ಭಾರತದ ಕೊರೋನಾ ಹೋರಾಟಕ್ಕೆ ಕೈಜೋಡಿಸಿದ ಪ್ಯಾಟ್ ಕಮಿನ್ಸ್ ! ಮಾಡಿದ್ದೇನು ಗೊತ್ತಾ ನಿಜಕ್ಕೂ ಗ್ರೇಟ್

ನಮಸ್ಕಾರ ಸ್ನೇಹಿತರೇ ಇದೀಗ ಇಡೀ ದೇಶವೇ ಕೊರೊನಾ ವಿರುದ್ಧ ಹೋರಾಟ ಮಾಡುತ್ತಿದೆ ಎಂದರೆ ತಪ್ಪಾಗಲಾರದು. ಮೊದಲ ಅಲೆಯಲ್ಲಿ ಪ್ರತಿಯೊಂದು ನಿರ್ಧಾರಗಳಿಗೂ ಜನರು ಕೈಜೋಡಿಸಿದ ಕಾರಣ ನಾವು ಮೊದಲ ಅಲೆ ಯನ್ನು ಗೆದ್ದಿದ್ದೆವು, ಆದರೆ ಇದೀಗ ಭಾರತ ಎರಡನೇ ಅಲೆಯ ವಿರುದ್ಧ ಸೋಲನ್ನು ಕಾಣುವ ಎಲ್ಲಾ ಸೂಚನೆಗಳು ಕಾಣಿಸುತ್ತಿವೆ ಯಾಕೆಂದರೆ ಈಗಾಗಲೇ ದಿನಕ್ಕೆ ಮೂರು ಲಕ್ಷಕ್ಕೂ ಹೆಚ್ಚು ಕೇಸುಗಳು ಭಾರತದಲ್ಲಿ ದಾಖಲಾಗುತ್ತಿವೆ.

ಇಂತಹ ಸಂದರ್ಭದಲ್ಲಿ ಸಾಮಾನ್ಯವಾಗಿಯೇ ಸೌಕರ್ಯಗಳ ಕೊರತೆ ಎದ್ದು ಕಾಣುತ್ತದೆ ಯಾಕೆಂದರೆ ಆಸ್ಪತ್ರೆಗಳು ತಮ್ಮಲ್ಲಿ ಇಟ್ಟುಕೊಂಡಿರುವ ಸೌಕರ್ಯಗಳು ಎಲ್ಲರಿಗೂ ಸರಿಯಾದ ಚಿಕಿತ್ಸೆ ನೀಡುವಲ್ಲಿ ಸಾಧ್ಯವಾಗುತ್ತಿಲ್ಲ ಆದರೆ ಇದು ಎಷ್ಟು ಸತ್ಯವೋ ಅದೇ ಸಮಯದಲ್ಲಿ ಬಹುತೇಕ ಸು’ಳ್ಳು ಸುದೀಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನಾವು ನೋಡುತ್ತಿದ್ದೇವೆ, ಒಂದು ಆಗಿದ್ದರೆ ಅದಕ್ಕೆ 10 ಸೇರಿಸಿಕೊಂಡು ಹೇಳುವ ಪ್ರಯತ್ನ ಕೂಡ ಮಾಡಲಾಗುತ್ತಿದೆ. ಆದರೆ ಈ ಎಲ್ಲ ಸುದ್ದಿಗಳ ನಡುವೆ ಎಲ್ಲರೂ ಮನೆಯಲ್ಲಿ ಇರಬೇಕು ಎಂದು ಎಲ್ಲಾ ಕಡೆಯಿಂದ ಮನವಿಗಳು ಕೇಳಿ ಬಂದಿವೆ.

ಇಂತಹ ಸಮಯದಲ್ಲಿ ಐಪಿಎಲ್ ಟೂರ್ನಿಯ ಕುರಿತು ಮಾತನಾಡುವುದಾದರೆ ಬಹುತೇಕ ಜನರು ಐಪಿಎಲ್ ಬೇಡ ಎನ್ನುತ್ತಾರೆ. ಇನ್ನು ಕೆಲವರು ನಾವು ಮನೆಯಲ್ಲಿ ಕುಳಿತಾಗ ಮನರಂಜನೆ ಇರುತ್ತದೆ ‌ಎನ್ನುತ್ತಾರೆ ಈ ಎಲ್ಲಾ ಚರ್ಚೆಗಳ ನಡುವೆ ಆಶ್ರಯ ದೇಶದಿಂದ ಬಂದಿರುವ ಐಪಿಎಲ್ ಆಟಗಾರ ಪ್ಯಾಟ್ ಕಮಿನ್ಸ್ ರವರು ಭಾರತದಲ್ಲಿ ನಡೆಯುತ್ತಿರುವ ಪ್ರತಿಯೊಂದು ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದಂತೆ ಕಾಣುತ್ತಿದೆ, ಅದಕ್ಕಾಗಿಯೇ $50000 ಅಂದರೆ ಹಿಂದಿನ ಲೆಕ್ಕಾಚಾರದ ಪ್ರಕಾರ 37 ಲಕ್ಷಕ್ಕೂ ಹೆಚ್ಚು ಭಾರತದಲ್ಲಿ ಕೊರೊನ ಪರಿಸ್ಥಿತಿಯನ್ನು ನಿಭಾಯಿಸಲು ನೀಡುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ. ಇತರ ದೇಶಗಳು ಇಲ್ಲಿ ಬಂದು ಆಟವಾಡಿ ಕೇವಲ ಹಣ ಗಳಿಸುವುದು ಅಷ್ಟೇ ಅಲ್ಲದೆ ನಮ್ಮಲ್ಲಿ ಒಬ್ಬರಾಗಿ ಇರುವುದು ನಿಜಕ್ಕೂ ಇಂತಹ ಒಳ್ಳೆಯ ವಿಷಯ ಅಲ್ಲವೇ ಸ್ನೇಹಿತರೆ