ಎಂಬುದನ್ನು ನೀವು ಅಂದಾಜಿಸಬಹುದಾಗಿದೆ. ಈ ಹೂಡಿಕೆಯಿಂದಲೇ ಸರ್ಕಾರದ ಖಜಾನೆಗೆ 3666 ಕೋಟಿ ರೂಪಾಯಿಗಳು ಬಂದಿವೆ. ಅಂದರೆ ಪ್ರತಿ ಖಾತೆಗಳು 73,000ಕ್ಕೂ ಅಧಿಕ ಹಣವನ್ನು ಹೂಡಿಕೆ ಮಾಡಿವೆ. ಮುಂದಿನ ದಿನಗಳಲ್ಲಿ ಬ್ಯಾಂಕಿನಲ್ಲಿ ಕೂಡ ಈ ಯೋಜನೆಯನ್ನು ಜಾರಿಗೆ ತರಬಹುದಾಗಿದೆ.

ಈ ಯೋಜನೆಯಲ್ಲಿ ನೀವು 7.5% ಬಡ್ಡಿದರವನು(Interest Rate) ಪಡೆದುಕೊಳ್ಳಬಹುದು ಹಾಗೂ ಇದರ ಬಡ್ಡಿ ದರದ ಅಡ್ಜಸ್ಟ್ಮೆಂಟ್ ಮೂರು ತಿಂಗಳಿಗೊಮ್ಮೆ ನಡೆಯುತ್ತದೆ. ಇನ್ನು ಹಣವನ್ನು ವಾಪಸು ಪಡೆಯಲು ನೀವು FORM 2 ಅನ್ನು ಭರಿಸಬೇಕಾಗುತ್ತದೆ. ಈ ಯೋಜನೆಯಲ್ಲಿ ಎರಡು ವರ್ಷದ ಅವಧಿಗೂ ಮುನ್ನವೇ ಅಂದರೆ Partial Withdrawal ನಿಯಮದ ಪ್ರಕಾರ ಒಂದು ವರ್ಷದ ನಂತರ ನೀವು ಹೂಡಿಕೆ ಮಾಡಿರುವ ಒಟ್ಟಾರೆ ಹಣದ 40 ಪ್ರತಿಶತ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಇದನ್ನು ಓದಿ..Law: ಬೇರೆಯೊಬ್ಬರ ಪತ್ನಿಯ ಜೊತೆ ಡಿಂಗ್ ಡಾಂಗ್ ಆಗುವವರಿಗೆ ಸಿಹಿ ಸುದ್ದಿ ಕೊಟ್ಟ ಹೈ ಕೋರ್ಟ್- ಹೊಸ ತೀರ್ಪು ಏನು ಗೊತ್ತೆ?

ಇದರ ಮೆಚುರಿಟಿ ಅವಧಿ ಎರಡು ವರ್ಷಕ್ಕಿಂತ ಮುಂಚೆನೆ ಹಣವನ್ನು ನೀವು ಪಡೆದುಕೊಂಡು ಖಾತೆಯನ್ನು ಮುಚ್ಚಬಹುದಾಗಿದೆ. ಕೆಲವೊಮ್ಮೆ ಮರಣ ಹೊಂದಿದರೆ ಹಾಗೂ ಯಾವುದಾದರೂ ಮಾರಣಾಂತಿಕ ಆರೋಗ್ಯ ಸಮಸ್ಯೆ ಇದ್ದರೆ ಆ ಸಂದರ್ಭದಲ್ಲಿ ನೀವು ಈ ರೀತಿ ಮಾಡಬಹುದಾಗಿದೆ ಆದರೆ ಈ ಸಂದರ್ಭದಲ್ಲಿ ನೀವು 2% ಕಡಿಮೆ ಬಡ್ಡಿ ಅಂದರೆ 5.5 ಪ್ರತಿಶತ ಬಡ್ಡಿಯನ್ನು ಪಡೆದುಕೊಳ್ಳುತ್ತೀರಿ. ಇನ್ನು ಈ ಯೋಜನೆಯಲ್ಲಿ ಯಾವುದೇ ಶುಲ್ಕದ ವಿನಾಯಿತಿ ಇರುವುದಿಲ್ಲ. ಟ್ಯಾಕ್ಸ್ ಸ್ಲಾಬ್ ಆಧಾರದ ಮೇಲೆ ನಿಮಗೆ ಬಡ್ಡಿ ಸೇರಿದಂತೆ ಒಟ್ಟಾರೆ ಬಂದಿರುವಂತಹ ಹಣದಲ್ಲಿ TDS ನಿಯಮದ ಅನ್ವಯವಾಗಿ ಶುಲ್ಕವನ್ನು ನೀವು ಸರ್ಕಾರಕ್ಕೆ ಕಟ್ಟಬೇಕಾಗುತ್ತದೆ. ಇದನ್ನು ಓದಿ..Honda Dio: ಬೆಲೆ ಎಲ್ಲಾ ಸ್ಕೂಟರ್ ಗಳು ಲಕ್ಷ ದಾಟುತ್ತಿದ್ದರೇ, ಹೊಸ ಅವತಾರದಲ್ಲಿ ಬಂದ ಹೋಂಡಾ ಡಿಯೋ ಬೆಲೆ ಎಷ್ಟು ಕಡಿಮೆ ಗೊತ್ತೇ?

Best News in Kannadabest saving Schemes in kannadahow to earn money in kannadaHow to save money in kannadakannada livekannada moneyKannada NewsKannada Trending Newslive newsLive News Kannadalive trending newsmahila samman schememoney kannadamoney saving in kannadaNews in Kannadasaving Schemes in kannadatop news kannada