News: ಸತೀಶ್ ಜಾರಕಿಹೊಳಿ ಮೇಲೆ ಹೊಸ ಬಾಣ ಬಿಟ್ಟ ಯತ್ನಾಳ್- ಗೃಹ ಸಚಿವರ ಮೇಲೆ ಒತ್ತಾಯಿಸಿದ್ದು ಏನು ಗೊತ್ತೆ?? ಇದು ಕೂಡ ಸರಿ ಅಲ್ಲವೇ ಎಂದ ನೆಟ್ಟಿಗರು.

News: ರಾಜ್ಯ ಸರ್ಕಾರವು 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅದರಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲು ಸಿದ್ಧತೆಗಳು ನಡೆಯುತ್ತಿದ್ದು, ಇದಕ್ಕೆ ಆನ್ಲೈನ್ ಅರ್ಜಿ ಸಲ್ಲಿಸಬೇಕು ಎನ್ನಲಾಗಿತ್ತು. ಆದರೆ ಈಗ ಅರ್ಜಿ ಸಲ್ಲಿಸಲು ಸರ್ವರ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವ ಸಮಸ್ಯೆ ಶುರುವಾಗಿದೆ. ಇದರ ಬಗ್ಗೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಅವರು ಪ್ರತಿಕ್ರಿಯಿಸಿ, ಸರಿಯಾದ ಸಿದ್ಧತೆಗಳನ್ನು ಮಾಡಿಕೊಳ್ಳದೆ ಯೋಜನೆಗಳನ್ನು ಜಾರಿಗೆ ತರುತ್ತಿರುವುದರಿಂದ ಹೀಗಾಗಿದೆ ಎಂದಿದ್ದರು.

News: ಸತೀಶ್ ಜಾರಕಿಹೊಳಿ ಮೇಲೆ ಹೊಸ ಬಾಣ ಬಿಟ್ಟ ಯತ್ನಾಳ್- ಗೃಹ ಸಚಿವರ ಮೇಲೆ ಒತ್ತಾಯಿಸಿದ್ದು ಏನು ಗೊತ್ತೆ?? ಇದು ಕೂಡ ಸರಿ ಅಲ್ಲವೇ ಎಂದ ನೆಟ್ಟಿಗರು. 2

ಆದರೆ ಸತೀಶ್ ಜಾರಕಿಹೊಳಿ ಅವರು ಈ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟು, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಸರ್ವರ್ ಹ್ಯಾಕ್ ಮಾಡಿರುವ ಕಾರಣಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಇವಿಎಂ ಮಷಿನ್ ಥರ ನಮ್ಮ ಮಷಿನ್ ಕೂಡ ಹ್ಯಾಕ್ ಮಾಡಿದೆ ಕೇಂದ್ರ ಸರ್ಕಾರ ಅದರಿಂದಲೇ ಇಷ್ಟೆಲ್ಲ ಸಮಸ್ಯೆ. ಆನ್ಲೈನ್ ಆಗದೆ ಹೋದರೆ, ಕೈಯಲ್ಲಿ ಬರೆದ ಅರ್ಜಿಗಳನ್ನು ಸ್ವೀಕರಿಸುತ್ತೇವೆ, ಒಂದು ತಿಂಗಳು ಲೇಟ್ ಆಗಬಹುದು, ಲಕ್ಷ್ಮಿ ಹೆಬ್ಬಾಳ್ಕರ್ ಮೇಡಂ ಅವರ ಡಿಪಾರ್ಟ್ಮೆಂಟ್ ಆಪ್ ಕೂಡ ಕೇಂದ್ರ ಸರ್ಕಾರದಿಂದ ಹ್ಯಾಕ್ ಮಾಡಲಾಗಿದೆ. ಇದೆಲ್ಲಾ ಏನೇ ಮಾಡಿದರೂ ನಾವು ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದಿದ್ದರು.. ಇದನ್ನು ಓದಿ..Congress: ಕರ್ನಾಟಕದಲ್ಲಿ ಬಿರುಗಾಳಿ ಎಬ್ಬಿಸುವ ಬಿಟ್ಟು ಯೋಜನೆಗಳ ನಡುವೆ ರಾಜಸ್ತಾನ್ ಕಾಂಗ್ರೆಸ್ ಅಲ್ಲಿ ಏನು ಬಿಟ್ಟಿ ಕೊಡುತ್ತಾರಂತೆ ಗೊತ್ತೇ? ಮಹಿಳೆಯರು ದಿಲ್ ಕುಶ್.

ಈ ಎಲ್ಲಾ ಹೇಳಿಕೆಗಳಿಗೆ ಈಗ ಬಸನಗೌಡ ಯತ್ನಾಳ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಚಾರದ ಬಗ್ಗೆ ಟ್ವೀಟ್ ಮಾಡಿ, “Dr G Parameshwara ರವರೇ , ನಿಮ್ಮ ಮಂತ್ರಿಗಳು “ಸೇವಾ ಸಿಂಧು” ಸರ್ವರ್ ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ ಎಂದು ಹೇಳಿದ್ದಾರೆ. ಇದು ನಿಜವೇ? ಈ ಬಗ್ಗೆ ಯಾವ ಠಾಣೆಯಲ್ಲಿ ಮೊಕದ್ದಮೆ ಧಾಖಲಾಗಿದೆ? ಕೇಂದ್ರ ಸರ್ಕಾರದ ಮೇಲೆ ಇಂತಹ ಆರೋಪಗಳನ್ನು ಮಾಡಿ ಕೇಂದ್ರ ಹಾಗು ರಾಜ್ಯದ ನಡುವಿನ ಸಂಬಂಧ ಹಾಳುಮಾಡುವುದು ದ್ರೋಹವಲ್ಲವೇ? ಸೇವಾ ಸಿಂಧು ಸರ್ವರ್ ಹ್ಯಾಕ್ ಆಗಿದ್ದೇ ಆದರೆ ಯಾವ ಸಮಯದಲ್ಲಾಗಿತ್ತು, ಯಾರಿಂದ ಅಂತ ಬಹಿರಂಗಪಡಿಸಿ.

ನಿಮ್ಮ ನಾಯಕರಾದ ಸಿದ್ದರಾಮಯ್ಯನವರು ಹೇಳಿರುವಂತೆ “Fake News” ಕಡಿವಾಣ ಹಾಕುವ ನಿಟ್ಟಿನಲ್ಲಿ ಮೊದಲ ಪ್ರಕರಣ ಸತೀಶ್ ಜಾರಕಿಹೊಳಿ ಮೇಲೆ ಧಾಖಲಿಸಿ…” ಎಂದು ಟ್ವೀಟ್ ಮಾಡಿದ್ದಾರೆ. ಇದೇ ವಿಚಾರದ ಬಗ್ಗೆ ಮತ್ತೊಂದು ಟ್ವೀಟ್ ಮಾಡಿ.. ಸಿದ್ದರಾಮಯ್ಯನವರು ನೆನ್ನೆ “Fake News” ಹರಡಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ ಎಂದಿದ್ದಾರೆ ಎಂಬ ಸುದ್ದಿ ನೋಡಿದೆ. ಇವರ ಮಂತ್ರಿ ಮಂಡಲದ ಮಂತ್ರಿ “ರಾಜ್ಯ ಸರ್ಕಾರದ ಸರ್ವರ್ ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ” ಎಂದು ಹೇಳಿರುವುದು “Fake News”. ಇಲ್ಲವೇ ಮಂತ್ರಿಗಳು ಹಾಗು ರಾಜ್ಯ ಸರ್ಕಾರ ಇದನ್ನು ಸಾಬೀತುಪಡಿಸಬೇಕು. ಪೊಳ್ಳು ಭರವಸೆಗಳನ್ನು ನೀಡಿ, ಈಡೇರಿಸಲಾಗದೆ ಈಗ ದಿನಕ್ಕೊಂದು ನೆಪ, ಹೊಸ ಕಥೆ ಹೇಳುವುದು ಕರ್ನಾಟಕ ಸರ್ಕಾರಕ್ಕೆ ರೂಢಿಯಾಗಿದೆ..” ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ. ಇದನ್ನು ಓದಿ..Elon Musk: ದಿಡೀರ್ ಎಂದು ಮೋದಿ ರವರನ್ನು ಭೇಟಿಯಾದ ಬಳಿಕ ಎಲಾನ್ ಮಸ್ಕ್ ಹೇಳಿದ್ದೇನು ಗೊತ್ತೇ??