Motorola: ಭಾರತದಲ್ಲಿ ಮಾರಾಟ ಆರಂಭಿಸಿದ ಮೋಟೋಟೋಲ- ರೇಜರ್ 40 ಸರಣಿ ಮೊಬೈಲುಗಳ ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.

Motorola: ಮೊಬೈಲ್ ಅನ್ನು ಮೊದಲ ಬಾರಿಗೆ ಪ್ರಾರಂಭಿಸಿದ ಕಂಪನಿ ಆಗಿರುವಂತಹ ಮೋಟರಲ್ಲ ಈಗ ಭಾರತದಲ್ಲಿ ತನ್ನ ರೇಜರ್ 40 ಸರಣಿ(Razor 40 Series) ಫೋನುಗಳನ್ನು ಅಧಿಕೃತವಾಗಿ ಲಾಂಚ್ ಮಾಡಿದೆ. ಇದರಲ್ಲಿ ಎರಡು ವೇರಿಯಂಟ್ಗಳನ್ನು ಕೂಡ ನಾವು ಕಾಣಬಹುದಾಗಿದೆ. ರೇಜರ್ 40 ಹಾಗೂ ರೇಜರ್ 40 Ultra ಎನ್ನುವಂತಹ ಹೆಸರುಗಳನ್ನು ಇವುಗಳಿಗೆ ಇಡಲಾಗಿದೆ. ಬನ್ನಿ ಇವುಗಳ ವಿಶೇಷತೆಗಳನ್ನು ಹಾಗೂ ಗುಣಲಕ್ಷಣಗಳನ್ನು ಒಂದೊಂದಾಗಿ ತಿಳಿದುಕೊಳ್ಳೋಣ. Razor 40Ultra ನಲ್ಲಿ ನೀವು 3.6 ಇಂಚಿನ ಔಟರ್ ಡಿಸ್ಪ್ಲೇ ಅನ್ನು ನೋಡಿದರೆ Razor 40 ನಲ್ಲಿ 1.5 ಇಂಚಿನ ಔಟರ್ ಡಿಸ್ಪ್ಲೇ ಅನ್ನು ನೋಡಬಹುದಾಗಿದೆ. ಹಾಗಿದ್ರೆ ಬನ್ನಿ ಒಂದೊಂದಾಗಿಯೇ ಎರಡು ಫೋನುಗಳ ವಿಶೇಷತೆಗಳನ್ನು ತಿಳಿದುಕೊಳ್ಳೋಣ.

Motorola: ಭಾರತದಲ್ಲಿ ಮಾರಾಟ ಆರಂಭಿಸಿದ ಮೋಟೋಟೋಲ- ರೇಜರ್ 40 ಸರಣಿ ಮೊಬೈಲುಗಳ ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್. 2

ಮೊದಲಿಗೆ ರೇಜರ್ 40Ultra ವಿಶೇಷತೆಗಳನ್ನು ನೋಡುವುದಾದರೆ 1056 ×1066 pixel ಸ್ಕ್ರೀನ್ ರೆಸುಲ್ಯೂಷನ್ ಅನ್ನು ಈ ಫೋನ್ ಹೊಂದಿದ್ದರೆ, 144hz ರಿಪ್ಲೇಶ್ ರೇಟ್ ಕೂಡ ಇದರ ಜೊತೆಗೆ ಕಂಡು ಬರಲಿದೆ. ಇದರ ಬ್ರೈಟ್ನೆಸ್ ಕೂಡ ಸಾಕಷ್ಟು ಪ್ರಕಾಶದಾಯಕವಾಗಿದ್ದು 1,200 ನಿಟ್ಸ್ ಬ್ರೈಟ್ನೆಸ್ ಅನ್ನು ಇದು ಹೊಂದಿದೆ. ಇದನ್ನು ಮಡಚಬಹುದಾದ ವಿಶೇಷತೆಗಳನ್ನು ಕೂಡ ಇದು ಹೊಂದಿದೆ. ಇದರ ಡಿಸ್ಪ್ಲೇ ಅಳತೆಯನ್ನು ನೋಡುವುದಾದರೆ 6.9 ಇಂಚಿನ Foldable Full HD+ ಡಿಸ್ಪ್ಲೇ ಅನ್ನು ಇದು ಹೊಂದಿದೆ. ಇದನ್ನು ಓದಿ..Social Media: ನೀವು ಮಾಡುವ ಇನ್ಸ್ಟಾಗ್ರಾಮ್, ಫೇಸ್ಬುಕ್ ನಲ್ಲಿ ಮಾಡುವ ಪೋಸ್ಟ್ ಗಳನ್ನೂ ಜಾಸ್ತಿ ರೀಚ್ ಆಗಲು ಇರುವ ಟ್ರಿಕ್ ಗಳು.

ಪ್ರೊಸೆಸರ್ ಬಗ್ಗೆ ಮಾತನಾಡುವುದಾದರೆ Snapdragon 8+ Gen 1SoC ಪ್ರೊಸೆಸರ್ ಅನ್ನು ಇದು ಹೊಂದಿದೆ. 8GB RAM ಹಾಗೂ ಇಂಟರ್ನಲ್ ಸ್ಟೋರೇಜ್ 256 GB ಇದೆ. ಕ್ಯಾಮೆರದ ವಿಚಾರಕ್ಕೆ ಬಂದರೆ Dual Rear Camera ಅನ್ನು ಇದು ಹೊಂದಿದೆ. 12MP ಸೆನ್ಸಾರ್ ಹಾಗೂ 13MP ಅಲ್ಟ್ರಾ ವೈಡ್ ಆಂಗಲ್ ಅನ್ನು ಹೊಂದಿವೆ. ಸೆಲ್ಫಿ ಕ್ಯಾಮೆರಾ ಕೂಡ ಸಖತ್ ಕ್ಲಾರಿಟಿಯನ್ನು ಹೊಂದಿದ್ದು ಇದು 32 MP ಅನ್ನು ಹೊಂದಿದೆ. 3800mah ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿರುವಂತಹ ಈ ಮೊಬೈಲ್ ಫೋನ್ 30W Wired ಹಾಗೂ 8W Wireless ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.

ಅವಿಷ್ಟು ರೇಜರ್ 40Plus ಫೀಚರ್ಸ್ಗಳಾದರೆ ಈಗ ರೇಜರ್ 40 ಫೋನಿನ ವಿಶೇಷತೆಗಳನ್ನು ತಿಳಿದುಕೊಳ್ಳೋಣ ಬನ್ನಿ. ಮೊದಲಿಗೆ ಪ್ರೊಸೆಸರ್ ವಿಚಾರಕ್ಕೆ ಬಂದರೆ Snapdragon7 Gen 1 SoC ಸಿಗುತ್ತದೆ. 6.9 ಇಂಚಿನ ಪೋಲ್ಡ್ ಡಿಸ್ಪ್ಲೇ ಅನ್ನು ಈ ವೇರಿಯಂಟ್ ಹೊಂದಿದೆ. ಇದರಲ್ಲಿ ಕೂಡ 8GB RAM ಹಾಗೂ ಇಂಟರ್ನಲ್ ಸ್ಟೋರೇಜ್ 256 ಜಿಬಿ ಸಿಗಲಿದೆ. 64 MP ಪ್ರೈಮರಿ ಕ್ಯಾಮೆರಾ ಹಾಗೂ ಸೆಕೆಂಡರಿ ಕ್ಯಾಮೆರಾ 12MP ಅಲ್ಟ್ರಾ ವೈಡ್ ಆಂಗಲ್ ನ್ನು ಹೊಂದಿದೆ. ಇದರ ಜೊತೆಗೆ 32MP ಸೆಲ್ಫಿ ಕ್ಯಾಮೆರಾವನ್ನು ಕೂಡ ನೀವು ಗಮನಿಸಬಹುದಾಗಿದೆ. 30W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುವಂತಹ ಈ ಡಿವೈಸ್ 4200Mah ಬ್ಯಾಟರಿ ಬ್ಯಾಕಪ್ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಓದಿ..Upcoming Royal Enfield: ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಲು ಬಿಡುಗಡೆಯಾಗುತ್ತಿವೆ ಟಾಪ್ 5 ರಾಯಲ್ Enfield ಬೈಕ್ ಗಳು- ಬಿಡುಗಡೆಯಾಗುತ್ತಿವೆ ಟಾಪ್ ಮಾಡೆಲ್ ಗಳು.

ಇವುಗಳ ಬೆಲೆಯನ್ನು ಕೂಡ ನೀವು ಖರೀದಿಸುವ ಮುನ್ನ ತಿಳಿದುಕೊಳ್ಳಬೇಕಾಗಿರುವುದು ಅತ್ಯಗತ್ಯವಾಗಿದೆ. Motorola Razor 40 Ultra ಫೋನಿಗೆ 8GB + 256GB ವೆರಿಂಟಿಗೆ ಮೂಲಗಳ ಪ್ರಕಾರ ತಿಳಿದು ಬಂದಿರುವ ಹಾಗೆ 89,999 ರೂಪಾಯಿ ಆಗಿದೆ. ಇವುಗಳಲ್ಲಿ ನಿಮಗೆ ಎರಡು ಬಣ್ಣದ ಆಯ್ಕೆಗಳು ಕೂಡ ಇರುತ್ತವೆ. ICICI BANK CREDIT CARD ಅನ್ನು ಖರೀದಿಸುವ ಸಂದರ್ಭದಲ್ಲಿ ಬಳಸಿದರೆ ನಿಮಗೆ 7,000 ರೂಪಾಯಿಗಳ ರಿಯಾಯಿತಿ ಕೂಡ ದೊರಕುತ್ತದೆ. Razor 40 ಸ್ಮಾರ್ಟ್ ಫೋನ್ ಬೆಲೆಯ ಬಗ್ಗೆ ಮಾತನಾಡುವುದಾದರೆ ಇದು ಭಾರತದಲ್ಲಿ 59,999 ರೂಪಾಯಿಗಳ ಮೌಲ್ಯಕ್ಕೆ ದೊರಕುತ್ತದೆ ಎಂದು ತಿಳಿದುಬಂದಿದೆ. ಈ ಸ್ಮಾರ್ಟ್ ಫೋನ್ ಕೂಡ ಮೂರು ಬಣ್ಣಗಳ ಆಯ್ಕೆಯಲ್ಲಿ ನಿಮಗೆ ದೊರಕುತ್ತದೆ. ಇಲ್ಲಿ ICICI ಕ್ರೆಡಿಟ್ ಕಾರ್ಡ್ ಉಪಯೋಗಿಸುವ ಮೂಲಕ 5,000ಗಳ ರಿಯಾಯಿತಿಯನ್ನು ಪಡೆದುಕೊಳ್ಳಬಹುದು. ಜುಲೈ 14ರಂದು ಇದರ ಮಾರಾಟ ಭಾರತದಲ್ಲಿ ಅಧಿಕೃತವಾಗಿ ಪ್ರಾರಂಭವಾಗಲಿದ್ದು ಅಮೆಜಾನ್(Amazon) ಅಥವಾ ಮೊಟರೊಲಾ ಸಂಸ್ಥೆಯ ಅಧಿಕೃತ ವೆಬ್ಸೈಟ್ ಮೂಲಕ ನೀವು ಇದನ್ನು ಖರೀದಿಸಬಹುದಾಗಿದೆ. ಇದನ್ನು ಓದಿ..Jobs:ಯಾವುದೇ ವಿದ್ಯಾರ್ಹತೆ ಇಲ್ಲದೆ ಇದ್ದರೂ ವಿದೇಶದಲ್ಲಿ ಕೆಲಸ ಸಿಗುತ್ತದೆ.

Best News in Kannadakannada liveKannada NewsKannada Trending Newslive newsLive News Kannadalive trending newsmobilemotorolamotorola mobilesNews in Kannadatop news kannada