ಸಿನೆಮಾಗಳಲ್ಲಿ ಕಾಮಿಡಿ ಪಾತ್ರಧಾರಿಯಾಗಿ ತೋರಿಸುವ ನಾರಾಯಣ,ನಾರಾಯಣ ಎನ್ನುವ ನಾರದ ಮುನಿ ನಿಜಕ್ಕೂ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಾರದನನ್ನು ಸಾಮಾನ್ಯವಾಗಿ ಸಿನಿಮಾಗಳಲ್ಲಿ ನೋಡಿರುತ್ತೀರಿ. ನಾರಾಯಣ ನಾರಾಯಣ ಎಂದು ಹೇಳುತ್ತಾ ತಿರುಗುವುದನ್ನು ನೋಡಿರುತ್ತೀರಿ, ಆದರೆ ನಾರದ ಒಬ್ಬ ಮುನಿ, ಆತನಿಗೆ ವಿಷ್ಣು ಮೇಲೆ ಭಕ್ತಿ ಉಂಟಾಗಿದ್ದು ಹೇಗೆ ಈ ಬಗ್ಗೆ ನಿಮಗೆಷ್ಟು ಗೊತ್ತು? ನಾರದ ಮುನಿ, ಆತನ ಹಿಂದಿನ ಜನ್ಮದಲ್ಲಿ ಒಬ್ಬ ಸಾಮಾನ್ಯ ಬಡ ಬ್ರಾಹ್ಮಣ. ಬ್ರಾಹ್ಮಣರ ಸೇವೆಯನ್ನು ಮಾಡುವ ತಾಯಿಯ ಹೊಟ್ಟೆಯಲ್ಲಿ ಜನಿಸಿ, ತನ್ನ ಜೀವನವನ್ನು ಅವರ ಸೇವೆಗಾಗಿ ದೇವರ ಪೂಜೆಗಾಗಿ ಮೀಸಲಿಟ್ಟವನು.

ಹೀಗೆ ಬ್ರಾಹ್ಮಣರ ಸೇವೆಯಿಂದ ಅವರ ಪ್ರೀತಿಗೆ ಪಾತ್ರನಾದ ನಂದ ಬ್ರಾಹ್ಮಣರು ಬೇರೆಡೆ ಹೊರಡುವಾಗ ಅವರ ಆಶೀರ್ವಾದವನ್ನು ಪಡೆಯುತ್ತಾನೆ. ಇದಾದ ಬಳಿಕ ತಾಯಿತ ಜೊತೆ ದೈವಭಕ್ತಿಯಲ್ಲಿ ಮುಳುಗಿದ್ದ ನಂದ ಒಂದು ದಿನ ತಾಯಿಯನ್ನು ಕಳೆದುಕೊಳ್ಳುತ್ತಾನೆ. ಬಳಿಕ ಕಾಡಿಗೆ ಹೋಗಿ ಶ್ರೀಕೃಷ್ಣನ ಕುರಿತು ಕಠೋರ ತಪಸ್ಸನ್ನು ಮಾಡುತ್ತಾನೆ ನಂದ. ಭಕ್ತರ ಬೇಡಿಕೆಯನ್ನುಈಡೇರಿಸುವ ಶ್ರೀಕೃಷ್ಣನು ತನ್ನನ್ನು ಪೂಜಿಸುತ್ತಿರುವ ನಂದನ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷನಾಗುತ್ತಾನೆ. ಶ್ರೀಕೃಷ್ಣನನ್ನು ನೋಡಿದ ನಂದ ದೇವರ ರೂಪನೋಡಿ ದಂಗಾಗುತ್ತಾನೆ.

ಸಿನೆಮಾಗಳಲ್ಲಿ ಕಾಮಿಡಿ ಪಾತ್ರಧಾರಿಯಾಗಿ ತೋರಿಸುವ ನಾರಾಯಣ,ನಾರಾಯಣ ಎನ್ನುವ ನಾರದ ಮುನಿ ನಿಜಕ್ಕೂ ಯಾರು ಗೊತ್ತೇ?? 2

ವತ್ಸನ ಪ್ರೀತಿಗೆ ಶ್ರೀಕೃಷ್ಣನು ಭವಿಷ್ಯದಲ್ಲಿ ನೀನು ನನ್ನ ನಾರಾಯಣ ಅವತಾರದಲ್ಲಿ ನನ್ನ ಪರಮ ಭಕ್ತನಾಗಿ ಹುಟ್ಟಿ ಪ್ರಖ್ಯಾತನಾಗುತ್ತಿಯಾ ಎಂದು ವರಕೊಡುತ್ತಾನೆ. ಯುಗಗಳ ಬಳಿಕ ವಿಷ್ಣುವಿನ ನಾಭಿ ಕಮಲದಿಂದ ಬ್ರಹ್ಮ ದೇವರು ಜನಿಸುತ್ತಾರೆ. ಮಹಾವಿಷ್ಣುವಿನ ವರದಾನವಿದ್ದ ನಂದನು ಬ್ರಹ್ಮನ ಅತೀಂದ್ರಿಯ ಮಾನಸ ಪುತ್ರನಾಗಿ ಜನಿಸುತ್ತಾನೆ ನಂದ. ಆತನೇ ದೇವರ್ಷಿ ನಾರದ. ಶ್ರೀನಾರಾಯಣನ ಆಪ್ತ ಭಕ್ತನಾಗಿ ವೀಣೆ ಹಿಡಿದು ಭೂಲೋಕ, ದೇವಲೋಕದಾದ್ಯಂತ ನಾರಾಯಣನ ಯಶೋಗಾಥೆಯನ್ನು ಸಾರುತ್ತಾ ಸಂಚರಿಸುತ್ತಾ ನಾರದ ಎಂದು ಖ್ಯಾತಿಯನ್ನು ಗಳಿಸುತ್ತಾನೆ.
ಕೇಳಿದರಲ್ಲಾ ಸ್ನೇಹಿತರೆ, ಶ್ರೀದೇವರಿಗೆ ಭಕ್ತಿಯಿಂದ ಪೂಜಿಸಿದರೆ ಯಾವ ಅಪೇಕ್ಷೆಯೂ ಇಲ್ಲದೇ ಧ್ಯಾನಿಸಿದರೆ ಅವನ ಕೃಪಾಕಟಾಕ್ಷ ಎಂದಿಗೂ ನಾವು ಭಾಜನರಾಗಬಹುದು.