ಎದುರಿಗಿದ್ದ ವ್ಯಕ್ತಿಯ ಮನಸನು ನೋಡಿದ ಕೂಡಲೇ ಅರ್ಥ ಮಾಡಿಕೊಳ್ಳಬೇಕಾ? ಹಾಗಾದರೆ ಗಮನವಿಟ್ಟು ಈ ಅಂಶಗಳನ್ನು ಪಾಲಿಸಿ.

ನಮಸ್ಕಾರ ಸ್ನೇಹಿತರೇ ಕೆಲವರು ನಂಬಿ ಮೋಸ ಹೋಗುತ್ತೇವಲ್ಲ, ಅದು ಅವರ ಮಾತು ಹಾಗೂ ನಡೆನುಡಿಗಳಿಂದ ಎಂಬುದು ಸತ್ಯ, ಆದರೆ ನಾವು ಅವರನ್ನು ಸರಿಯಾಗಿ ಗಮನಿಸದೇ ಅವರನ್ನು ನಂಬಿದ್ದೇವೆ, ಅವರ ಸಹವಾಸ ಮಾಡಿದ್ದೇವೆ ಎಂದು ಅರ್ಥ. ಒಬ್ಬ ವ್ಯಕ್ತಿಯನ್ನು ಸರಿಯಾಗಿ ಗಮನಿಸಿದರೆ ಅವರ ಬಗ್ಗೆ ಸ್ವಲ್ಪವಾದರೂ ಮೊದಲೇ ತಿಳಿದುಕೊಳ್ಳಬಹುದು. ಹಾಗಾದರೆ ಅದನ್ನು ತಿಳಿದುಕೊಳ್ಳುವುದು ಹೇಗೆ ಇಲ್ಲಿದೇ ನೋಡಿ ಉಪಾಯಗಳು.

ಒಬ್ಬ ವ್ಯಕ್ತಿಯ ಹಾವ ಭಾವ, ನಡತೆ, ಕೈ ಸನ್ಹೆ ಇವುಗಳನ್ನು ನೋಡಿಯೇ ಆ ವ್ಯಕ್ತಿ ಎಂಥವನು ಎಂದು ನಿರ್ಧರಿಸಲು ಸಾಧ್ಯವಾಗುತ್ತದೆ. ಅದು ಹೇಗೆ ಎಂಬುದನ್ನು ನೋಡೋಣ. ಮೊದಲನೆಯದಾಗಿ ಎದುರಿಗಿರುವ ವ್ಯತಿ ಆಗಾಗ ಮೂಗನ್ನು ಮುಟ್ಟಿಕೊಳ್ಳುತ್ತಾ, ಮೂಗನ್ನು ತಿಕ್ಕಿಕೊಳ್ಳುತ್ತಾ ಇದ್ದಾನೆಯೇ ಗಮನಿಸಿ, ಹಾಗೆ ಮಾಡಿದರೆ ಆ ವ್ಯಕ್ತಿಯಲ್ಲಿ ನಕಾರಾತ್ಮಕತೆ ಹೆಚ್ಚಾಗಿದೆ ಎಂದು ಅರ್ಥ. ಯಾವುದೇ ವ್ಯಕ್ತಿ ಬುಜಗಳನ್ನು ಹಿಂದೆ ಮಾಡಿ ನಡೆಯುತ್ತಾನೆ ಎಂದಾದರೆ ಆತ ಧೈರ್ಯಶಾಲಿ, ಶಕ್ತಿಶಾಲಿ ಎಂದರ್ಥ. ಕಿವಿಯನ್ನು ಆಗಾಗ ಮುಟ್ಟಿ ನೊಡಿಕೊಂಡರೆ ಆತ ನಿರ್ಣಾಯಕ ವ್ಯಕ್ತಿತ್ವ ಹೊಂದಿಲ್ಲ ಎಂದರ್ಥ.

ಎದುರಿಗಿದ್ದ ವ್ಯಕ್ತಿಯ ಮನಸನು ನೋಡಿದ ಕೂಡಲೇ ಅರ್ಥ ಮಾಡಿಕೊಳ್ಳಬೇಕಾ? ಹಾಗಾದರೆ ಗಮನವಿಟ್ಟು ಈ ಅಂಶಗಳನ್ನು ಪಾಲಿಸಿ. 2

ಇನ್ನು ಯಾರನ್ನಾದರೂ ಹೊಗಳಿದರೆ ತಲೆ ತಗ್ಗಿಸುತ್ತಾರಾ? ಅವರಲ್ಲಿ ಆತ್ಮವಿಶ್ವಾಸದ ಕೊರತೆ ಹಾಗೂ ನಾಚಿಕೆ ಸ್ವಭಾವ ಇದೆ ಎಂದೇ ಅರ್ಥ. ಯಾರಾದರೂ ನೀವು ಮಾತನಾಡುವಾಗ ಕುತ್ತಿಗೆ ಕೆರೆದುಕೊಳ್ಳುತ್ತಾರೆ ಎಂದಾದರೆ ಅವರಿಗೆ ನಿಮ್ಮ ಮಾತುಗಳನ್ನು ಕೇಳಿಸಿಕೊಳ್ಳಲು ಇಷ್ಟವಿಲ್ಲ ಎಂದು ಊಹಿಸಬಹುದು. ಹಾಗೆಯೇ ಕಾಲಿನ ಮೇಲೆ ಕೈ ಇಟ್ಟು ಓರೆಯಾಗಿ ಕುಳಿತುಕೊಂಡಿದ್ದರೆ ಆ ವ್ಯಕ್ತಿ ಅಲ್ಲಿಂದ ಎದ್ದೇಳಲು ಸಿದ್ಧನಾಗಿದ್ದಾನೆ ಎಂದರ್ಥ. ಇನ್ನು ನಿಮ್ಮನ್ನು ಮಾತನಾಡಿಸುವಾಗ ಹೆಬ್ಬೆರಳನ್ನು ತೋರಿಸಿ ಮಾತನಾಡಿದರೆ ನಿಮ್ಮ ಬಗ್ಗೆ ಆತನಿಗೆ ಹೆಚ್ಚಿನ ಗೌರವ ಇಲ್ಲವೆಂದೇ ಅರ್ಥ ಮಾಡಿಕೊಳ್ಳಬಹುದು.

ಇನ್ನು ವ್ಯಕ್ತಿಯ ಕಣ್ಣುಗಳೂ ಕೂಡ ಅವರ ಮಾತಿನಲ್ಲಿರುವ ಸತ್ಯಾಸತ್ಯತೆಗಳ ಬಗ್ಗೆ ಸೂಚನೆ ಕೊಡುತ್ತವೆ. ನಿಮ್ಮ ಮಾತಿಗೆ ತಲೆ ಅಲ್ಲಾಡಿಸಿದರೆ ನಿಮ್ಮ ಮಾತನ್ನು ಒಪ್ಪಿದ್ದಾರೆಂದೂ, ತಲೆ ದೂಗಿದರೆ ನಿಮ್ಮ ಮಾತನ್ನು ಕೇಳಲು ಇಷ್ಟವಿಲ್ಲದಿದ್ದರೂ ನಿಮಗೆ ಬೇಸರವಾಗಬಾರದು ಎನ್ನುವ ಕಾರಣಕ್ಕೆ ಜೊತೆಯಲ್ಲಿದ್ದಾರೆಂದು ಅರ್ಥ ಮಾಡಿಕೊಳ್ಳಬಹುದು. ಹೀಗೆ ದೀರ್ಘವಾಗಿ ಗಮನವಿಟ್ಟು ನೋಡಿದಾಗ ವ್ಯಕ್ತಿಯ ಸ್ವಭಾವದ ಬಗ್ಗೆ ಗೊತ್ತಾಗುತ್ತದೆ.