ನಿಮ್ಮ ಕತ್ತು ಕೂಡ ಕಪ್ಪಾಗಿದೆಯೇ?? ಏನು ಮಾಡಿದರೂ ಸರಿ ಹೋಗಿಲ್ಲ ಎಂದರೇ, ಈ ಮನೆಮದ್ದು ಟ್ರೈ ಮಾಡಿ, ಕತ್ತು ಬೆಳ್ಳಗಾಗುತ್ತದೆ.

ನಮಸ್ಕಾರ ಸ್ನೇಹಿತರೇ ಮುಖದಲ್ಲಿ ಕಲೆಗಳಿರಬಾರದು, ಮುಖ ಹೊಳೆಯುತ್ತಿರಬೇಕು, ಕಪ್ಪಾಗಿರಬಾರದು ಎನ್ನುವುದು ಎಲ್ಲರ ಆಶಯ. ಇದಕ್ಕಾಗಿ ಬೇರೆ ಬೇರೆ ಮನೆ ಮದ್ದುಗಳನ್ನೋ ಅಥವಾ ರಾಸಾಯನಿಕ ಮಿಶ್ರಿತ ಸೌಂದರ್ಯ ವರ್ಧಕಗಳನ್ನೋ ಬಳಸುತ್ತಾರೆ. ಕೆಲವೊಮ್ಮೆ ಉತ್ತಮ ಪರಿಣಾಮವೂ ಕೂಡ ಸಿಗಬಹುದು. ಆದರೆ ಕೆಲವೊಮ್ಮೆ ಕತ್ತಿನ ಕೆಳಗೆ, ಕುತ್ತಿಗೆಯ ಸುತ್ತಲಿನ ಭಾಗ ಕಪ್ಪಾಗಿರುತ್ತದೆ. ಇದನ್ನು ನೋಡುವುದಕ್ಕೂ ಅಸಹ್ಯ ಎನಿಸುತ್ತದೆ. ಹಾಗಾದರೆ ಇದಕ್ಕೆ ಪರಿಹಾರವೇನು? ಬನ್ನಿ ನೋಡೋಣ..

ಕತ್ತು ಕಪ್ಪಾಗಿದ್ದು ಮುಖ ಬೆಳ್ಳಗಿದ್ದರೆ ನೋಡುವುದಕ್ಕೆ ಚಂದ ಎನಿಸುವುದಿಲ್ಲ. ಹಾಗೆಯೇ ನಿಮಗೆ ಬೇಕಾದ ಬಟ್ಟೆ ಧರಿಸಲು ಕೂಡ ಸಾಧ್ಯವಿಲ್ಲ. ಇದಕ್ಕಾಗಿ ಕೆಲವೊಮ್ಮೆ ಎಷ್ಟೇ ಔಷಧಿ ಮಾಡಿದರೂ ಕೂಡ ಪ್ರಯೋಜನವಾಗುವುದೆ ಇಲ್ಲ. ಇದು ಚರ್ಮದ ಅಲರ್ಜಿಯ ಒಂದು ಲಕ್ಷಣವೂ ಆಗಿದ್ದು ಕೆಲವೊಮ್ಮೆ ಯಾವ ರಾಸಾಯನಿಕ ಔಷಧಗಳೂ ಪರಿಣಾಮ ಬೀರುವುದಿಲ್ಲ. ನಾವಿಲ್ಲಿ ಕೆಲವೊಂದು ಪರಿಹಾರವನ್ನು ಹೇಳಿದ್ದೇವೆ. ಒಮ್ಮೆ ಪ್ರಯತ್ನಿಸಿ ನೋಡಿ.

ಶುದ್ಧ, ಹಾಗೂ ಸ್ವಚ್ಛವಾಗಿರುವುದು ತುಂಬಾನೇ ಮುಖ್ಯ. ಪ್ರತಿಬಾರಿ ಮುಖ ತೊಳೆದಾಗ ಕತ್ತಿನ ಭಾಘವನ್ನೂ ಕೂಡ ಮರೆಯದೇ ತೊಳೆದುಕೊಳ್ಳಬೇಕು. ಸಾಮಾನ್ಯವಾಗಿ ಮುಖವನ್ನು ಮಾತ್ರ ತೊಳೆದುಕೊಳ್ಳುತ್ತೇವೆ. ಆದರೆ ಇನ್ನು ಮುಂದೆ ತಪ್ಪದೇ ಕತ್ತಿನ ಭಾಗವನ್ನೂ ತೊಳೆದು ಸ್ವಚ್ಛವಾದ ಬಟ್ಟೆಯಿಂದ ಒರೆಸಿಕೊಳ್ಳಿ. ಮುಖಕ್ಕೆ ಫೇಶಿಯಲ್ ಮಸಾಜ್ ಮಾಡಿಕೊಂಡರೆ ಕುತ್ತಿಗೆ ಭಾಗಕ್ಕೂ ಚೆನ್ನಾಗಿ ಮಸಾಜ್ ಮಾಡಿ. ಇನ್ನು ಸ್ನಾನ ಮಾಡುವಾಗ ಮೃದುವಾದ ಬ್ರಶ್ ಬಳಸಿ ಕತ್ತಿನ ಭಾಗವನ್ನು ತಿಕ್ಕಿ. ಇದರಿಂದ ಜಿಡ್ಡು, ಧೂಳು ಎಲ್ಲವೂ ಹೋಗುತ್ತದೆ. ಮುಖಕ್ಕೆ ಪೌಂಡೇಶನ್ ಕ್ರೀಮ್, ಮಾಯಿಶ್ವರೈಸರ್ ಹಚ್ಚಿದರೆ ತಪ್ಪದೇ ಕತ್ತಿನ ಭಾಗಕ್ಕೂ ಹಚ್ಚಿ. ಇದರಿದ ಮುಖ ಹಾಗೂ ಕತ್ತು ಒಂದೇ ಬಣ್ಣದಲ್ಲಿ ಕಾಣಿಸುತ್ತದೆ. ಸೂರ್ಯನ ಗಾಢ ಬಿಸಿಲಿಗೆ ನೀವು ತೆರೆದುಕೊಳ್ಳುವಿರಾದರೆ ಸನ್ ಸ್ಕ್ರೀನ್ ಲೋಶನ್ ನ್ನು ಹಚ್ಚಲು ಮರೆಯಬಾರದು. ಇನ್ನು ಮನೆಮದ್ದು ಎಂದರೆ ಸೌತೆಕಾಯಿ ತುಂಡುಗಳನ್ನು ಕತ್ತಿನ ಭಾಗಕ್ಕೆ ಉಜ್ಜಿ ಅಥವಾ ಸೌತೆಕಾಯಿ ರಸವನ್ನು ಲೇಪಿಸಿಕೊಳ್ಳಿ. ಇದರಿಂದ ಕತ್ತಿನ ಭಾಗ ಸ್ವಚ್ಛವಾಗುತ್ತದೆ.