ಅತಿ ಹೆಚ್ಚು ಮೊತ್ತಕ್ಕೆ ಹರಾಜಾದ ಪ್ರಧಾನಿ ಮೋದಿಯವರಿಗೆ ನೀಡಿದ ಗಿಫ್ಟ್ ಯಾವುದು ಗೊತ್ತಾ?? ಎಷ್ಟು ಕೋಟಿ ಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ದೊಡ್ಡವರು, ಪ್ರಭಾವಿಗಳು ಅಂದರೇನೆ ಹಾಗೆಯೇ. ಅವರು ಉಡುಗೊರೆಗಳನ್ನ ನೀಡುವುದಕ್ಕಿಂತ ಸ್ವೀಕರಿಸುವುದೇ ಹೆಚ್ಚು. ಕೆಲವೊಮ್ಮೆ ಕಡಿಮೆ ಮೊತ್ತದ ಉಡುಗೊರೆಗಳನ್ನ ಸ್ವೀಕರಿಸಿದರೇ, ಇನ್ನು ಕೆಲವೊಮ್ಮೆ ದುಬಾರಿ ಮೊತ್ತದ ಉಡುಗೊರೆಗಳನ್ನು ಸ್ವೀಕರಿಸುವಂತಹ ಪ್ರಸಂಗಗಳು ಬರುತ್ತವೆ. ಆದರೇ ಎಲ್ಲರಿಗಿಂತ ವಿಭಿನ್ನವಾಗಿ ಯೋಚಿಸುವ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮಗೆ ಉಡುಗೊರೆಯಾಗಿ ಬಂದ ವಸ್ತುಗಳನ್ನ ಪ್ರತಿ ವರ್ಷ ಸಾಮೂಹಿಕ ಹರಾಜಿಗಿಡುತ್ತಾರೆ. ಅದರಿಂದ ಬರುವ ದುಡ್ಡನ್ನ ಗಂಗಾ ನದಿ ಶುದ್ಧೀಕರಣ ಹಾಗೂ ಸಂರಕ್ಷಣೆಗೆ ಬಳಸಲು ನೀಡಲಾಗುತ್ತದೆ.

ಈ ಭಾರಿ ಹರಾಜಿನಲ್ಲಿ ರೂಪಾಯಿ 200 ರಿಂದ ಹಿಡಿದು 1 ಕೋಟಿ ರೂ ವರೆಗಿನ ಉಡುಗೊರೆಗಳನ್ನ ಹರಾಜಿಗಿಡಲಾಗಿತ್ತು. ಒಟ್ಟು ಸುಮಾರು 1348 ಸ್ಮರಣಿಕೆಗಳನ್ನ ಹರಾಜಿನಲ್ಲಿ ಪಟ್ಟಿ ಮಾಡಲಾಗಿತ್ತು. ಇನ್ನು ಈ ಭಾರಿಯ ವಿಶೇಷವೆಂದರೇ ಟೋಕಿಯೋ 2020 ರ ಒಲಂಪಿಕ್ಸ್ ಹಾಗೂ ಪ್ಯಾರಾ ಒಲಂಪಿಕ್ಸ್ ನಲ್ಲಿ ಗೆದ್ದ ಕ್ರೀಡಾಪಟುಗಳು ಪ್ರಧಾನಿ ನರೇಂದ್ರ ಮೋದಿಯವರನ್ನ ಭೇಟಿಯಾದಾಗ ಅವರಿಗೆ ನೆನಪಿನ ಕಾಣಿಕೆಯಾಗಿ ಉಡುಗೊರೆಗಳನ್ನ ನೀಡಿದ್ದರು. ಆ ಉಡುಗೊರೆಗಳನ್ನು ಸಹ ಈ ಭಾರಿ ಹರಾಜಿನ ಪಟ್ಟಿಯಲ್ಲಿ ಸೇರಿಸಲಾಗಿತ್ತು.

ಈ ಹರಾಜಿನಲ್ಲಿ ಟೋಕಿಯೋ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪರ ಚಿನ್ನದ ಪದಕ ಗೆದ್ದ ಹುಡುಗ ನೀರಜ್ ಚೋಪ್ರಾರವರ ಜಾವೆಲಿನ್ ಸಹ ಇತ್ತು. ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ನಲ್ಲಿ ಹರಾಜು ನಡೆಯಿತು. ನೀರಜ್ ಚೋಪ್ರಾ ತನ್ನ ಚಿನ್ನದ ಪದಕವನ್ನ ಪ್ರಧಾನಿಗೆ ತೋರಿಸುವ ಸಂದರ್ಭದಲ್ಲಿ ತಾವು ಅಂದು ಎಸೆದ ಜಾವೆಲಿನ್ ನನ್ನು ಉಡುಗೊರೆಯಾಗಿ ನೀಡಿದ್ದರು. ಇಂದು ಹರಾಜಿನ ಪಟ್ಟಿಯಲ್ಲಿದ್ದ ಆ ಜಾವೆಲಿನ್ ಬರೋಬ್ಬರಿ 1 ಕೋಟಿ ರೂಪಾಯಿಗೆ ಹರಾಜಾಗಿದೆ. ಈ ಮೂಲಕ ಅತಿ ಹೆಚ್ಚಿನ ಮೊತ್ತಕ್ಕೆ ಹರಾಜಾದ ಪ್ರಧಾನಿಗಳ ಉಡುಗೊರೆ ಎಂಬ ಲಿಸ್ಟ್ ನಲ್ಲಿ ಹೆಸರು ಪಡೆದಿದೆ. ಒಟ್ಟಿನಲ್ಲಿ ಸ್ವೀಕರಿಸಿದ ಉಡುಗೊರೆಗಳನ್ನ ಧೂಳು ಹಿಡಿಯಲು ಬಿಡದೇ, ಅವುಗಳನ್ನ ಹರಾಜು ಹಾಕಿ, ಅದರ ಮೂಲಕ ಬರುವ ದುಡ್ಡಿನಿಂದ ಗಂಗಾ ನದಿ ಸಂರಕ್ಷಣೆ ಹಾಗೂ ಶುದ್ಧೀಕರಣಕ್ಕೆ ಬಳಸುವ ಮೋದಿಯವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭರಪೂರ ಮೆಚ್ಚುಗೆ ಬಂದಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.