PUC ಉದ್ಯೋಗ ಹುಡುಕುತ್ತಿರುವವರಿಗೆ ಭಾರತೀಯ ನೌಕಪಡೆಯಲ್ಲಿ ಗುಡ್ ನ್ಯೂಸ್ – ಖಾಲಿ ಇವೆಯಂತೆ 2500 ಹುದ್ದೆಗಳು.

ನಮಸ್ಕಾರ ಸ್ನೇಹಿತರೇ ಕೋರೋನಾ ಕಾಲದಲ್ಲಿ ಆರ್ಥಿಕ ನಷ್ಟ, ಉದ್ಯೋಗ ನಷ್ಟಗಳು ಸಾಮಾನ್ಯವಾಗಿ ಕೇಳಿ ಬರುತ್ತಿರುವ ಮಾತು. ಆದರೇ ಪಿಯುಸಿ ಮುಗಿಸಿರುವವರಿಗೆ ಸದ್ಯ ಭಾರತ ನೌಕಾದಳ ಒಂದು ಗುಡ್ ನ್ಯೂಸ್ ನೀಡಿದೆ. ಶೀಘ್ರದಲ್ಲಿಯೇ ನೌಕಾದಳದಲ್ಲಿ ಶೀಘ್ರದಲ್ಲಿಯೇ 2500 ಹುದ್ದೆಗಳನ್ನ ನೇಮಕ ಮಾಡಿಕೊಳ್ಳುತ್ತಿರುವುದಾಗಿ ತಿಳಿದು ಬಂದಿದೆ. ನಾವಿಕ ಹಾಗೂ ಎಸ್ ಎಸ್ ಆರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು , ಅರ್ಜಿ ಹಾಕಲು ಕೊನೆ ದಿನ ಅಕ್ಟೋಬರ್ 25 ಕೊನೆ ದಿನವಾಗಿದೆ.

ಒಟ್ಟು 2500 ನಾವಿಕ ಹುದ್ದೆಗಳು ಇವೆ. ನಾವಿಕ ಹುದ್ದೆಗೆ ಅರ್ಜಿ ಹಾಕಲು ಈ ಕೆಳಕಂಡ ಅರ್ಹತೆಗಳು ನಿಮ್ಮ ಬಳಿ ಇರಬೇಕು. ಬನ್ನಿ ಆ ಅರ್ಹತೆಗಳನ್ನ ತಿಳಿಯೋಣ – ನಾವಿಕ ಹುದ್ದೆಗೆ ನೀವು ಅರ್ಜಿ ಸಲ್ಲಿಸಲು ನೀವು ಪಿಯುಸಿ (ವಿಜ್ಞಾನ) ವಿಭಾಗದಲ್ಲಿ ಪಾಸ್ ಆಗಿರಬೇಕು. ನಿಮ್ಮ ಎತ್ತರ ಕನಿಷ್ಠ 157 ಸೆಂಟಿ ಮೀಟರ್ ಇರಬೇಕು. ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು 01-02-2002 ರಿಂದ 31-01-2005 ರ ನಡುವೆ ಜನಿಸಿರಬೇಕು. ಇದಲ್ಲದೇ ಈ ಹುದ್ದೆಗಳಿಗೆ ಯಾವುದೇ ಕೇವಲ ಆನಲೈನ್ ನಲ್ಲಿ ಮಾತ್ರಅರ್ಜಿಯನ್ನು ಹಾಕಬೇಕು. ಆನಲೈನ್ ನಲ್ಲದೇ ಬೇರೆ ಯಾವುದೇ ಮಾದರಿಯಲ್ಲಿ ಅರ್ಜಿಯನ್ನ ಸಲ್ಲಿಸಬಾರದು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ನಿಗದಿತ ವಿದ್ಯಾರ್ಹತೆಯ ಅಂಕಗಳನ್ನ ಪರಿಗಣಿಸಿ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಆ ನಂತರ ಮುಂದಿನ ಸಂದರ್ಶನಕ್ಕೆ ಹಾಗೂ ದೈಹಿಕ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ.

ಅಕ್ಟೋಬರ್ 16 ರಿಂದಲೇ ಈ ಹುದ್ದೆಗೆ ಆನಲೈನ್ ಅರ್ಜಿ ಸಲ್ಲಿಸಲು ಆರಂಭವಾಗಿದ್ದು, ಅಕ್ಟೋಬರ್ 25 ಕೊನೆ ದಿನಾಂಕವಾಗಿದೆ. ಈ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ನೌಕಾದಳದ ಅಧೀಕೃತ ವೆಬ್ ಸೈಟ್ ಆಗಿರುವ ಜಾಯಿನ್ ನೇವಿಗೆ ಭೇಟಿ ನೀಡಬಹುದು. ಈ ಸಂಭಂದ ಮೆರಿಟ್ ಲಿಸ್ಟ್ ನ್ನು ಮುಂದಿನ ವರ್ಷ ಫೆಬ್ರವರಿ ಹಾಗೂ ಮಾರ್ಚ್ ನಲ್ಲಿ ಬಿಡುಗಡೆಗೊಳಿಸುವುದಾಗಿ ನೌಕಾದಳ ಸ್ಪಷ್ಠಪಡಿಸಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ವೇಳೆ , ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ ಅಥವಾ ಪಾಸಿಂಗ್ ಸರ್ಟಿಫಿಕೇಟ್, ಆಧಾರ್ ಕಾಡ್, ದೈಹಿಕ ಪ್ರಮಾಣ ಪತ್ರ, ಹಾಗೂ ಇತರ ಅವಶ್ಯಕ ಪತ್ರಗಳನ್ನ ಇಟ್ಟುಕೊಳ್ಳುವುದು ಅವಶ್ಯವಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ. ಈ ಮಾಹಿತಿಯನ್ನು ಹೆಚ್ಚೆಚ್ಚು ಶೇರ್ ಮಾಡಿ.